ಸಿಂಗಮ್ ಅಗೈನ್​ನಲ್ಲಿ ಟೈಗರ್ ಸಲ್ಮಾನ್ ಗೆಸ್ಟ್ ರೋಲ್: ಮಲ್ಟಿಸ್ಟಾರರ್ ಮೂವಿಯಲ್ಲಿ ಚುಲ್ ಬುಲ್ ಪಾಂಡೆ

ದೀಪಾವಳಿಗೆ ತೆರೆಗೆ ಬರೋದಕ್ಕೆ ಸಜ್ಜಾಗಿರೋ ಸಿಂಗಮ್ ಅಗೈನ್ ಸಿನಿಮಾದಲ್ಲಿ ಸಲ್ಮಾನ್ ಗೆಸ್ಟ್ ರೋಲ್ ಮಾಡಬೇಕಿತ್ತು. ಆದ್ರೆ ಸಲ್ಮಾನ್​ಗಿರೋ ಪ್ರಾಣಭೀತಿಯ ಕಾರಣಕ್ಕೆ ಇದೂವರೆಗೂ ಶೂಟಿಂಗ್​ ನಡೆದಿರಲಿಲ್ಲ. ಫೈನಲಿ ಟೈಟ್ ಸೆಕ್ಯೂರಿಟಿ ನಡುವೆ ಟೈಗರ್, ಸಿಂಗಮ್ ಸೆಟ್​​ಗೆ ಹಾಜರಾಗಿದ್ದಾರೆ. 

First Published Oct 24, 2024, 4:42 PM IST | Last Updated Oct 24, 2024, 4:42 PM IST

ದೀಪಾವಳಿಗೆ ತೆರೆಗೆ ಬರೋದಕ್ಕೆ ಸಜ್ಜಾಗಿರೋ ಸಿಂಗಮ್ ಅಗೈನ್ ಸಿನಿಮಾದಲ್ಲಿ ಸಲ್ಮಾನ್ ಗೆಸ್ಟ್ ರೋಲ್ ಮಾಡಬೇಕಿತ್ತು. ಆದ್ರೆ ಸಲ್ಮಾನ್​ಗಿರೋ ಪ್ರಾಣಭೀತಿಯ ಕಾರಣಕ್ಕೆ ಇದೂವರೆಗೂ ಶೂಟಿಂಗ್​ ನಡೆದಿರಲಿಲ್ಲ. ಫೈನಲಿ ಟೈಟ್ ಸೆಕ್ಯೂರಿಟಿ ನಡುವೆ ಟೈಗರ್, ಸಿಂಗಮ್ ಸೆಟ್​​ಗೆ ಹಾಜರಾಗಿದ್ದಾರೆ. ಸಿಂಗಮ್ ಸೆಟ್​​ನಲ್ಲಿ ಟೈಗರ್ ಶೂಟಿಂಗ್ ಝಲಕ್ ಹೇಗಿತ್ತು..? ಬಾಲಿವುಡ್​​ನ ಮೋಸ್ಟ್ ಅವೇಟೆಡ್ ಮೂವಿ ಸಿಂಗಮ್ ಅಗೈನ್​ನಲ್ಲಿ ಟೈಗರ್ ಸಲ್ಲುಮಿಯಾ ಗೆಸ್ಟ್ ರೋಲ್ ಮಾಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಮ್ ಅಗೈನ್ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಸಿನಿಮಾ. ಅಜಯ್ ದೇವಗನ್, ಕರೀನಾ ಕಪೂರ್ ಖಾನ್  ಇಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ರೆ,   ಅಕ್ಷಯ್​ ಕುಮಾರ್​, ಟೈಗರ್​ ಶ್ರಾಫ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್​ ಸೇರಿದಂತೆ ಬಿ ಟೌನ್ ನ ಟಾಪ್ ಸ್ಟಾರ್ಸ್ ಗೆಸ್ಟ್ ರೋಲ್ ಮಾಡಿದ್ದಾರೆ. ಇವರೆಲ್ಲರ ಜೊತೆಗೆ ಈಗ ಸಲ್ಲುಮಿಯಾ ಕೂಡ ಸೇರ್ಪಡೆಯಾಗಿದ್ದಾರೆ. 

