ಹಾಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಗೆದ್ದರೆ ಈಗಿರುವ ಉಚಿತ ಕೊಡುಗೆಗಳ ಜೊತೆಗೆ ಇನ್ನಷ್ಟು ಕೊಡುಗೆ ನೀಡುವುದಾಗಿ ಈಗಾಗಲೇ ಆಪ್, ಕಾಂಗ್ರೆಸ್ ಮತ್ತು ಬಿಜೆಪಿ ಘೋಷಿಸಿವೆ. ಹೀಗಾಗಿ ರಾಜ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಎಲ್ಲಾ ಲಕ್ಷಣಗಳೂ ಇವೆ. ಹಾಲಿ ದೆಹಲಿ ಸರ್ಕಾರವು, ಒಂಬತ್ತು ಇಲಾಖೆಗಳ 27 ಯೋಜನೆಗಳಡಿ ವಿವಿಧ ರೀತಿಯ ಸಬ್ಸಿಡಿ ನೀಡುತ್ತಿದೆ.
ನವದೆಹಲಿ(ಜ.19): ದೇಶದಲ್ಲೇ ಮೊದಲ ಸಲ ಉಚಿತ ಕುಡಿವ ನೀರು, ಉಚಿತ ವಿದ್ಯುತ್ ಪೂರೈಕೆಯಂಥ ಯೋಜನೆ ಜಾರಿಯಾದೆ ಆಮ್ ಆದ್ಮಿ ಪಕ್ಷದ ಆಡಳಿತ ಇರುವ ರಾಜಧಾನಿ ದೆಹಲಿ, ಉಚಿತ ಯೋಜನೆಗಳ ಪರಿಣಾಮ ಆರ್ಥಿಕ ಬಿಕ್ಕಟ್ಟಿನತ್ತ ಹೆಜ್ಜೆ ಹಾಕುತ್ತಿರುವ ಲಕ್ಷಣ ಕಂಡಿದೆ. ಕಳೆದ 10 ವರ್ಷಗಳಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷದ ಹಿಡಿತದಲ್ಲಿರುವ ರಾಜ್ಯದಲ್ಲಿ ಉಚಿತ ಕೊಡುಗೆ ಅಥವಾ ಸಬ್ಸಿಡಿಗಾಗಿ ನೀಡುವ ಮೊತ್ತದಲ್ಲಿ ಶೇ.600ರಷ್ಟು ಭಾರೀ ಏರಿಕೆ ಕಂಡುಬಂದಿದೆ. ಈ ಪರಿಣಾಮ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಜೊತೆಗೆ ಕಳೆದ 3 ದಶಕಗಳಲ್ಲೇ ಮೊದಲ ಬಾರಿಗೆ ಈ ವರ್ಷ ರಾಜ್ಯವು ಕೊರತೆ ಬಜೆಟ್ ಎದುರಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಸಬ್ಸಿಡಿ ಹೊರೆ:
2014-15ರಲ್ಲಿ ಕೇಜ್ರಿವಾಲ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ ಸೀಮಿತ ಅವಧಿಗೆ ರಾಷ್ಟ್ರಪತಿ ಆಳ್ವಿಕೆ ಇತ್ತು. ಈ ವೇಳೆ ಸಬ್ಸಿಡಿಗೆ ರಾಜ್ಯ ಸರ್ಕಾರ ಮಾಡಿದ್ದ ವಾರ್ಷಿಕ ವೆಚ್ಚ 1554 ಕೋಟಿ ರು. ನಷ್ಟಿತ್ತು. ಆದರೆ ನಂತರದ 10 ವರ್ಷ ಆಮ್ ಆದ್ಮಿ ಪಕ್ಷದ ಆಳ್ವಿಕೆ ಕಂಡ ರಾಜ್ಯದಲ್ಲೀಗ ಸಬ್ಸಿಡಿ ಮೊತ್ತ 10995 ಕೋಟಿ ರು.ಗೆ ಏರಿದೆ. ಪರಿಣಾಮ 2025-26ನೇ ಹಣಕಾಸು ವರ್ಷದಲ್ಲಿ ದೆಹಲಿಯು ಆದಾಯ ಕೊರತೆಯ ರಾಜ್ಯವಾಗಿ ಬದಲಾ ಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಉಚಿತ ಸ್ಕೀಂ ತಪ್ಪಲ್ಲ ಎಂದು ಮೋದಿ ಅರ್ಥ ಮಾಡಿಕೊಳ್ಳಲಿ: ಬಿಜೆಪಿ ಪ್ರಣಾಳಿಕೆಗೆ ಕೇಜ್ರಿವಾಲ್ ಟಾಂಗ್
