ನವದೆಹಲಿ(ಡಿ.29): ಆಮ್‌ ಆದ್ಮಿ ಪಕ್ಷ ಮಂಗಳವಾರದಂದು ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಬಹುದೊಡ್ಡ ಸೇವೆಯನ್ನು ಘೋಷಿಸಿದೆ. ತಾನು ಪ್ರತಿಭಟಿಸುತ್ತಿರುವ ರೈತರಿಗೆ ಉಚಿತ ವೈ-ಫೈ ಸೇವೆ ಒದಗಿಸುವುದಾಗಿ ಹೇಳಿದೆ. ಪಕ್ಷದ ನಾಯಕ ರಾಘವ್ ಚಡ್ಡಾ ತಮ್ಮ ಪಕ್ಷ ಸಿಂಘು ಬಾರ್ಡರ್‌ನಲ್ಲಿರುವ ರೈತರಿಗೆ ಫ್ರೀ ವೈ-ಫೈ ನೀಡುವುದಾಗಿ ಹೇಳಿದ್ದಾರೆ.

ಕೆಟ್ಟ ಕನೆಕ್ಟಿವಿಟಿಯಿಂದಾಗಿ ತಮಗೆ ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಲಾಗುತ್ತಿಲ್ಲ ಎಂಬುವುದು ರೈತರ ಅಳಲಾಗಿತ್ತು. ಹೀಗಾಗಿ ಅರವಿಂದ್ ಕೇಜ್ರೀವಾಲ್ ಅವರು ವ್ಯಕ್ತಿಯೊಬ್ಬ ಗೌರವಯುತ ಬದುಕು ಸಾಗಿಸಲು ಊಟ, ಬಟ್ಟೆ ಹಾಗೂ ಮನೆ ಬೇಕೇ ಬೇಕು. ಆದರೀಗ ಈ ಪಟ್ಟಿಗೆ ಇಂಟರ್ನೆಟಟ್ ಸೇವೆಯೂ ಸೇರ್ಪಡೆಯಾಗಿದೆ. ಬೇಡಿಕೆ ಹೆಚ್ಚಿದಂತೆ ಹಾಟ್‌ ಸ್ಪಾಟ್‌ಗಳನ್ನು ಅಳವಡಿಸಿ ಎಂದು ಹೇಳಿದ್ದಾರೆ. ಒಂದು ಹಾಟ್‌ಸ್ಪಾಟ್‌ ಸಿಗ್ನಲ್‌ ನೂರು ಮೀಟರ್‌ ವಿಸ್ತೀರ್ಣಕ್ಕಿರುತ್ತದೆ ಎಂದಿದ್ದಾರೆ.

ಇನ್ನು ದೆಹಲಿಯ ಗಡಿ ಭಾಗಗಳಾದ ಸಿಂಘು ಹಾಗೂ ಟಿಖರಿಯಂತಹ ಪ್ರದೇಶದಲ್ಲಿ ರೈತರು ಬೃಹತ್ ಸಂಖ್ಯೆಯಲ್ಲಿ ಸರಿ ಸುಮಾರು ಒಂದು ತಿಂಗಳಿನಿಂದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಿಗೆ ಪೊಲೀಸರು ದೆಹಲಿಗೆ ಎಂಟ್ರಿಯಾಗಲು ಬಿಡುತ್ತಿಲ್ಲ. ಈಗಾಗಲೇ ಕೇಜ್ರೀವಾಲ್ ಎರಡು ಬಾರಿ ಇಲ್ಲಿಗೆ ಆಗಮಿಸಿದ ರೈತರನ್ನು ಭೇಟಿಯಾಗಿದ್ದಾರೆ.