ಅಸಲಿಗೆ ಸೂಪರ್ ಕಾಪ್ ಆಕ್ಷನ್ ಚಿತ್ರವಾಗಿರೋ ಸಿಂಗಮ್ ಅಗೈನ್​ನಲ್ಲಿ ಖಾಕಿಧಾರಿ ರೋಲ್ ಮಾಡಿದ ಎಲ್ಲಾ ದಿಗ್ಗಜರನ್ನೂ ಒಟ್ಟೂಗೂಡಿಸಲಾಗಿದೆ. ಸಲ್ಮಾನ್ ಖಾನ್ ಇಲ್ಲಿ ದಂಬಾಗ್​ನ ಚುಲ್ ಬುಲ್ ಪಾಂಡೆಯಾಗಿ ಎಂಟ್ರಿ ಕೊಡಲಿದ್ದಾರೆ. ಅಸಲಿಗೆ ಈ ಸಿನಿಮಾದಲ್ಲಿ ಸಲ್ಮಾನ್ ನಟಿಸೋದು ಮೊದಲೇ ಫಿಕ್ಸ್ ಆಗಿತ್ತು. ಆದ್ರೆ ಈ ನಡುವೆ ಆದ ಬೆಳವಣಿಗೆಗಳು, ಸಲ್ಮಾನ್ ಗಿರೋ ಜೀವಭಯ, ಬಾಬಾ ಸಿದ್ದಿಕಿ ಮೇಲೆ ಆದ ಅಟ್ಯಾಕ್ ಸಲ್ಲುಮಿಯಾ ಶೂಟಿಂಗ್ ವಿಳಂಬ ಆಗುವಂತೆ ಮಾಡಿದ್ವು. ಸಿನಿಮಾ ಬಿಡುಗಡೆ ಹತ್ತಿರ ಬಂದ್ರೂ ಸಲ್ಲುಮಿಯಾ ಪೋರ್ಷನ್ ನ ಶೂಟಿಂಗ್ ಮಾತ್ರ ಆಗಿರಲಿಲ್ಲ. ಹೌದು ಕೊನೆಗೂ ಧೈರ್ಯ ಮಾಡಿ ಸಿಂಗಮ್ ಅಗೈನ್ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ,. ಕೊನೆಗೂ ಒಪ್ಪಿಕೊಂಡಿದ್ದ ಪಾತ್ರವನ್ನ ಮಾಡಿಕೊಟ್ಟು ಸಿಂಗಮ್ ಟೀಮ್​ಗೆ ರಿಲೀಫ್ ಕೊಟ್ಟಿದ್ದಾರೆ. 

ಆದ್ರೆ ಸಲ್ಮಾನ್ ಭಾಗದ ಶೂಟಿಂಗ್ ನಡೆದಿದ್ದು ಮಾತ್ರ ಹೈ ಸೆಕ್ಯೂರಿಟಿ ಮಧ್ಯೆ. ಬರೊಬ್ಬರಿ 120 ಸೆಕ್ಯೂರಿಟಿ ಗಾರ್ಡ್ಸ್, 30 ಪೊಲೀಸರ ಸರ್ಪಗಾವಲಿನ ನಡುವೆ ಸಲ್ಮಾನ್ ಖಾನ್​​ ಭಾಗದ ಶೂಟಿಂಗ್ ನಡೆದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನ ಭೀತಿಗೆ ತತ್ತರಿಸಿ ಹೋಗಿರೋ ಸಲ್ಮಾನ್ ಸರ್ಕಾರ ನೀಡಿರೋ ವೈ ಪ್ಲಸ್ ಸೆಕ್ಯೂರಿಟಿ ಜೊತೆಗೆ ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ಇಟ್ಟುಕೊಂಡಿದ್ದಾರೆ. ಜೊತೆಗೆ ಅತ್ಯಾಧುನಿಕ ಬುಲೆಟ್ ಪ್ರೂಫ್ ಕಾರ್​ನಲ್ಲಿ ಸಲ್ಮಾನ್ ಸಂಚರಿಸ್ತಾ ಇದ್ದಾರೆ. ಸಿಂಗಮ್​ ಅಗೈನ್​ನಲ್ಲಿ ಖಾಕಿ ತೊಟ್ಟು ನಟಿಸಿರೋ ಸಲ್ಮಾನ್ ಅದಕ್ಕಾಗಿ ಸುತ್ತಲೂ ಖಾಕಿಪಡೆಯ ಸೆಕ್ಯೂರಿಟಿಯನ್ನೇ ಇಟ್ಟುಕೊಂಡಿದ್ದಾರೆ. ಒಟ್ಟಾರೆ ಸಿಂಗಮ್ ಅಗೈನ್ ಸಿನಿಮಾದಲ್ಲಿರೋ ಎಲ್ಲಾ ಬಿಗ್ ಸ್ಟಾರ್​ಗಳ ಜೊತೆಗೆ ಸಲ್ಮಾನ್ ಎಂಟ್ರಿ ಫ್ಯಾನ್ಸ್​ಗೆ ಸಖತ್ ಕಿಕ್ ಕೊಡಲಿದೆ. ಆದ್ರೆ ತೆರೆ ಮೇಲೆ ಟೈಗರ್, ಸಿಂಗಮ್ ಅಂತೆಲ್ಲಾ ಅಬ್ಬರಿಸೋ ಸ್ಟಾರ್ಸ್, ರಿಯಲ್ ಲೈಫ್​ನಲ್ಲಿ ಮಾತ್ರ ಅದೆಂಥಾ ಅಂಜುಬುರಕರಪ್ಪಾ ಅಂತ ಫ್ಯಾನ್ಸ್ ಕಾಮೆಂಟ್ ಮಾಡ್ತಾ ಇರೋದು ಸುಳ್ಳಲ್ಲ.