ಸುಮ್ಮನಾಗದ ಪಕ್ಷಗಳು:
ಇದು ಸಾಲದೆಂಬಂತೆ ಹಾಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಗೆದ್ದರೆ ಈಗಿರುವ ಉಚಿತ ಕೊಡುಗೆಗಳ ಜೊತೆಗೆ ಇನ್ನಷ್ಟು ಕೊಡುಗೆ ನೀಡುವುದಾಗಿ ಈಗಾಗಲೇ ಆಪ್, ಕಾಂಗ್ರೆಸ್ ಮತ್ತು ಬಿಜೆಪಿ ಘೋಷಿಸಿವೆ. ಹೀಗಾಗಿ ರಾಜ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಎಲ್ಲಾ ಲಕ್ಷಣಗಳೂ ಇವೆ. ಹಾಲಿ ದೆಹಲಿ ಸರ್ಕಾರವು, ಒಂಬತ್ತು ಇಲಾಖೆಗಳ 27 ಯೋಜನೆಗಳಡಿ ವಿವಿಧ ರೀತಿಯ ಸಬ್ಸಿಡಿ ನೀಡುತ್ತಿದೆ.
ದಿಲ್ಲೀಲಿ ಆಗಿದ್ದೇನು?
• ದೇಶದಲ್ಲೇ ಮೊದಲ ಸಲ ದಿಲ್ಲೀಲಿ ಉಚಿತ ಕುಡಿವ ನೀರು/ವಿದ್ಯುತ್ ಯೋಜನೆ ಜಾರಿ
• ಆಮ್ ಆದಿ ಪಕ್ಷ ಜಾರಿ ಮಾಡಿದ ಸ್ಕಿಂಗ ಳಿಂದ ಸಬ್ಸಿಡಿ ಮೊತ್ತ ಶೇ.600ರಷ್ಟು ಎರಿಕೆ
• ಸಬ್ಸಿಡಿ ಭಾರದಿಂದ ಈ ವರ್ಷ ರಾಜ್ಯವು ಕೊರತೆ ಬಜೆಟ್ ಎದುರಿಸುವ ಸಾಧ್ಯತೆ
• ತಲಾದಾಯದಲ್ಲಿ ಸಿರಿವಂತ ಆಗಿರುವ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟಿನ ಆತಂಕ
ದಿಲ್ಲಿಯಲ್ಲಿ ಬಾಲಕರಿಗೂ ಉಚಿತ ಬಸ್ ಯಾನ: ಆಪ್ ಮತ್ತೊಂದು ಭರವಸೆ
ನವದೆಹಲಿ: ದೆಹಲಿಯ ವಿಧಾನಸಭೆಚುನಾ ವಣೆ ಕಾವು ಜೋರಾಗುತ್ತಿದ್ದು, ಮೂರೂ ಪಕ್ಷಗಳು ಉಚಿತಗಳ ಮಳೆಗರೆಯುತ್ತಿವೆ. ಬಾಲಕರಿಗೆ ಉಚಿತ ಬಸ್ ಪ್ರಯಾಣ, ಮೆಟ್ರೋ ದರದಲ್ಲಿ ಶೇ.50ರಷ್ಟು ರಿಯಾಯ್ತಿಯನ್ನು ನೀಡುವುದಾಗಿ ಆಪ್ ಘೋಷಿಸಿದೆ. ದೆಹಲಿಯಲ್ಲಿ 2019ರಿಂದ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಮೆಟ್ರೋ ನಿರ್ವಹಣೆ ದೆಹಲಿ ಮತ್ತು ಕೇಂದ್ರ ಸರ್ಕಾರದ 50:50 ಆಧಾರದ ಮೇಲೆ ನಡೆಯುತ್ತಿದೆ. ಹೀಗಾಗಿ ಕೇಂದ್ರವೂ ಭರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ' ಎಂದರು.
