ದೆಹಲಿ ಅಬಕಾರಿ ಹಗರಣ: ನಾನು ಬಿಜೆಪಿ ಕಸ್ಟಡಿಯಲ್ಲಿದ್ದೇನೆ, ಸಿಬಿಐ ಕಸ್ಟಡಿಯಲ್ಲಿ ಅಲ್ಲ: ಕೆ ಕವಿತಾ

ದೆಹಲಿ ಅಬಕಾರಿ ಹಗರಣದಲ್ಲಿ ಲಂಚ ಪಡೆದ ಆರೋಪದಲ್ಲಿ ಜೈಲು ಪಾಲಾಗಿರುವ ಬಿಆರ್‌ಎಸ್ ನಾಯಕಿ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಪುತ್ರಿ ಕೆ ಕವಿತಾ ಅವರ ಸಿಬಿಐ ಕಸ್ಟಡಿ ಇಂದು ಅಂತ್ಯವಾಗಿದ್ದು, ಏಪ್ರಿಲ್ 23ರವರೆಗೆ ಅವರನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

Delhi excise scam: I am in BJP custody not in CBI custody K Kavitha akb

ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಲಂಚ ಪಡೆದ ಆರೋಪದಲ್ಲಿ ಜೈಲು ಪಾಲಾಗಿರುವ ಬಿಆರ್‌ಎಸ್ ನಾಯಕಿ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಪುತ್ರಿ ಕೆ ಕವಿತಾ ಅವರ ಸಿಬಿಐ ಕಸ್ಟಡಿ ಇಂದು ಅಂತ್ಯವಾಗಿದ್ದು, ಏಪ್ರಿಲ್ 23ರವರೆಗೆ ಅವರನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಮಾರ್ಚ್‌ 15 ರಂದು ಬಂಧಿಸಲ್ಪಟ್ಟು ತಿಹಾರ್‌ ಜೈಲಿನಲ್ಲಿದ್ದ ಕೆ ಕವಿತಾ ಅವರನ್ನು ತಿಹಾರ್‌ ಜೈಲಿನಲ್ಲೇ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈಗ 3 ದಿನಗಳ ಸಿಬಿಐ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. 

ಇದಕ್ಕೂ ಮೊದಲು ಮಗನ ಪರೀಕ್ಷೆ ಇರುವ ಕಾರಣ ಮಧ್ಯಂತರ ಜಾಮೀನು ನೀಡಬೇಕು ಎನ್ನುವ ಕೆ.ಕವಿತಾ ಅವರನ್ನು ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್‌ ಇವರಿಗೆ  ಏಪ್ರಿಲ್‌ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.. ಇದರ ನಡುವೆ ತಿಹಾರ್‌ ಜೈಲಿನಲ್ಲಿಯೇ ಕವಿತಾ ಅವರನ್ನು ವಿಚಾರಣೆ ನಡೆಸಿದ್ದ ಸಿಬಿಐ ತಾನೂ ಕೂಡ ಈಕೆಯನ್ನು ಬಂಧಿಸಿರುವುದಾಗಿ ತಿಳಿಸಿತ್ತು. ಈಗ 3 ದಿನಗಳ ಸಿಬಿಐ ಕಸ್ಡಡಿ ಮುಗಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈಗ ನ್ಯಾಯಾಲಯ ಆಕೆಗೆ ಈ ಹಿಂದಿದ್ದಂತೆ ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. 

ದೆಹಲಿ ಮದ್ಯ ಹಗರಣ: ಜೈಲಿನಲ್ಲಿರುವ ಕೆಸಿಆರ್‌ ಪುತ್ರಿ ಸಿಬಿಐನಿಂದ ಅರೆಸ್ಟ್‌

ಆಕೆಯನ್ನು ಹೆಚ್ಚಿನ ಕಸ್ಟಡಿ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಸಿಬಿಐ, ನ್ಯಾಯಾಲಯಕ್ಕೆ ತಿಳಿಸಿದೆ. ಇದರ ಜೊತೆಗೆ ದೀಪಕ್ ನಗರ್ ಜೊತೆಗೆ ಕವಿತಾ ಅವರನ್ನು ಪ್ರತಿನಿಧಿಸಿದ ವಕೀಲ ನಿತೇಶ್ ರಾಣಾ ಅವರು ಪೊಲೀಸ್ ಕಸ್ಟಡಿಯನ್ನು ವಿರೋಧಿಸಿದರು, ಕಸ್ಟಡಿ ವಿಚಾರಣೆಗೆ ಇನ್ನು ಮುಂದೆ ಅವರ ಅಗತ್ಯವಿಲ್ಲದ ಕಾರಣ ಅವರನ್ನು ಕಸ್ಟಡಿಯಲ್ಲಿಡಲು ಆಧಾರಗಳು ಸಾಕಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದರು.

46 ವರ್ಷದ ಕವಿತಾ ಅವರನ್ನು ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಇಡಿ ಅಧಿಕಾರಿಗಳು ಬಂಧಿಸಿ ಕರೆತಂದಿದ್ದರು.  ಈಗ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಅವರನ್ನು ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೆ ಕವಿತಾ, ನಾನು ಇರುವುದು ಸಿಬಿಐ ಕಸ್ಟಡಿಯಲ್ಲಿ ಅಲ್ಲ, ಬಿಜೆಪಿ ಕಸ್ಟಡಿಯಲ್ಲಿ, ಬಿಜೆಪಿ ಹೊರಗೆ ಏನು ಮಾತನಾಡುತ್ತಿದೆಯೋ ಅದನ್ನೇ ಸಿಬಿಐ ಅಧಿಕಾರಿಗಳು ಒಳಗೆ ಕೇಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೇಳಿದ್ದನ್ನೇ ಕೇಳುತ್ತಿದ್ದಾರೆ, ಅದರಲ್ಲಿ ಹೊಸದೇನು ಇಲ್ಲ ಎಂದು ಅವರು ಹೇಳಿದ್ದಾರೆ. 

ಮನೆ ಊಟ, ಮೆತ್ತನೆಯ ಬೆಡ್‌ ಕೊಡ್ತಿಲ್ಲ... ಕೋರ್ಟ್‌ ಮೆಟ್ಟಿಲೇರಿದ ಕೆಸಿಆರ್ ಪುತ್ರಿ ಕೆ.ಕವಿತಾ!

 

Latest Videos
Follow Us:
Download App:
  • android
  • ios