Asianet Suvarna News Asianet Suvarna News

ಕೇಜ್ರಿವಾಲ್‌ಗೆ ಮತ್ತೊಂದು ಶಾಕ್, ಆಪ್ತ ಕಾರ್ಯದರ್ಶಿ ಅಮಾನತು ಎತ್ತಿಹಿಡಿದ CAT!

ಅಬಕಾರಿ ಹಗರಣ ದೆಹಲಿ ಸರ್ಕಾರವನ್ನೇ ಸುತ್ತಿಕೊಳ್ಳುತ್ತಿದೆ. ಜೈಲು ಸೇರಿದ ಮುಖ್ಯಮಂತ್ರಿ, ನಾಯಕರಿಗೆ ಜಾಮೀನು ಸಿಗುತ್ತಿಲ್ಲ. ಇತ್ತ ಈ ಹಗರಣ ಅಧಿಕಾರಿಗಳ ಮಟ್ಟದಲ್ಲೂ ಕೋಲಾಹಲ ಸೃಷ್ಟಿಸಿದೆ. ಇದೇ ಪ್ರಕರಣ ಸಂಬಂಧ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ 2 ದಿನಗಳ ಹಿಂದೆ ಅಮಾನತ್ತಾಗಿದ್ದರು. ಇದೀಗ ಅಮಾನತು ನಿರ್ಧಾರ ಸರಿ ಎಂದು ಕೇಂದ್ರ ಆಡಳಿತ ಟ್ರಿಬ್ಯೂನಲ್ ಹೇಳಿದೆ.

CAT Refuse to stay termination of Personal Secretary of CM Arvind Kejriwal ckm
Author
First Published Apr 15, 2024, 4:09 PM IST

ನವದೆಹಲಿ(ಏ.15) ದೆಹಲಿ ಅಬಕಾರಿ ನೀತಿ ಹಗರಣ ಕುಣಿಕೆ ಬಿಗಿಯಾಗುತ್ತದೆ. ದೆಹಲಿಯ ಆಪ್ ಸರ್ಕಾರದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಒಬ್ಬೊಬ್ಬ ನಾಯಕರು ಜೈಲು ಸೇರುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇದುವರೆಗೆ ಜಾಮೀನು ಸಿಕ್ಕಿಲ್ಲ. ಇದರ ಬೆನ್ನಲ್ಲೇ ಸಿಎಂ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅಮಾನತ್ತಿಗೆ ತಡೆ ನೀಡಲು ಕೇಂದ್ರ ಆಡಳಿತ ಟ್ರಿಬ್ಯೂನಲ್ ನಿರಾಕರಿಸಿದೆ. ಅಮಾನತು ನಿರ್ಧಾರವನ್ನು ಎತ್ತಿ ಹಿಡಿಯುವ ಮೂಲಕ ದೆಹಲಿ ಅಬಕಾರಿ ನೀತಿ ಹಗರಣ ಅಧಿಕಾರಿಗಳ ಮಟ್ಟದಲ್ಲೂ ಭಾರಿ ಭ್ರಷ್ಟಚಾರ ನಡೆದಿದೆ ಅನ್ನೋ ಸುಳಿವು ನೀಡುತ್ತಿದೆ.

ಏಪ್ರಿಲ್ 10 ರಂದು ವಿಜಿಲೆನ್ಸ್ ಡೆಪಾರ್ಟ್‌ಮೆಂಟ್ ಕೇಜ್ರಿವಾಲ್ ಕಾರ್ಯದರ್ಶಿ ಭಿಭವ್ ಕುಮಾರ್ ಅವರನ್ನು ಅಮಾನತು ಮಾಡಿತ್ತು. ಕಾರ್ಯದರ್ಶಿ ಸ್ಥಾನಕ್ಕೆ ಬಿಭವ್ ಕುಮಾರ್ ನೇಮಕ ಕಾನೂನು ಬಾಹಿರ ಎಂದು ವಿಜಿಲೆನ್ಸ್ ಡಿಪಾರ್ಟ್‌ಮೆಂಟ್ ಆದೇಶ ನೀಡಿತ್ತು. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ  ಹಲ್ಲೆ ನಡೆಸಿದ ಆರೋಪದಡಿ 2007ರಲ್ಲಿ ಇದೇ ಬಿಭವ್ ಕುಮಾರ್ ಮೇಲೆ ಪ್ರಕರಣ ದಾಖಲಾಗಿದೆ.

