ಅಬಕಾರಿ ಹಗರಣ: 10 ಲಕ್ಷದ ಹೊಟೇಲ್‌ ರೂಮ್‌ನಲ್ಲಿ ಕವಿತಾ ವಾಸ, 9 ಫೋನ್‌ಗಳ ನಾಶ: ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ದೆಹಲಿ ಅಬಕಾರಿ ಕಾಯ್ದೆ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್‌ನಲ್ಲಿ ಬಂಧಿತರಾಗಿರುವ ಬಿಆರ್‌ಎಸ್‌ ಶಾಸಕಿ ಕೆ ಕವಿತಾ, ಪ್ರಕರಣದ ಸಾಕ್ಷ್ಯಧಾರಗಳಿದ್ದ 9 ಫೋನ್‌ಗಳನ್ನು ಕ್ಲೀನ್ ಮಾಡಿದ್ದರು  ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪೂರಕ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Delhi Excise scam Kavita stays in Rs 10 lakh hotel room destroys 9 phones ED mention in chargesheet akb

ನವದೆಹಲಿ: ದೆಹಲಿ ಅಬಕಾರಿ ಕಾಯ್ದೆ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್‌ನಲ್ಲಿ ಬಂಧಿತರಾಗಿರುವ ಬಿಆರ್‌ಎಸ್‌ ಶಾಸಕಿ ಕೆ ಕವಿತಾ, ಪ್ರಕರಣದ ಸಾಕ್ಷ್ಯಧಾರಗಳಿದ್ದ 9 ಫೋನ್‌ಗಳನ್ನು ಕ್ಲೀನ್ ಮಾಡಿದ್ದರು. ಜೊತೆಗೆ ಫೈವ್ ಸ್ಟಾರ್ ಹೊಟೇಲ್‌ನಲ್ಲಿ 10 ಲಕ್ಷ ಮೌಲ್ಯದ ಹೊಟೇಲ್‌ ರೂಮ್ ಬುಕ್ ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪೂರಕ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿ ಆಗಿದೆ. 

ಅಲ್ಲದೇ ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷಕ್ಕೆ  ಮದ್ಯದ ರವಾನಿಗೆಗೆ ಬದಲಾಗಿ 100 ಕೋಟಿ ರೂ ಪಾವತಿಸಲು ಸೌತ್ ಗ್ರೂಪ್ ಜೊತೆಗೂಡಿ ಬಿಆರ್‌ಎಸ್ ಶಾಸಕಿ ಕೆ ಕವಿತಾ ಪಿತೂರಿ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಈ ಹಿಂದೆಯೇ ಆರೋಪಿಸಿದೆ. ಇದರ ಜೊತೆಗೆ  ಇಂಡೋ ಸ್ಪೀರಿಟ್‌ನ ಸ್ಟಾಕ್‌ನಲ್ಲಿ ಪಾಲು ಸ್ವಾಧೀನಪಡಿಸಿಕೊಳ್ಳಲು ಸಂಚು ಹೂಡಿದ್ದರು ಹಾಗೂ ಅಂತಿಮವಾಗಿ ಈ ಅಬಕಾರಿ ಪಾಲಿಸಿ ರದ್ದಾಗುವುದಕ್ಕೂ ಮೊದಲು ಲಾಭದ 12 ಪ್ರತಿಶತದಷ್ಟು ಅಂಶವನ್ನು ಪಡೆದು ಅಂತಿಮವಾಗಿ 192. 8 ಕೋಟಿ ಲಾಭ ಗಳಿಸಿದ್ದಾರೆ ಎಂದು ಇಡಿ ಆರೋಪಿಸಿದೆ.

