Asianet Suvarna News Asianet Suvarna News

ಅಬಕಾರಿ ಕಾಯ್ದೆ ಹಗರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು: ನಾಳೆ ಜೈಲಿನಿಂದ ಬಿಡುಗಡೆ

ದೆಹಲಿ ಅಬಕಾರಿ ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಇಂದು ಜಾಮೀನು ಮಂಜೂರಾಗಿದೆ. ಮಾರ್ಚ್‌ ತಿಂಗಳಲ್ಲಿ ಅಬಕಾರಿ ಕಾಯ್ದೆಯ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವೂ ಬಂಧಿಸಿತ್ತು.

Delhi CM Kejriwal granted bail in Excise Act scam Released from jail tomorrow akb
Author
First Published Jun 20, 2024, 8:57 PM IST

ದೆಹಲಿ ಅಬಕಾರಿ ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಇಂದು ಜಾಮೀನು ಮಂಜೂರಾಗಿದೆ. ಮಾರ್ಚ್‌ ತಿಂಗಳಲ್ಲಿ ಅಬಕಾರಿ ಕಾಯ್ದೆಯ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವೂ ಬಂಧಿಸಿತ್ತು. ಆದರೆ ಚುನಾವಣೆಯ ಸಮಯದಲ್ಲಿ ಕೆಲ ದಿನ ಬೇಲ್ ಮೇಲೆ ಹೊರಗಿದ್ದ ಅರವಿಂದ್ ಕೇಜ್ರಿವಾಲ್ ಜೂನ್ 2 ರಂದು ಮತ್ತೆ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಜೈಲಿಗೆ ಶರಣಾಗಿದ್ದರು. ಈಗ ದೆಹಲಿ ನ್ಯಾಯಾಲಯವೂ ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ನಾಳೆ ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. 

ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರು ನಾಳೆ ಮಧ್ಯಾಹ್ನದ ನಂತರ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿರುವುದರಿಂದ ಆಮ್ ಆದ್ಮಿ ಪಕ್ಷ ಹಾಗೂ ದೆಹಲಿ ಸಿಎಂಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಈಗಾಗಲೇ ಎಎಪಿಯ ಪ್ರಮುಖ ನಾಯಕರಾದ ಮನೀಶ್ ಸಿಸೋದಿಯಾ ಹಾಗೂ ಸತ್ಯೇಂದರ್ ಜೈನ್ ಅವರು ಈಗಾಗಲೇ ಜೈಲಿನಲ್ಲಿರುವುದರಿಂದ ಎಎಪಿ ಕಾರ್ಯಕರ್ತರ ಸ್ಥಿತಿ ನಾವಿಕನಿಲ್ಲದ ಹಡಗಿನಂತಾಗಿತ್ತು. ಆದರೆ ಈಗ ಕೇಜ್ರಿವಾಲ್ ಬಿಡುಗಡೆಯಿಂದಾಗಿ ಎಎಪಿಗೆ ದೊಡ್ಡ ಬಲ ಬಂದಂತಾಗಿದೆ.

ದಿಲ್ಲಿ ಅಬಕಾರಿ ಹಗರಣ : ಸಾಕ್ಷ್ಯ ನಾಶಕ್ಕಾಗಿ ಕೇಜ್ರಿಯಿಂದ 173 ಮೊಬೈಲ್ ಫೋನ್ ನಾಶ ?

ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ಸಂಬಂಧಿಸಿದಂತೆ ಎಎಪಿ ನಾಯಕರು ಪ್ರತಿಕ್ರಿಯಿಸಿದ್ದು, ಬಹುಶಃ ಸತ್ಯಕ್ಕೆ ತೊಂದರೆಯಾಗಬಹುದು ಆದರೆ ಸತ್ಯ ಯಾವತ್ತೂ ಸೋಲುವುದಿಲ್ಲ,. ಬಿಜೆಪಿಯ ಜಾರಿ ನಿರ್ದೇಶನಾಲಯದ ಎಲ್ಲಾ ಆಕ್ಷೇಪಗಳನ್ನು ನಿರಾಕರಿಸಿ ಗೌರವಾನ್ವಿತ ನ್ಯಾಯಾಲಯವೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದೆ ಎಂದು ಎಎಪಿ ಟ್ವಿಟ್ ಮಾಡಿದೆ. 

ಕೇಜ್ರಿವಾಲ್‌ಗೆ ಮತ್ತೊಂದು ಶಾಕ್, ಆಪ್ತ ಕಾರ್ಯದರ್ಶಿ ಅಮಾನತು ಎತ್ತಿಹಿಡಿದ CAT!

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಪ್ರತಿ ಬಾರಿ ಸುಪ್ರೀಂಕೋರ್ಟ್‌ವರೆಗೆ ಹೋಗಿ ಕಾಯುವುದು ಇಡೀ ನ್ಯಾಯ ವ್ಯವಸ್ಥೆಗೆ ಅಡ್ಡಿ ಮಾಡಿದಂತೆ, ಕೆಳ ನ್ಯಾಯಾಲಯಗಳು ಈ ಪ್ರಕರಣದಲ್ಲಿ ಸಕಾಲಕ್ಕೆ ನ್ಯಾಯ ನೀಡುವುದು ಬಹಳ ಅಗತ್ಯವಾಗಿತ್ತು. ಸುಪ್ರೀಂಕೋರ್ಟ್‌ಗೆ ಹೋಗುವ ಪ್ರತಿಯೊಂದು ಪ್ರಕರಣವೂ ಸುಪ್ರೀಂಕೋರ್ಟ್‌ನ ಹೊರೆಯನ್ನು ಅನಗತ್ಯವಾಗಿ ಹೆಚ್ಚಿಸುತ್ತದೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು ದೆಹಲಿ ನ್ಯಾಯಾಲಯ ಜಾಮೀನು ನೀಡಿದ ನಂತರ ಪ್ರತಿಕ್ರಿಯಿಸಿದ್ದಾರೆ.
 

Latest Videos
Follow Us:
Download App:
  • android
  • ios