ಮುಖ್ಯಮಂತ್ರಿ ಕಾರ್ಯದರ್ಶಿ ಸ್ಥಾನಕ್ಕೆ ಖಾಸಗಿ ವ್ಯಕ್ತಿಯನ್ನು ಅಥವಾ ಸಿಎಂ ಕಚೇರಿ ಆಯ್ಕೆ ಮಾಡುವ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಆ ವ್ಯಕ್ತಿಯ ಹಿನ್ನಲೆ ಪರಿಶೀಲಿಸದೆ ನೇಮಕ ಮಾಡಲಾಗಿದೆ. ಕ್ರಿಮಿನಲ್ ಪ್ರಕರಣ ಇದ್ದರೂ ನೇಮಕ ಮಾಡಲಾಗಿದೆ. ಇದರ ಜೊತೆಗೆ ದೆಹಲಿ ಅಬಕಾರಿ ಹಗರಣ ಸಂಬಂಧ ಫೆಬ್ರವರಿ ತಿಂಗಳಲ್ಲಿ ಕಾರ್ಯದರ್ಶಿ ಬಿಭವ್ ಕುಮಾರ್‌ಗೆ ಇಡಿ ಅದಿಕಾರಿಗಳು ಸಮನ್ಸ್ ನೀಡಿದ್ದರು.

ವಿಜಿಲೆನ್ಸ್ ವಿಭಾಗದ ನಿರ್ಧಾರವನ್ನು ಕೇಂದ್ರ ಆಡಳಿತ ಟ್ರಿಬ್ಯೂನಲ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಕೇಂದ್ರ ಆಡಳಿತ ಟ್ರಿಬ್ಯೂನಲ್ ಇದೀಗ ಅಮಾನತು ತಡೆ ನೀಡಲು ನಿರಾಕರಿಸಿದೆ. ಇಷ್ಟೇ ಅಲ್ಲ ವಿಜಿಲೆನ್ಸ್ ವಿಭಾಗ ನೀಡಿರುವ ಆದೇಶವನ್ನು ಎತ್ತಿ ಹಿಡಿದಿದೆ. 

ಕಾರ್ಯದರ್ಶಿ ಅಮಾನತು ಆಪ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ ತಂದಿದೆ. ಮುಖ್ಯಮಂತ್ರಿ ಜೈಲು ಸೇರಿದ್ದರೆ, ಕಾರ್ಯದರ್ಶಿ ಅಮಾನತುಗೊಂಡಿದ್ದಾರೆ. ಇದೀಗ ದೆಹಲಿ ಆಡಳಿತ ಮತ್ತಷ್ಟು ಕ್ಲಿಷ್ಟವಾಗಿದೆ. 

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಕೇಜ್ರಿವಾಲ್ ಆಪ್ತ ಕಾರ್ಯದರ್ಸಿ ಬಿಭವ್‌ ಕುಮಾರ್‌ , ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹಾಗೂ ಹಲವರು ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ಗಳನ್ನು ದುರುಪಯೋಗ, ಸಾಕ್ಷಿನಾಶಕ್ಕೆ ಬಳಸಿದ್ದರು ಎಂದು ಇ.ಡಿ. ತನ್ನ ಚಾರ್ಜ್‌ಶೀಟ್‌ನಲ್ಲಿ ನಮೂದಿಸಿತ್ತು. ಶಾಸಕ ದುರ್ಗೇಶ್‌ ಪಾಠಕ್‌ ಅವರು ಅಕ್ರಮ ಹಣವನ್ನು 2021ರ ಗೋವಾ ವಿಧಾನಸಭಾ ಚುನಾವಣೆಗೆ ಬಳಸಿದ್ದರು ಎಂದು ಇ.ಡಿ. ತನ್ನ ಜಾರ್ಜ್‌ಶೀಟ್‌ನಲ್ಲಿ ಆರೋಪಿಸಿತ್ತು. ಈ ಕಾರಣವಾಗಿ ಸೋಮವಾರ ಇಬ್ಬರನ್ನು ವಿಚಾರಣೆಗೆ ಒಳಪಡಿಸಿತು. ಈ ಹಿಂದೆಯೂ ಇವರ ವಿಚಾರಣೆ ನಡೆಸಿತ್ತು.

Breaking: ಸಿಎಂಗೆ ಸ್ಪೆಷಲ್‌ ಟ್ರೀಟ್‌ಮೆಂಟ್‌ ಸಾಧ್ಯವಿಲ್ಲ, ಕೇಜ್ರಿವಾಲ್‌ ಬಂಧನ ಸರಿ ಇದೆ ಎಂದ ಹೈಕೋರ್ಟ್‌!

Follow Us:
Download App:
  • android
  • ios