ದೆಹಲಿ ಅಬಕಾರಿ ಹಗರಣ: ನಾನು ಬಿಜೆಪಿ ಕಸ್ಟಡಿಯಲ್ಲಿದ್ದೇನೆ, ಸಿಬಿಐ ಕಸ್ಟಡಿಯಲ್ಲಿ ಅಲ್ಲ: ಕೆ ಕವಿತಾ

ಈ ಕಿಕ್‌ಬ್ಯಾಕ್‌ಗಳನ್ನು ನ್ಯಾಯಸಮ್ಮತವಲ್ಲದ ಅನುಕೂಲಗಳಾದ ವಿವಿಧ ಲಿಕ್ಕರ್ ಇಂಡಸ್ಟ್ರಿಗಳಲ್ಲಿ ಸೌತ್ ಗ್ರೂಪ್‌ಗೆ ಪಾಲನ್ನು ಖಾತ್ರಿಪಡಿಸುವುದು, ಅತಿದೊಡ್ಡ ಲಿಕ್ಕರ್ ತಯಾರಕರು ಅಂದರೆ ಪೆರ್ನೋಡ್ ರಿಕಾರ್ಡ್ ಸಂಸ್ಥೆಗೆ 'ಸೌತ್ ಗ್ರೂಪ್'ನ ಸಗಟು ವ್ಯಾಪಾರಕ್ಕೆ ನಿರ್ದೇಶಿಸುವುದು ಜೊತೆಗೆ ಬಹು ಚಿಲ್ಲರೆ ವಲಯಗಳಲ್ಲಿ ಶೇರು ಹೊಂದಲು ಅವಕಾಶ ನೀಡುವುದು  ಮುಂತಾದವುಗಳಿಗೆ ಪ್ರತಿಯಾಗಿ ಪಾವತಿಸಲಾಗಿದೆ ಎಂದು ಇಡಿ ತನ್ನ ದಾಖಲೆಯಲ್ಲಿ ಹೇಳಿದೆ. ಹೀಗೆ ಪಡೆದ 100 ಕೋಟಿಯ ಕಿಕ್‌ಬ್ಯಾಕ್ ಹಣವನ್ನು ಅಕ್ರಮ ಮಾರ್ಗಗಳ ಮೂಲಕ ಗೋವಾಕ್ಕೆ ಎಎಪಿಯ ಚುನಾವಣಾ ಖರ್ಚು ವೆಚ್ಚಕ್ಕಾಗಿ ವರ್ಗಾಯಿಸಲಾಯಿತು ಎಂದು ಇಡಿ ಆರೋಪಿಸಿದೆ. 

ಕವಿತಾ ಮತ್ತು ಸಮೀರ್ ಮಹೇಂದ್ರು ಸೇರಿದಂತೆ ಇತರ ಸೌತ್ ಗ್ರೂಪ್ ಸದಸ್ಯರು ತಮ್ಮ ಈ ಅವ್ಯವಹಾರದ ಅಪರಾಧವನ್ನು ಮುಚ್ಚಿ ಹಾಕಲು ಅಥವಾ ಸರಿ ಪಡಿಸಲು  ಎಲ್ಎನ್‌ಡೋ ಸ್ಪಿರಿಟ್ಸ್ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ" ಎಂದು ಇಡಿ ಹೇಳಿಕೊಂಡಿದೆ. ಅಲ್ಲದೇ ಪೆರ್ನೋಡ್ ರಿಕಾರ್ಡ್ ಇಂಡಿಯಾದ ಷೇರುಗಳಿಗೆ ಇವರ ಪ್ರವೇಶವು ಕೃತಕವಾದ ಹೆಚ್ಚಿನ ಲಾಭವನ್ನು ಗಳಿಸಿದೆ ಎಂದು ಸಂಸ್ಥೆ ಹೇಳಿದೆ. ಈ ಎಲ್ಲಾ ಅಕ್ರಮಗಳಿಂದ ದೆಹಲಿ ಸರ್ಕಾರಕ್ಕೆ 582 ಕೋಟಿ ರೂ ನಷ್ಟವಾಗಿದೆ ಎಂದು ಇಡಿ ಹೇಳಿದೆ. 

