Asianet Suvarna News Asianet Suvarna News

Delhi High Court: 6 ವಾರಗಳೊಳಗೆ ಲುಟ್ಯೆನ್ಸ್‌ ಬಂಗಲೆ ಖಾಲಿ ಮಾಡುವಂತೆ ಸುಬ್ರಮಣಿಯನ್‌ ಸ್ವಾಮಿಗೆ ಸೂಚನೆ

ಲುಟ್ಯೆನ್ಸ್‌ ಬಂಗಲೆಯನ್ನು ಸುಬ್ರಮಣಿಯನ್‌ ಸ್ವಾಮಿ ಅವರ ಹೆಸರಿಗೆ ನಿರ್ವಿವಾದವಾಗಿ 5 ವರ್ಷಗಳ ಕಾಲ ಹಂಚಿಕೆ ಮಾಡಲಾಗಿದ್ದು, ಆ ಅವಧಿ ಮುಕ್ತಾಯವಾಗಿದೆ ಎಂದು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಹೇಳಿದ್ದಾರೆ. 

delhi high court directs subramanian swamy to hand over his delhi bungalow within 6 weeks ash
Author
First Published Sep 14, 2022, 3:40 PM IST

ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಮಾಜಿ ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ದೆಹಲಿ ಹೈಕೋರ್ಟ್‌ (Delhi High Court) ಶಾಕ್‌ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಲುಟ್ಯೆನ್ಸ್‌ ಬಂಗಲೆ (Lutyens Bungalow) ವಲಯದಲ್ಲಿರುವ ಸುಬ್ರಮಣಿಯನ್‌ ಸ್ವಾಮಿ ಅವರ ಸರ್ಕಾರಿ ವಸತಿ ಸೌಕರ್ಯವನ್ನು 6 ವಾರಗಳೊಳಗೆ ಖಾಲಿ ಮಾಡುವಂತೆ ಸೂಚಿಸಿದೆ. ಹಾಗೂ, ಅಧಿಕಾರಿಗಳಿಗೆ ಹಸ್ತಾಂತರಿಸುವಂತೆಯೂ ದೆಹಲಿ ಹೈಕೋರ್ಟ್‌ ಸೂಚಿಸಿದೆ. ಈ ಸಂಬಂಧ ಹೇಳಿಕೆ ನೀಡಿದ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಆ ಬಂಗಲೆಯನ್ನು ನಿರ್ವಿವಾದವಾಗಿ 5 ವರ್ಷಗಳ ಕಾಲ ಹಂಚಿಕೆ ಮಾಡಲಾಗಿದ್ದು, ಆ ಅವಧಿ ಮುಕ್ತಾಯವಾಗಿದೆ. ಹಾಗೂ,  "Z ವರ್ಗದವರಿಗೆ (Protectee) ಸರ್ಕಾರಿ ವಸತಿ ಸೌಕರ್ಯವನ್ನು ಕಡ್ಡಾಯಗೊಳಿಸುವ ಮತ್ತು ಅಗತ್ಯವಿರುವ ಯಾವುದೇ ವಿಷಯವನ್ನು ನ್ಯಾಯಾಲಯಕ್ಕೆ ತೋರಿಸಲಾಗಿಲ್ಲ" ಎಂದು ದೆಹಲಿ ಹೈಕೋರ್ಟ್‌ ಏಕಸದಸ್ಯ ಪೀಠ ಹೇಳಿದೆ.

ಇನ್ನು, ಅರ್ಜಿದಾರರು ತಮ್ಮ ಭದ್ರತೆಯನ್ನು ರಕ್ಷಿಸಿಕೊಳ್ಳಲು ಈಗ ವಾಸಿಸಬೇಕಾದ ವಸತಿ ಆವರಣದಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದನ್ನು ಅಧಿಕಾರಿಗಳು ಮಾಡಬೇಕಾಗಿದೆ ಎಂದು ಸಹ ನ್ಯಾಯಮೂರ್ತಿ ಯಶವಂತ್ ವರ್ಮಾ ಅರ್ಜಿಯನ್ನು ವಿಲೇವಾರಿ ಮಾಡುವಾಗ ಹೇಳಿದರು. ಏಪ್ರಿಲ್ 24 ರವರೆಗೆ ಸಂಸತ್ತಿನ ಮೇಲ್ಮನೆ ಸದಸ್ಯರಾಗಿದ್ದ ಸುಬ್ರಮಣಿಯನ್‌ ಸ್ವಾಮಿ ಅವರು ‘Z’ ಕೆಟಗರಿ ರಕ್ಷಕರಿಗೆ ಮಾಡಬೇಕಾದ ಭದ್ರತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಮೂಲತಃ ತಮಗೆ ನೀಡಲಾಗಿದ್ದ ವಸತಿಯನ್ನು ಮುಂದುವರಿಸಬೇಕು ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನು ಓದಿ: Official Language India ಸಂಸ್ಕೃತಕ್ಕೆ ಅಧಿಕೃತ ಭಾಷೆ ಮಾನ್ಯತೆ ನೀಡಬೇಕು,ಉಡುಪಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಒತ್ತಾಯ!

