ದೆಹಲಿ(ಏ.12): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಹರಡುತ್ತಿದೆ.ಕಳೆದ 10 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಲಾಕ್‌ಡೌನ್ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸದ್ಯಕ್ಕೆ ಲಾಕ್‌ಡೌನ್ ಜಾರಿ ಮಾಡುತ್ತಿಲ್ಲ. ಇದರ ಅವಶ್ಯಕತೆ ಇಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: ಇಲ್ಲಿದೆ ಏ.12ರ ಅಂಕಿ ಸಂಖ್ಯೆ

ಸದ್ಯ ಲಾಕ್‌ಡೌನ್ ಹೇರುವ ನಿರ್ಧಾರ ಸರ್ಕಾರದ ಮುಂದಿಲ್ಲ. ಆದರೆ ಮುಂದಿನ ತಿಂಗಳು ಕೊರೋನಾ ಪ್ರಕರಣ ಸಂಖ್ಯೆ, ಸಾವಿನ ಸಂಖ್ಯೆ ಹಾಗೂ ಹರಡುತ್ತಿರುವ ವೇಗ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದೇ ವೇಳೆ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಮನವಿ ಮಾಡಿದ್ದಾರೆ.

ವಿದೇಶಕ್ಕೆ ಯಾಕೆ? ದೇಶದ ಎಲ್ಲರಿಗೂ ಲಸಿಕೆ ನೀಡಿ: ಪ್ರಧಾನಿ ಮೋದಿಗೆ ರಾಹುಲ್ ಪತ್ರ!
 
ದೆಹಲಿಯಲ್ಲಿ ಪ್ರತಿ ಮನೆ ಮನೆಗೆ ಲಸಿಕೆ ತಲುಪಬೇಕು. ಸಣ್ಣ ಪ್ರಮಾಣದ ಲಕ್ಷಣಗಳ ಕಂಡು ಬಂದರೆ ಮನೆಯಲ್ಲಿ ಚಿಕಿತ್ಸೆ ಪಡೆಯಲು ಸಲಹೆ ನೀಡಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದರೆ ದಿನಕ್ಕೆ ಎರಡು ಸಲ ವೈದ್ಯರು ವಿಚಾರಿಸಿ ಚಿಕಿತ್ಸೆ ನೀಡುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರೂಪಾಂತರಿ ವೈರಸ್ ನಿಂದ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ.  ಪ್ರಕರಣ ವ್ಯಾಪಕವಾಗಿ ಹರಡಲು ದೆಹಲಿಯ ಸಿಬಿಎಸ್ ಸಿ ಪರೀಕ್ಷಾ ಕೇಂದ್ರಗಳೇ ಕೊವಿಡ್ ಹಾಟ್ ಸ್ಪಾಟ್ ಆಗಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದೇ ವೇಳೆ ವಿದೇಶಗಳಿಗೆ ಲಸಿಕೆ ರಫ್ತು ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ದೇಶದಲ್ಲಿ ಲಸಿಕೆ ಅಭಾವ ಹೆಚ್ಚಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆಯಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.