ಅಪ್‌ಗೆ 25 ಕೋಟಿ ರು. ನೀಡಿ: ಮದ್ಯ ಉದ್ಯಮಿಗೆ ಕವಿತಾ ಬೆದರಿಕೆ!

ಸೋಮವಾರ ಮಧ್ಯಾಹ್ನದ ನಂತರ ಇಡಿ ಸಲ್ಲಿಸಿದ 177 ಪುಟಗಳ ಹೊಸ ಚಾರ್ಜ್‌ಶೀಟ್‌ನಲ್ಲಿ ಕವಿತಾ ಅವರನ್ನು ಆರೋಪಿ ಸಂಖ್ಯೆ 32 ಎಂದು ಗುರುತಿಸಲಾಗಿದೆ. ತನಿಖಾಸಂಸ್ಥೆ ಪ್ರಕಾರ, ಕವಿತಾ ಒಟ್ಟು 8 ಫೋನ್‌ಗಳನ್ನು ತನಿಖಾ ಸಂಸ್ಥೆಗೆ ನೀಡಿದ್ದಾರೆ. ಅದರಲ್ಲಿ ಎರಡು ಐಫೋನ್ 13 ಮಿನಿ ಹಾಗೂ 4 ಐಫೋನ್ 13, ಎರಡು ಐಫೋನ್ 14 ಪ್ರೊ ಆಗಿದೆ. ಈ ಫೋನ್‌ಗಳನ್ನು ಫಾರ್ಮೆಟ್ ಮಾಡಲಾಗಿದೆಯೇ ಎಂದು ತನಿಖಾ ಸಂಸ್ಥೆ ಕೇಳಿದಾಗ ಕವಿತಾ ನಕರಾತ್ಮಕವಾಗಿ ಉತ್ತರ ನೀಡಿದ್ದಾರೆ. ಆದರೆ ಪೊರೆನ್ಸಿಕ್ ವರದಿ ವೇಳೆ ಕವಿತಾ ಅವರು ಸಿಕ್ಕಿಬಿದ್ದಿದ್ದರು. ಆಗ ಬರೀ ಕೇವಲ ಒಂದು ಫೋನನ್ನು ಮಾತ್ರ ಫಾರ್ಮೆಟ್ ಮಾಡಲಾಗಿದೆ ಎಂದು ಕವಿತಾ ಉತ್ತರಿಸಿದ್ದರು. ಅಲ್ಲದೇ ತಾನು ಫೋನ್ ನಾಶ ಮಾಡಿರುವುದನ್ನು ಅವರು ಮತ್ತೆ ಮತ್ತೆ ನಿರಾಕರಿಸಿದ್ದರು. ಹೀಗಾಗಿ ಈ ವಿಚಾರದಲ್ಲಿ ಪ್ರಶ್ನೆ ಮಾಡಿದಾಗಲೆಲ್ಲಾ ಕವಿತಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಇಡಿ ದೂರಿದೆ. 

Breaking: ಕೆ.ಕವಿತಾಗೆ ಮುಗಿಯದ ಸಂಕಷ್ಟ, ಇಡಿ ಬೆನ್ನಲ್ಲಿಯೇ ಸಿಬಿಐನಿಂದ ಬಂಧನ!

ಕವಿತಾ ಅವರ ನ್ಯಾಯಾಂಗ ಬಂಧನವನ್ನು ಇವತ್ತಿನವರೆಗೆ ವಿಸ್ತರಿಸಿದ ಬೆನ್ನಲೇ ಇಡಿ ನ್ಯಾಯಾಲಯಕ್ಕೆ ಈ ಚಾರ್ಜ್‌ಶೀಟನ್ನು ಸಲ್ಲಿಸಿದೆ.

Latest Videos
Follow Us:
Download App:
  • android
  • ios