ಕೊರೋನಾ ಕಾಟ | 72 ಲಕ್ಷ ಕುಟುಂಬಕ್ಕೆ ಉಚಿತ ರೇಷನ್ | ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ನೆರವು

ದೆಹಲಿ(ಮೇ.04): ದೇಶದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ಸಾವು ನೋವು ಹೆಚ್ಚಾಗಿದ್ದು ಉದ್ಯಮ ಸೇರಿ ಹಲವು ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಎಲ್ಲ ಬಗೆಯ ರೇಷನ್‌ ಕಾರ್ಡ್‌ದಾರರಿಗೆ ಮುಂದಿನ ಎರಡು ತಿಂಗಳು ಉಚಿತ ರೇಷನ್ ನೀಡುವುದಾಗಿ ತಿಳಿಸಿದೆ.

ದೆಹಲಿಯಾದ್ಯಂತ ಎಲ್ಲಾ ರೇಷನ್ ಕಾರ್ಡ್‌ ಹೊಂದಿರುವ ಸುಮಾರು 72 ಕುಟುಂಬಕ್ಕೆ ಮುಂದಿನ ಎರಡು ತಿಂಗಳು ಉಚಿತ ರೇಷನ್ ನೀಡಲಾಗುತ್ತದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಇದರರ್ಥ ಮುಂದಿನ ಎರಡು ತಿಂಗಳು ಲಾಕ್‌ಡೌನ್ ಮುಂದುವರಿಯಲಿದೆ ಎಂದು ಅಲ್ಲ. ಬದಲಾಗಿ ಬಡ ಜನರಿಗೆ ನೆರವಾಗಲು, ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಬೆಂಬಲಿಸಲು ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

'ಇನ್ನು 4 ದಿನ ಮಾತ್ರ': ಸಿಎಂ ಯೋಗಿಗೆ ಕೊಲೆ ಬೆದರಿಕೆ

ದೆಹಲಿಯ ಆಟೋ ರಿಕ್ಷಾ ಚಾಲಕರೂ, ಟ್ಯಾಕ್ಸಿ ಚಾಲಕರಿಗೆ ಸಿಎಂ 5 ಸಾವಿರ ನೆರವು ಘೋಷಿಸಿದ್ದಾರೆ. ಈಗ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವುದರಿಂದ ಅವರಿಗೆ ನೆರವಾಗಲು ಈ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಭದ್ರತಾ ಕ್ರಮಗಳ ಮಹತ್ವದ ಬಗ್ಗೆ ಮಾತನಾಡಿ, ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಹೇರುವುದು ಅಗತ್ಯವಾಗಿತ್ತು. ಆದರೆ ಲಾಕ್‌ಡೌನ್ ದೀನದಲಿತ ವರ್ಗದವರಿಗೆ, ವಿಶೇಷವಾಗಿ ದೈನಂದಿನ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಆರ್ಥಿಕ ತೊಂದರೆಗಳನ್ನು ಉಂಟುಮಾಡಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ನೋಂದಾಯಿಸಲಾದ ನಿರ್ಮಾಣ ಕಾರ್ಮಿಕರಿಗೆ ತಲಾ ₹ 5,000 ಎಕ್ಸ್ ಗ್ರೇಟಿಯಾ ಪಾವತಿಗಳನ್ನು ವಿತರಿಸಲಾಗಿದೆ ಎಂದು ದೆಹಲಿ ಸರ್ಕಾರ ಕಳೆದ ವಾರ ಹೇಳಿದೆ. ಈ ಯೋಜನೆಯಡಿ ಒಟ್ಟು 2,10,684 ನಿರ್ಮಾಣ ಕಾರ್ಮಿಕರಿಗೆ ನೆರವು ನೀಡಲಾಗುವುದು ಎಂದು ನಗರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಲಾಕ್‌ಡೌನ್‌ ಒಂದೇ ಪರಿಹಾರ, ಯೂ ಟರ್ನ್‌ ಹೊಡೆದ ರಾಗಾಗೆ ನೆಟ್ಟಿಗರ ಕ್ಲಾಸ್‌!

"ಪ್ರಸ್ತುತ, ದೆಹಲಿ ಸರ್ಕಾರವು 1,05,750 ನಿರ್ಮಾಣ ಕಾರ್ಮಿಕರಿಗೆ. 52.88 ಕೋಟಿಗಳನ್ನು ವಿತರಿಸಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ನಿರ್ಮಾಣ ಕಾರ್ಮಿಕರಿಗೆ ಈ ಎಕ್ಸ್ ಗ್ರೇಟಿಯಾ ಪರಿಹಾರವನ್ನು ನೀಡಲಾಗುವುದು" ಎಂದು ಹೇಳಲಾಗಿದೆ.