Asianet Suvarna News Asianet Suvarna News

ತಂದೆ-ತಾಯಿ ಆಶೀರ್ವಾದ ಪಡೆದು, ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ತಿಹಾರ್ ಜೈಲಿಗೆ ಹಿಂದಿರುಗಿದ ಅರವಿಂದ್ ಕೇಜ್ರಿವಾಲ್

ಜೂನ್ 1ಕ್ಕೆ ಸಿಎಂ ಕೇಜ್ರಿವಾಲ್ ಜಾಮೀನು ಅವಧಿ ಮುಕ್ತಾಯವಾಗಿತ್ತು. ತಿಹಾರ ಜೈಲಿಗೆ (Tihar Jail) ಹಿಂದಿರುಗುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.

Delhi CM  Arvind Kejriwal surrendered at Tihar jail mrq
Author
First Published Jun 2, 2024, 7:05 PM IST | Last Updated Jun 2, 2024, 7:05 PM IST

ನವದೆಹಲಿ: ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾದ ಹಿನ್ನೆಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ತಿಹಾರ್ ಜೈಲಿನ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ಜೂನ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ನೀಡಲಾಗಿದೆ. ಜೂನ್ 1ಕ್ಕೆ ಸಿಎಂ ಕೇಜ್ರಿವಾಲ್ ಜಾಮೀನು ಅವಧಿ ಮುಕ್ತಾಯವಾಗಿತ್ತು. ತಿಹಾರ ಜೈಲಿಗೆ (Tihar Jail) ಹಿಂದಿರುಗುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಕೇಜ್ರಿವಾಲ್ ಅವರ ಶುಗರ್ ಮತ್ತು ಬಿಪಿ ಲೆವಲ್ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 

ತಿಹಾರ್ ಜೈಲಿಗೆ ಹೋಗುವ ಮುನ್ನ ಪತ್ನಿ ಸುನಿತಾ ಮತ್ತು ಪಕ್ಷದ ಮುಖಂಡರ ಜೊತೆ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. ಆ ಬಳಿಕ ಆಂಜನೇಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಪಕ್ಷದ ಕಾರ್ಯಕರ್ತರು ಮತ್ತು ದೆಹಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

Exit Poll: ನರೇಂದ್ರ ಮೋದಿಗೆ ಮೂರನೇ ಬಾರಿ ಪ್ರಧಾನಿ ಸೀಟ್‌, ರಾಜ್ಯದಲ್ಲಿ ಕಾಂಗ್ರೆಸ್‌ಗಿಲ್ಲ ಡಬಲ್‌ ಡಿಜಿಟ್‌!

ನಿಮ್ಮ ಮಗ ಜೈಲಿಗೆ ಹೋಗ್ತಿದ್ದಾನೆ

ದೆಹಲಿಯ ಜನರೇ ಇಂದು ನಿಮ್ಮ ಮಗ ಜೈಲಿಗೆ ಹಿಂದಿರುಗಿ ಹೋಗುತ್ತಿದ್ದಾನೆ. ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎಂಬ ಕಾರಣಕ್ಕಾಗಿ ಅಲ್ಲ. ನಾವು ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದೇನೆಂದು ನನ್ನ ಜೈಲಿಗೆ ಕಳುಹಿಸಲಾಗುತ್ತಿದೆ. ಲೋಕಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು 500ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ರೂ ಅವರಿಗೆ ಒಂದು ಪೈಸೆಯೂ ಸಿಕ್ಕಿಲ್ಲ ಎಂದು ಹೇಳಿದರು. ಇದೇ ವೇಳೆ ಎಕ್ಸಿಟ್ ಪೋಲ್ ಅಂಕಿಅಂಶಗಳು ಸುಳ್ಳು ಎಂದು ಹೇಳಿದರು.  

ಎಎಪಿ ನಾಯಕರು ಮೆಡಿಕಲ್ ಆಧಾರದ ಮೇಲೆ ಮಧ್ಯಂತರ ಜಾಮೀನಿನ ಅವಧಿಯನ್ನು ಏಳು ದಿನಕ್ಕೆ ವಿಸ್ತರಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಎಎಪಿ ನಾಯಕರು ಸತ್ಯವನ್ನು ಮರೆ ಮಾಡುತ್ತಿದ್ದು, ಅವಶ್ಯವಿದ್ದರೆ ನಾವೇ ಅರವಿಂದ್ ಕೇಜ್ರಿವಾಲ್ ಅವರಿಗೆ ಏಮ್ಸ್ ಅಥವಾ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಜಾರಿ ನಿರ್ದೇಶನಾಲಯ ತನ್ನ ವಾದವನ್ನು ಮಂಡಿಸಿತ್ತು. ನ್ಯಾಯಾಲಯ ಮಧ್ಯಂತರ ಜಾಮೀನು ಅರ್ಜಿಯ (Interim bail) ಆದೇಶವನ್ನು ಜೂನ್ 5ಕ್ಕೆ ಕಾಯ್ದಿರಿಸಿದೆ. ಈ ಹಿನ್ನೆಲೆ ಇಂದು ಅರವಿಂದ್ ಕೇಜ್ರಿವಾಲ್ ಮತ್ತೆ ತಿಹಾರ್ ಜೈಲಿಗೆ ರಿಟರ್ನ್ ಆಗಿದ್ದಾರೆ. 

ಪಂಜಾಬಿ ಹಾಡಿನ ಮೂಲಕ ಇಂಡಿಯಾ ಮೈತ್ರಿ ಎಷ್ಟು ಸ್ಥಾನ ಗೆಲ್ಲಲಿದೆ ಎಂದ ರಾಹುಲ್ ಗಾಂಧಿ!

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಅರವಿಂದ್ ಕೇಜ್ರಿವಾಲ್, ಜೂನ್ 2ರಂದು ತಿಹಾರಿನ ಜೈಲಾಧಿಕಾರಿಗಳ ಮುಂದೆ ಶರಣಾಗೋದಾಗಿ ಹೇಳಿದ್ದಾರೆ. ನಾನು ಜೈಲಿಗೆ ಹೋದ ಬಳಿಕ ವಯಸ್ಸಾದ ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದರು. ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ತಿಹಾರ್ ಜೈಲಿಗೆ ಹೋಗುತ್ತೇನೆ. ಈ ಬಾರಿ ನನ್ನನ್ನು ಮತ್ತಷ್ಟು ಹಿಂಸಿಸಬಹುದು. ಆದ್ರೆ ನಾನು ಯಾವುದಕ್ಕೂ ಹೆದರಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

Latest Videos
Follow Us:
Download App:
  • android
  • ios