ಬಾಡಿಗೆ ಮನೆಯವರಿಗೂ ಫ್ರೀ ವಿದ್ಯುತ್, ನೀರು:
ಈಗಾಗಲೇ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಬಾಡಿಗೆ ಮನೆಯಲ್ಲಿರುವವರಿಗೂ ದ್ದಾರೆ. ಜೊತೆಗೆ ನೀರಿನ ದರದಲ್ಲಿ ರಿಯಾಯ್ತಿ ಕೊಡುವುದಾಗಿ ಘೋಷಿಸಿದ್ದಾರೆ.
ಈವರೆಗಿನ ಉಚಿತ:
ಉಚಿತ ಬಸ್ ಯಾನ, ವಿದ್ಯುತ್ ಫ್ರೀ ಜೊತೆಗೆ, ಆಪ್ ಹಲವು ಭರಪೂರ ಭರವಸೆಗಳನ್ನು ಘೋಷಿಸಿದೆ. ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಾಸಿಕ 2100 ರು. ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಯೋಜನೆ, ದಲಿತ ವಿದ್ಯಾರ್ಥಿಗಳಿಗೆ ಉಚಿತ ವಿದೇಶ ವ್ಯಾಸಂಗ, ಹಿಂದೂ ಮತ್ತು ಸಿಖ್ ಪುರೋಹಿತರಿಗೆ ಮಾಸಿಕ 18,000 ರು. ಗೌರವಧನ ನೀಡುವುದಾಗಿ ಆಮ್ ಆದ್ಮಿ ಪಕ್ಷ ಈಗಾಗಲೇ ಘೋಷಿಸಿದೆ.
₹10 ಲಕ್ಷ ಸೂಟ್ ಧರಿಸುವ ಮೋದಿಗೆ ನನ್ನ ಮನೆ ಬಗ್ಗೆ ಮಾತಾಡುವ ಹಕ್ಕಿಲ್ಲ: ಅರವಿಂದ್ ಕೇಜ್ರಿವಾಲ್
ಕೇಜ್ರಿವಾಲ್ ಕಾರ್ ಮೇಲೆ ಬಿಜೆಪಿ ನಾಯಕರಿಂದ ಕಲ್ಲು ತೂರಾಟ: ಆಪ್
ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ಬಿಜೆಪಿಗರು ಕಲ್ಲು ತೂರಿದ್ದಾರೆ ಎಂದು ಆಪ್ ಆರೋಪಿಸಿದೆ. ಬಿಜೆಪಿ ಇದನ್ನು ನಿರಾಕರಿಸಿದ್ದು, ಕೇಜ್ರಿವಾಲ್ ತಮ್ಮ ಕಾರನ್ನು ಮೂವರು ಬಿಜೆಪಿಗರ ಮೇಲೆ ಹರಿಸಿ ಗಾಯಗೊಳಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ.
ಎಕ್ಸ್‌ನಲ್ಲಿ ಆರೋಪ ಮಾಡಿರುವ ಆಪ್, ಕೇಜ್ರಿವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಚಲಿಸುವಾಗ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರ ಬೆಂಬಲಿಗರು ಕಪ್ಪು ಬಟ್ಟೆ ತೋರಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದಿದೆ. ಆದರೆ ದೆಹಲಿ ಪೊಲೀಸರು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಘಟನೆಯಲ್ಲಿ ಯಾವುದೇ ಕಲ್ಲು ತೂರಾಟ ನಡೆದಿಲ್ಲ ಎಂದು ತಿಳಿಸಿದ್ದಾರೆ.
