ಮಹಿಳಾ ಪೊಲೀಸರು ಪುರುಷರಿಗೆ ಹೊಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರ ಈ ನಡೆ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದಲ್ಲಿ (Delhi Metro) ನಡೆಯುವ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿನ ವೈರಲ್ ಆಗುತ್ತಿರುತ್ತವೆ. ದೆಹಲಿ ಮೆಟ್ರೋದಲ್ಲಿ ಕೆಲವರು ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ರೆ, ಯುವ ಜೋಡಿ ಅಲ್ಲಿಯೇ ರೊಮ್ಯಾನ್ಸ್ ಮಾಡುವ ಮೂಲಕ ಸಹ ಪ್ರಯಾಣಿಕರನ್ನು ಮುಜಗರಕ್ಕೀಡು ಮಾಡುತ್ತಾರೆ. ಇದರ ಜೊತೆಗೆ ಸೀಟ್‌ಗಾಗಿ ಮಹಿಳೆಯರ ನಡುವೆ ಜಗಳ, ಹೊಡೆದಾಟ ನಡೆಯೋದು ಸಾಮಾನ್ಯ. ಯುವ ಸಮುದಾಯ ರೈಲಿನ ಜನಸಂದಣಿ ನಡುವೆಯೇ ರೀಲ್ಸ್ ಮಾಡುತ್ತಿರುತ್ತಾರೆ. ದೆಹಲಿ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗಾಗಿಯೇ ಕೆಲವು ಬೋಗಿಗಳನ್ನು ಮೀಸಲಿಡಲಾಗುತ್ತದೆ. ಈ ಕೋಚ್‌ನಲ್ಲಿ ಮಹಿಳಾ ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದಾಗಿದೆ. ಮಹಿಳೆಯರಿಗೆ ಮೀಸಲಿರಿಸಿದ್ದ ಕೋಚ್‌ನಲ್ಲಿ ಪ್ರಯಾಣಿಸಿದ ಪುರುಷರಿಗೆ ಪೊಲೀಸರು ಬಿಸಿ ಬಿಸಿ ಕಜ್ಜಾಯ ನೀಡಿದ್ದಾರೆ.

ಮೆಟ್ರೋ ನಿಲ್ದಾಣದಲ್ಲಿದ್ದ ಮಹಿಳಾ ಪೊಲೀಸರು ಸರಿಯಾಗಿ ಲೇಡಿಸ್ ಕೋಚ್ ಬಂದು ನಿಲ್ಲುವ ಜಾಗದಲ್ಲಿ ಬಂದು ನಿಂತಿದ್ದಾರೆ. ರೈಲು ಬಂದು ನಿಲ್ಲುತ್ತಿದ್ದಂತೆ ಲೇಡಿಸ್ ಕೋಚ್‌ನಲ್ಲಿದ್ದ ಪುರುಷರನ್ನು ಹೊರಗೆ ಎಳೆದು ತಲೆ, ಕಪಾಳಕ್ಕೆ ಹೊಡೆದಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಪುರುಷ ಪ್ರಯಾಣಿಕರು ಎದ್ನೋ ಬಿದ್ನೋ ಅಂತ ಹೊರಗಡೆ ಓಡಿ ಬಂದಿದ್ದಾರೆ. ನಂತರ ಮಹಿಳಾ ಪ್ರಯಾಣಿಕರಿಗೆ ರೈಲಿನಲ್ಲಿ ಒಳಗೆ ಹೋಗಲು ಪೊಲೀಸರು ದಾರಿ ಮಾಡಿಕೊಟ್ಟಿದ್ದಾರೆ. ಮಹಿಳಾ ಪೊಲೀಸರು ಪುರುಷರಿಗೆ ಹೊಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರ ಈ ನಡೆ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. 

ಮೆಟ್ರೋ ರೈಲು ಖಾಲಿ ಇತ್ತು, ಆದ್ರೂ ಸೀಟ್‌ಗಾಗಿ ಕಿತ್ತಾಡಿಕೊಂಡ ನಾರಿಮಣಿಯರು- ವಿಡಿಯೋ ವೈರಲ್

ಪೊಲೀಸರ ನಡೆಗೆ ಮೆಚ್ಚುಗೆ!

ದೆಹಲಿ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮಹಿಳಾ ಪ್ರಯಾಣಿಕರು ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲಾ ಕೋಚ್‌ಗಳಲ್ಲಿ ಪುರುಷರು ತುಂಬಿಕೊಂಡ್ರೆ ನಮಗೆ ಪ್ರಯಾಣಿಸಲು ಕಷ್ಟವಾಗುತ್ತಿತ್ತು. ಪುರುಷ ಪ್ರಯಾಣಿಕರು ಮಹಿಳೆಯರಿಗೆ ಮೀಸಲಾಗಿರಿಸಲಾಗಿರುವ ಕೋಚ್‌ನಲ್ಲಿ ಪ್ರಯಾಣಿಸೋದು ತಪ್ಪು. ಮುಂದಿನ ದಿನಗಳಲ್ಲಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಮಹಿಳಾ ಪ್ರಯಾಣಿಕರು ಸಲಹೆ ನೀಡಿದ್ದಾರೆ. ಆದ್ರೆ ಕೆಲ ನೆಟ್ಟಿಗರು ಪೊಲೀಸರ ಈ ನಡೆಯನ್ನು ಖಂಡಿಸಿದ್ದಾರೆ.

ಹೊಡೆಯುವ ಅಧಿಕಾರ ಕೊಟ್ಟವರು ಯಾರು?

ದೆಹಲಿ ಪೊಲೀಸರಿಗೆ ಸಾರ್ವಜನಿಕರನ್ನು ಹೊಡೆಯೋದು ಮಾಮೂಲಿಯಾಗಿದೆ. ಇದು ಪೊಲೀಸರ ಹೊಸ ಕಾರ್ಯವಿಧಾನವವೇ? ತಪ್ಪು ಮಾಡಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಜನರ ಮೇಲೆ ಹಲ್ಲೆ ನಡೆಸುವ ಅಧಿಕಾರವನ್ನು ನಿಮಗೆ ಕೊಟ್ಟವರು ಯಾರು? ಇಂತಹ ಪೊಲೀಸರ ದೌರ್ಜನ್ಯ ನಡೆಯನ್ನು ಜನರು ಯಾಕೆ ವೈಭವೀಕರಿಸುತ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ. ಇದು ಅವಮಾನಕರ ಘಟನೆ ಎಂದು ಹರ್ಮಿಲಾಪ್ (@GARRY2070) ಎಂಬವರು ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಮೆಟ್ರೋದಲ್ಲಿ ಸಮೋಸಾ ತಿಂದು ಸೀಟಿನಡಿ ಕಸ ಎಸೆದ ಮಂದಿ, ನಿಯಮ ಇರೋದು ಯಾರಿಗಪ್ಪಾ!

Scroll to load tweet…
Scroll to load tweet…
Scroll to load tweet…