ಇಂದು ಮುಂದುವರೆದ ಕೆಸಿಆರ್ ಪುತ್ರಿ ಕವಿತಾ ವಿಚಾರಣೆ: ಮಾಧ್ಯಮಗಳಿಗೆ ಹಳೆ ಫೋನ್ ಪ್ರದರ್ಶನ
ದೆಹಲಿಯ ಹಿಂದಿನ ಅಬಕಾರಿ ನೀತಿಯ ಹಗರಣ ಸಂಬಂಧ ಬಿಆರ್‌ಎಸ್ ಶಾಸಕಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾ (44) ರನ್ನು 2ನೇ ಬಾರಿಯ ವಿಚಾರಣೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ನಿನ್ನೆ 10 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ನವದೆಹಲಿ: ದೆಹಲಿಯ ಹಿಂದಿನ ಅಬಕಾರಿ ನೀತಿಯ ಹಗರಣ ಸಂಬಂಧ ಬಿಆರ್‌ಎಸ್ ಶಾಸಕಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾ (44) ರನ್ನು 2ನೇ ಬಾರಿಯ ವಿಚಾರಣೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ನಿನ್ನೆ 10 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ದೆಹಲಿ ಕಚೇರಿಯಲ್ಲಿ ಮುಂಜಾನೆ 10.30 ಕ್ಕೆ ವಿಚಾರಣೆ ಆರಂಭಿಸಿದ ಇಡಿ ರಾತ್ರಿ 8.45ಕ್ಕೆ ವಿಚಾರಣೆ ಮುಗಿಸಿತು. ಕವಿತಾ ನೀಡಿದ ಉತ್ತರಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು ಮಾರ್ಚ್ 11 ರಂದು ಕವಿತಾರನ್ನು ಇಡಿ 9 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ಇಂದು ಕೂಡ ಕವಿತಾ ವಿಚಾರಣೆ ಮುಂದುವರೆದಿದ್ದು, ಇಂದು ಇಡಿ ಕಚೇರಿಗೆ ತೆರಳುವ ಮುನ್ನ ಕವಿತಾ ಮಾಧ್ಯಮಗಳಿಗೆ ತಮ್ಮ ಫೋನ್‌ಗಳ ಪ್ರದರ್ಶನ ಮಾಡಿದರು. ದೆಹಲಿಯಲ್ಲಿರುವ ತಮ್ಮ ತಂದೆ ಚಂದ್ರಶೇಖರ್ ರಾವ್ ನಿವಾಸದಿಂದ ಇಡಿ ಕಚೇರಿಗೆ ತೆರಳುವ ವೇಳೆ ಮಾಧ್ಯಮ ಹಾಗೂ ತಮ್ಮ ಬೆಂಬಲಿಗರಿಗೆ ಫೋನ್‌ಗಳಿದ್ದ ಬ್ಯಾಗ್‌ಗಳನ್ನುಪ್ರದರ್ಶನ ಮಾಡಿದರು. ಅಲ್ಲದೇ ಸಾಕ್ಷ್ಯಗಳನ್ನು ಇಂದು ಇಡಿಗೆ ಸಲ್ಲಿಸುವುದಾಗಿ ಅವರು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ವಿಚಾರಣೆಗೆ ಹಾಜರಾಗಿ ಸಹಕಾರ ನೀಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಈ ಹಿಂದೆ ಬಳಸಿದ ಈ ಎಲ್ಲಾ ಹಿಂದಿನ ಫೋನ್‌ಗಳನ್ನು ಇಂದು ಸಲ್ಲಿಸುತ್ತಿದ್ದೇನೆ ಎಂದು ಇಡಿಗೆ ಬರೆದ ಪತ್ರದಲ್ಲಿ ಕವಿತಾ ಹೇಳಿದ್ದಾರೆ.
