ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಸಂಜೀವ್ ಖನ್ನ ನೇಮಕ!

ಸುಪ್ರೀಂ ಕೋರ್ಟ್ ಜಡ್ಜ್ ಸಂಜೀವ್ ಖನ್ನ ಇದೀಗ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಶಿಫಾರಸಿಗೆ ಅಂಕಿತ ಹಾಕಿದ್ದಾರೆ.
 

President Murmu appoints Supreme court Judge sanjiv khanna as next chief justice of India ckm

ನವದೆಹಲಿ(ಅ.24) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನವೆಂಬರ್ 10 ನಿವೃತ್ತಿಯಾಗುತ್ತಿದ್ದಾರೆ. ಹೀಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸುಪ್ರೀಂ ಕೋರ್ಟ್ ಮುಂದಿನ ಚೀಫ್ ಜಸ್ಟೀಸ್ ಆಗಿ ಸುಪ್ರೀಂ ಕೋರ್ಟ್ ಜಡ್ಜ್ ಸಂಜೀವ್ ಖನ್ನ ಅವರನ್ನು ನೇಮಕ ಮಾಡಿದ್ದಾರೆ. ನವೆಂಬರ್ 11 ರಂದು ಸಂಜೀವ್ ಖನ್ನ ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

2 ವರ್ಷದ ಯಶಸ್ವಿಯ ಕಾರ್ಯಾವಧಿಯಲ್ಲಿ ಸಿಜೆಐ ಚಂದ್ರಚೂಡ್ ಕೆಲವೇ ದಿನಗಳಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಹೀಗಾಗಿ ಚಂದ್ರಚೂಡ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನ ಹೆಸರು ಶಿಫಾರಸು ಮಾಡಿದ್ದರು. ಇದೀಗ ರಾಷ್ಟ್ರಪತಿ ಮುರ್ಮು ಈ ಶಿಫಾರಸು ಅಂಗೀಕರಿಸಿದ್ದಾರೆ. ಈ ಮೂಲಕ ಸಂಜೀವ್ ಖನ್ನ ನೇಮಕದ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಕಣ್ತೆರೆದ ನ್ಯಾಯದೇವತೆ!

ನೂತನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನ ಇನ್ನು 6 ತಿಂಗಳ ಕಾಲ ಸುಪ್ರೀಂ ಕೋರ್ಟ್ ಸಿಜೆಐ ಕಾರ್ಯ ಕರ್ತವ್ಯ ನಿರ್ವಹಿಸಲಿದ್ದಾರೆ. ಮೇ, 13, 2025ಕ್ಕೆ ಸಂಜೀವ್ ಖನ್ನ ನಿವೃತ್ತಿಯಾಗಲಿದ್ದಾರೆ. ಸಂಜೀವ್ ಖನ್ನ ದೆಹಲಿ ಹೈಕೋರ್ಟ್ ಜಡ್ಜ್ ಆಗಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2005 ರಲ್ಲಿ ಹೈಕೋರ್ಟ್ ಜಡ್ಜ್ ಆಗಿ ಸಂಜೀವ್ ಖನ್ನ ಕರ್ತವ್ಯ ಆರಂಭಿಸಿದ್ದರು.

ಅರವಿಂದ್ ಕೇಜ್ರಿವಾಲ್ ಜಾಮೀನು, ಆಪ್ ಸಂಸದ ಸಂಜಯ್ ಸಿಂಗ್ ಮಧ್ಯಂತರ ಜಾಮೀನು ಸೇರಿದಂತೆ ಕೆಲ ಮಹತ್ವದ ತೀರ್ಪು ನೀಡಿದ ಪೀಠದಲ್ಲಿ ಸಂಜೀವ್ ಖನ್ನ ಕೂಡ ಪ್ರಮುಖ ಭಾಗವಾಗಿದ್ದರು. 

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿಯನ್ನು ಸಂಜೀವ್ ಖನ್ನ ಒಳಗೊಂಡ ಪೀಠ ಎತ್ತಿ ಹಿಡಿದಿತ್ತು. ಇದೇ ವೇಳೆ ಚುನಾವಣಾ ಬಾಂಡ್ ಕುರಿತು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಪೀಠದಲ್ಲೂ ಜಸ್ಟೀಸ್ ಸಂಜೀವ್ ಖನ್ನ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2018ರಲ್ಲಿ ಜಾರಿಗೆ ತರಲಾಗಿದ್ದ ಚುನಾವಣಾ ಬಾಂಡ್ ಯೋಜನೆಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಹಕ್ಕು ಉಲ್ಲಂಘಿಸುತ್ತದೆ ಎಂದು ಪೀಠ ಆದೇಶಿಸಿತ್ತು.

ಡಿ.ವೈ. ಚಂದ್ರಚೂಡ್‌, 2022ರಲ್ಲಿ ಸುಪ್ರೀಂ ಕೋರ್ಟ್‌ನ 50ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಿದ್ದರು. ತಮ್ಮ 2 ವರ್ಷಗಳ ಅಧಿಕಾರವಧಿಯಲ್ಲಿ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗೆ ಕಾರಣರಾಗಿದ್ದರು. ಆಗಾಗ ವಕೀಲರ ನಡವಳಿಕೆಯನ್ನು ನಿಷ್ಠುರವಾಗಿ ಖಂಡಿಸುತ್ತಿದ್ದರು.  ನ್ಯಾ। ಸಂಜೀವ್‌ ಖನ್ನಾ  ಅವರನ್ನು 2019ರಲ್ಲಿ ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು.

ನಿವೃತ್ತಿಯ ಸನಿಹ ಸಿಜೆಐ ಚಂದ್ರಚೂಡ್‌, ಈ ಐದು ಪ್ರಕರಣಗಳ ತೀರ್ಪು ನೀಡ್ತಾರಾ?

Latest Videos
Follow Us:
Download App:
  • android
  • ios