ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಹೊರ ಬಿದ್ದಿದೆ. ಸರಳ ಬಹುಮತ ಸಾಧಿಸಿರುವ ಆಮ್ ಆದ್ಮಿ ಪಕ್ಷ 70 ಕ್ಷೇತ್ರಗಳಲ್ಲಿ 63 ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಈ ಮೂಲಕ ಆಮ್ ಆದ್ಮಿ ಪಕ್ಷ ಮತ್ತೆ ರಾಷ್ಟ್ರ ರಾಜಧಾನಿಯ ಗದ್ದುಗೆ ಏರುವುದು ಖಚಿತವಾಗಿದೆ. ಇತ್ತ ಬಿಜೆಪಿ ಎರಡಂಕಿ ದಾಟಲು ವಿಫಲವಾದರೆ, ಕಾಂಗ್ರೆಸ್ ಒಂದೂ ಸ್ಥಾನದಲ್ಲಿ ಮುನ್ನಡೆ ಸಾಧಿಸಿಲ್ಲ.

ಈ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಟ್ವಿಟರ್‌ನಲ್ಲಿ #DelhiElectionResult ಹ್ಯಾಷ್ ಟ್ಯಾಗ್ ಭಾರೀ ಟ್ರೆಂಡ್ ಆಗಿದೆ. ನೆಟ್ಟಿಗರು ಹಲವಾರು ಮೀಮ್ಸ್ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಕಾಲೆಳೆಯಲಾರಂಭಿಸಿದ್ದಾರೆ. ಅತ್ತ ಗೆದ್ದು ಬೀಗಿದ ಕೇಜ್ರೀವಾಳ್ ನೇತೃತ್ವದ ಆಪ್ ಪಕ್ಷಕ್ಕೆ ಭೇಷ್ ಎಂದಿದ್ದಾರೆ.

ಟ್ವಿಟರ್‌ನಲ್ಲಿ ಗಮನಸೆಳೆದ ಕೆಲ ಪೋಸ್ಟ್‌ಗಳು ಹೀಗಿವೆ ನೋಡಿ

ಇನ್ನು ಈಗಾಗಲೇ ಆಂ್ ಆದ್ಮಿ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದ್ದು, ಅರವಿಂದ್ ಕೇಜ್ರೀವಾಲ್ ಫೆಬ್ರವರಿ 14 ರಂದೇ ಪ್ರಮಾಣ ವಚನ ಸ್ವೀಕರಿಸುತ್ತಾರೆಂಬ ಮಾತುಗಳೂ ಕೇಳಿ ಬಂದಿವೆ.