ಲಂಚ ಪ್ರಕರಣದಲ್ಲಿ ಅಪ್ 2ನೇ ಶಾಸಕನ ಬಂಧನ: ಅಬಕಾರಿ ಹಗರಣದಲ್ಲಿ ಕೇಜ್ರಿ ಆಪ್ತನ ವಿಚಾರಣೆ
ಇದಕ್ಕೂ ಮೊದಲು ತನಿಖಾ ಸಂಸ್ಥೆ ಕೆ. ಕವಿತಾ ಅವರು 10 ಫೋನ್‌ಗಳನ್ನು ನಾಶ ಮಾಡಿದ್ದಾರೆ ಎಂದು ದೂರಿತ್ತು. ಇಂದು ಮೂರನೇ ಬಾರಿ ಕವಿತಾ ಇಡಿ ಎದುರು ಹಾಜರಾಗಿದ್ದು, ಮಾರ್ಚ್ 11 ಹಾಗೂ ಮಾರ್ಚ್ 20 ರಂದು ನಡೆದ ವಿಚಾರಣೆಯಲ್ಲಿ ಒಟ್ಟು ಅಂದಾಜು 18 ರಿಂದ 19 ಗಂಟೆಗಳ ಕಾಲ ಅವರು ಇಡೀ ಮುಂದೆ ವಿಚಾರಣೆ ಎದುರಿಸಿದ್ದರು. ಈ ಪ್ರಕರಣದಲ್ಲಿ ಇಡಿ ಇದುವರೆಗೆ 12 ಜನರನ್ನು ಬಂಧಿಸಿ ಜೈಲಿಗಟ್ಟಿದ್ದು, ಇದರಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಕೂಡ ಸೇರಿದ್ದಾರೆ. ದೆಹಲಿ ಅಬಕಾರಿ ನೀತಿಯನ್ನು ರೂಪಿಸುವಾಗ ಸೌತ್ ಗ್ರೂಪ್‌ಗೆ ಸಲೀಸಲಾಗುವಂತಹ ಒಪ್ಪಂದ ಮಾಡಿದ ಆರೋಪ ಸಿಸೋದಿಯಾ ಮೇಲಿದೆ. ಇತ್ತ ಸಿಸೋಡಿಯಾ ಜಾಮೀನು ಅರ್ಜಿಯೂ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇಂದು ನಡೆಯಲಿದೆ.
ಇಡಿ ಪ್ರಕಾರ ಈ ಸೌತ್ ಗ್ರೂಪ್‌ನಲ್ಲಿ ಅರಬಿಂದೋ ಫಾರ್ಮಾದ ಪ್ರವರ್ತಕ ಶರತ್ ರೆಡ್ಡಿ (Sarath Reddy), ಆಂಧ್ರಪ್ರದೇಶದ ಒಂಗೋಲ್ ಲೋಕಸಭಾ ಕ್ಷೇತ್ರದ ಸಂಸದ ವೈಎಸ್‌ಆರ್ ಕಾಂಗ್ರೆಸ್ ಮಾಗುಂಟ ಶ್ರೀನಿವಾಸುಲು ರೆಡ್ಡಿ , ಅವರ ಪುತ್ರ ರಾಘವ್ ಮಾಗುಂಟಾ, ಹಾಗೂ ಕೆಸಿಆರ್ ಪುತ್ರಿ ಕವಿತಾ ಹಾಗೂ ಇತರರನ್ನು ಒಳಗೊಂಡಿದೆ. ಇಡಿ ಸಮನ್ಸ್ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಕೆ ಕವಿತಾ ಈ ಹಿಂದೆ ಆರೋಪಿಸಿದ್ದಾರೆ. ತನಿಖಾ ಸಂಸ್ಥೆಯು ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಸ್ತೃತ ಅಂಗವಾಗಿದೆ ಎಂದು ಅವರ ಪಕ್ಷದ ನಾಯಕರು ದೂರಿದ್ದಾರೆ. ಬೆದರಿಕೆ ಮತ್ತು ಬಲವಂತದ ಅಡಿಯಲ್ಲಿ ನೀಡಿದ ಹೇಳಿಕೆಗಳ ಆಧಾರದ ಮೇಲೆ ತನಿಖಾ ಸಂಸ್ಥೆಯು ತನ್ನನ್ನು ವಿಚಾರಣೆಗೆ ಕರೆಸಿದೆ ಎಂದು ಬಿಆರ್‌ಎಸ್ ನಾಯಕಿ ಆರೋಪಿಸಿದ್ದಾರೆ.
Delhi Liquor Policy Case: ED ರಿಮಾಂಡ್ ನೋಟ್‌ನಲ್ಲಿ ಕೆಸಿಆರ್ ಪುತ್ರಿ ಕವಿತಾ ಹೆಸರು!