ಅಲ್ಲದೆ, ಸುಬ್ರಮಣಿಯನ್‌ ಸ್ವಾಮಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಜಯಂತ್ ಮೆಹ್ತಾ ಅವರು, ‘’2016 ರ ಜನವರಿಯಲ್ಲಿ ಲೈಸೆನ್ಸ್ ಶುಲ್ಕವನ್ನು (Licence Fee) ಪಾವತಿಸಿದ ಮೇಲೆ ಭದ್ರತಾ ಕಾರಣಗಳಿಗಾಗಿ ಐದು ವರ್ಷಗಳ ಅವಧಿಗೆ ವಸತಿಯನ್ನು ಮಂಜೂರು ಮಾಡಲಾಗಿತ್ತು ಮತ್ತು ಅದು ರಾಜ್ಯಸಭಾ ಸದಸ್ಯರಾಗಿ ಅವರ ಬಳಿಯೇ ಮುಂದುವರೆಯಿತು’’ ಎಂದು ಅರ್ಜಿ ಸಲ್ಲಿಸಿದ್ದರು. ಹಾಗೂ, ಅವರು ಯಾವುದೇ ಪಾವತಿಯನ್ನು ಉಳಿಸಿಕೊಂಡಿಲ್ಲ ಮತ್ತು Z ಕೆಟಗರಿ ರಕ್ಷಕರಾಗಿ ಮುಂದುವರಿದಿದ್ದಾರೆ ಎಂದೂ ಅರ್ಜಿಯಲ್ಲಿ ಹೇಳಿದ್ದರು. ಇದರ ಜತೆಗೆ, ಸುಬ್ರಮಣಿಯನ್‌ ಸ್ವಾಮಿ ಅವರು ಸಾರ್ವಜನಿಕ ಖಜಾನೆಗೆ ಹೊರೆಯಾಗಲು (Public Exchequer) ಬಯಸುವುದಿಲ್ಲ ಎಂದು ವಾದಿಸಿದ ಜಯಂತ್ ಮೆಹ್ತಾ, “ನನ್ನ ವೈಯಕ್ತಿಕ ವಸತಿಗೆ ಬದಲಾಯಿಸಲು ನನಗೆ ಯಾವುದೇ ತೊಂದರೆ ಇಲ್ಲ. ಆದರೆ ವೈಯಕ್ತಿಕ ಸೌಕರ್ಯಗಳು ಸಾಕಷ್ಟಿಲ್ಲ. ಕಾವಲುಗಾರರಿಗೂ ಸಹ ನಾನು ವಸತಿಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ ಅವರಿಗೆ ವಿಶ್ರಾಂತಿ ಪಡೆಯಲು, ಉಳಿದುಕೊಳ್ಳಲು ಮತ್ತು ಅವರ ಮೂಲಭೂತ ಅಗತ್ಯಗಳನ್ನು ಪೂರೈಸಲು ಮನೆಯ ಸೌಲಭ್ಯಗಳನ್ನು ಸಹ ಖಚಿತಪಡಿಸಿಕೊಳ್ಳಬೇಕು. ನನ್ನ ಖಾಸಗಿ ಮನೆಯಲ್ಲಿ ಅಷ್ಟೊಂದು ಕಾವಲುಗಾರರನ್ನು ಇರಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದರು.

ಈ ಮಧ್ಯೆ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ಸುಬ್ರಮಣಿಯನ್‌ ಸ್ವಾಮಿ ಅವರ Z ಕೆಟಗರಿ ಭದ್ರತೆಯನ್ನು ಡೌನ್‌ಗ್ರೇಡ್ ಮಾಡಲಾಗಿಲ್ಲ ಎಂದು ಹೇಳಿದ್ದರು. ಆದರೆ 2016 ರಲ್ಲಿ, ಸರ್ಕಾರಿ ವಸತಿಗಾಗಿ ಅವರ ವಿನಂತಿಯನ್ನು "ಯಾವುದೇ ಪರಿಗಣನೆಗಳಿಗಾಗಿ" ಒಪ್ಪಿಕೊಳ್ಳಲಾಯಿತು. ಅವರಿಗೆ ಐದು ವರ್ಷಗಳ ಕಾಲ ಮನೆ ನೀಡಲಾಗಿತ್ತು ಮತ್ತು ಅವರು ಸಂಸದರಾದಾಗಲೂ ಅದನ್ನು ರಾಜ್ಯಸಭಾ ಪೂಲ್‌ಗೆ ವರ್ಗಾಯಿಸಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಇದನ್ನೂ ಓದಿ: PM Modi Policies : ಮೋದಿ ನೀತಿಗಳ ಬಗ್ಗೆ ನನ್ನ ವಿರೋಧವಿದೆ : ಡಾ.ಸುಬ್ರಹ್ಮಣಿಯನ್‌ ಸ್ವಾಮಿ

ಈ ಹಿನ್ನೆಲೆ "Z ವರ್ಗದ ಭದ್ರತೆಗೆ ವಸತಿ ಸೌಕರ್ಯವನ್ನು ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆ ಸಮಯದಲ್ಲಿ ಹೇಳಿರಲಿಲ್ಲ ಮತ್ತು Z ವರ್ಗದ ಭದ್ರತೆ ಹೊಂದಿದವರಿಗೆ ವಸತಿ ಕಡ್ಡಾಯವಾಗಿರಬೇಕು ಎನ್ನುವುದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಈಗ ಹೇಳುತ್ತಿದೆ. ಹಾಗೂ, Z ವರ್ಗದ ಭದ್ರತೆಯನ್ನು ಅವರ ವಾಸ್ತವ್ಯದಲ್ಲಿ ಒದಗಿಸಬಹುದು. ಅವರು ನಿಜಾಮುದ್ದೀನ್ ಪೂರ್ವ ಪ್ರದೇಶದಲ್ಲಿ ಬಂಗಲೆಯನ್ನು ಹೊಂದಿದ್ದಾರೆ. ಇದು ಬಹಳ ಸುಂದರವಾದ ಸ್ಥಳದಲ್ಲಿದೆ’’ ಎಂದು ಸಂಜಯ್ ಜೈನ್ ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios