ನವದೆಹಲಿ (ಸೆ.25): ಕೊರೋನಾ ಸೋಂಕಿಗೆ ತುತ್ತಾದ ಕಾರಣಕ್ಕೆ ಬುಧವಾರವಷ್ಟೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರಿಗೆ ಡೆಂಘೀ ಜ್ವರವಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. 

ಸಿಸೋಡಿಯಾ ಅವರ ಪ್ಲೇಟ್‌ಲೆಟ್‌ಗಳ ಎಣಿಕೆಯಲ್ಲೂ ಭಾರೀ ಪ್ರಮಾಣದ ಕುಸಿತ, ಕೊರೋನಾ ಮತ್ತು ಡೆಂಘೀ ಜ್ವರವಿರುವ ಕಾರಣ ಅವರನ್ನು ಗುರುವಾರ ಸಂಜೆ ಮ್ಯಾಕ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 
ಸದ್ಯ ಮ್ಯಾಕ್ಸ್‌ ಆಸ್ಪತ್ರೆಯ ಐಸಿಯುನಲ್ಲಿರುವ ಸಿಸೋಡಿಯಾ ಅವರ ವಯೋಮಿತಿ, ಇತರ ಕಾಯಿಲೆಗಳು ಸೇರಿದಂತೆ ಇನ್ನಿತರ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಅವರಿಗೆ ಎರಡೂ ಕಾಯಿಲೆಗಳಿಗೆ ಚಿಕಿತ್ಸೆ ಮುಂದುವರಿಸಲಾಗುತ್ತದೆ. ಅವರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಸೋಂಕಿತರಿಗೆ ಹಾಸಿಗೆ ಮೀಸಲಿಡದ 4 ಆಸ್ಪತ್ರೆ ವಿರುದ್ಧ FIRಗೆ ಆದೇಶ

ಈಗಾಗಲೇ ಕೊರೋನಾ ಸೋಂಕಿಗೆ ಹಲವು ಜನಪ್ರತಿನಿಧಿಗಳು ತುತ್ತಾಗಿದ್ದು, ಸಿಸೋಡಿಯಾ ಆರೋಗ್ಯ ಸ್ಥಿತಿಯೂ ಸಾಕಷ್ಟು ಗಂಭೀರವಾಗಿದೆ. 

ಕಳೆದ ಎರಡು ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಸುರೇಶ್ ಅಂಗಡಿ ಕೊರೋನಾದಿಂದ ಮೃತಪಟ್ಟಿದ್ದಾರೆ.