ಲೋಕಸಭಾ ಚುಾನವಣೆಯ ಮತಗಟ್ಟೆ ಸಮೀಕ್ಷೆಯಲ್ಲಿ ಇಂಡಿಯಾ ಒಕ್ಕೂಟ ಸರಾಸರಿ 150 ಸ್ಥಾನ ಗೆಲ್ಲಲಿದೆ ಎಂದಿದೆ. ಆದರೆ ರಾಹುಲ್ ಗಾಂಧಿ ಇಂಡಿಯಾ ಮೈತ್ರಿಯ ಎಷ್ಟು ಸ್ಥಾನ ಗೆಲ್ಲಲಿದೆ ಅನ್ನೋದನ್ನು ಸಿಧು ಮೂಸೆವಾಲ ಅವರ ಪಂಜಾಬಿ ಹಾಡಿನ ಮೂಲಕ ಉತ್ತರಿಸಿದ್ದಾರೆ. ಹಾಗಾದರೆ ರಾಹುಲ್ ಗಾಂಧಿ ನೀಡಿದ ಸಂಖ್ಯೆ ಎಷ್ಟು?
ನವದೆಹಲಿ(ಜೂನ್ 02) ಲೋಕಸಭಾ ಚುನಾವಣಾ ಫಲಿತಾಂಶದವರೆಗೆ ಮತಗಟ್ಟೆ ಸಮೀಕ್ಷೆ ಚರ್ಚೆಗಳು ನಡೆಯಲಿದೆ. ಜೊತೆಗೆ ಕುತೂಹಲ ಹಾಗೇ ಇರಲಿದೆ. ಈ ಬಾರಿಯ ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎಗೆ ಸರಾಸರಿ 350 ಸ್ಥಾನ ನೀಡಿದ್ದರೆ, ಇಂಡಿಯಾ ಒಕ್ಕೂಟಕ್ಕೆ ಸರಾಸರಿ 150 ಸ್ಥಾನ ನೀಡಲಾಗಿದೆ. ಆದರೆ ಕಾಂಗ್ರೆಸ್ ಈ ಮತಗಟ್ಟೆ ಸಮೀಕ್ಷೆ ಬಿಜೆಪಿ ಪ್ರೇರಿತ ಎಂದಿದೆ. ಆದರೆ ರಾಹುಲ್ ಗಾಂಧಿ ನೀಡಿದ ಉತ್ತರ ಇದೀಗ ಭಾರಿ ವೈರಲ್ ಆಗಿದೆ. ಇಂಡಿಯಾ ಮೈತ್ರಿ ಎಷ್ಟು ಸ್ಥಾನ ಗೆಲ್ಲಲಿದೆ ಅನ್ನೋ ಮಾಧ್ಯಮದ ಪ್ರಶ್ನೆಗೆ ರಾಹುಲ್ ಗಾಂಧಿ, ನೀವು ಸಿಧೂಮೂಸೆವಾಲ ಹಾಡು ಕೇಳಿದ್ದೀರಾ? ಎಂದು ಹಾಡಿನ ಸಾಲು ಉಚ್ಚರಿಸಿದ್ದಾರೆ. ಈ ಮೂಲಕ ಇಂಡಿಯಾ ಒಕ್ಕೂಟ ಗೆಲ್ಲುವ ಸ್ಥಾನಗಳ ಕುರಿತು ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಕುರಿತು ಮಾಧ್ಯಮ ಪ್ರತಿನಿಧಿಗಳು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸದ್ಯ ಪ್ರಕಟಗೊಂಡಿರುವ ಮತಗಟ್ಟೆ ಸಮೀಕ್ಷೆ ಬಿಜೆಪಿ ಹಾಗೂ ಮೋದಿ ಮಾಧ್ಯಮದ ಸಮೀಕ್ಷೆ ಎಂದು ತಿರುಗೇಟು ನೀಡಿದ್ದಾರೆ. ಇದೇ ವೇಳೆ ನಿಮ್ಮ ಪ್ರಕಾರ ಇಂಡಿಯಾ ಒಕ್ಕೂಟ ಎಷ್ಟು ಸ್ಥಾನ ಗೆಲ್ಲಲಿದೆ ಅನ್ನೋ ಪ್ರಶ್ನೆಗೆ, ನೀವು ಸಿಧು ಮೂಸೆವಾಲ ಅವರ 295 ಹಾಡು ಕೇಳಿದ್ದೀರಾ? ಎಂದು ಮರು ಪ್ರಶ್ನೆ ಹಾಕಿ ಸಂಖ್ಯೆ ಬಹಿರಂಗಪಡಿಸಿದ್ದಾರೆ.
Exit Poll Result ಇಂಡಿಯಾ ಮೈತ್ರಿಗೆ ಮತ ಹಾಕದ ಭಾರತ, ಮೋದಿಗೆ ಹ್ಯಾಟ್ರಿಕ್ ಬಹುಮತ!
ರಾಹುಲ್ ಗಾಂಧಿ ಪ್ರಕಾರ ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲಲಿದೆ ಎಂದಿದ್ದಾರೆ. ಆದರೆ ಈ ಸಂಖ್ಯೆಯನ್ನು ಸಿಧು ಮೂಸೆವಾಲ ಅವರ ಅತ್ಯಂತ ಜನಪ್ರಿಯ 295 ಹಾಡಿನ ಮೂಲಕ ಉತ್ತರಿಸಿದ್ದಾರೆ. ಹಂತಕರ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ನಾಯಕ, ಸಿಂಗರ್ ಸಿಧು ಮೂಸೆವಾಲ ಅವರ ಹಲವು ಹಾಡುಗಳಲ್ಲಿ 295 ಕೂಡ ಅತ್ಯಂತ ಜನಪ್ರಿಯ ಹಾಡಾಗಿದೆ. ಇದೀಗ ರಾಹುಲ್ ಗಾಂಧಿ ಇದೇ 295 ಹಾಡು ಕೇಳಿದ್ದೀರಾ? ಅಷ್ಟು ಸ್ಥಾನ ಗೆಲ್ಲಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲಲಿದೆ ಎಂದು ಹೇಳಿರುವುದು ರಾಹುಲ್ ಗಾಂಧಿ ಮೊದಲಲ್ಲ. ರಾಹುಲ್‌ಗೂ ಮೊದಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೇ ಸಂಖ್ಯೆ ಹೇಳಿದ್ದರು. 7ನೇ ಹಾಗೂ ಅಂತಿಮ ಹಂತದ ಮತದಾನದ ದಿನ ಇಂಡಿಯಾ ಒಕ್ಕೂಟ ನಾಯಕರು ದೆಹಲಿಯಲ್ಲಿ ಸಭೆ ಸೇರಿದ್ದರು. ಈ ವೇಳೆ ಲೋಕಸಭಾ ಚುನಾವಣೆ, ಫಲಿತಾಂಶಗಳ ಕುರಿತು ಚರ್ಚಿಸಿದ್ದರು. ಸಭೆ ಬಳಿಕ ಮತಾನಾಡಿದ ಮಲ್ಲಿಕಾರ್ಜುನ ಖರ್ಗೆ, ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲಲಿದೆ ಎಂದಿದ್ದರು.
ಮತದಾನ ಅಂತ್ಯದ ಬೆನ್ನಲ್ಲೇ ಫಲೋಡಿ ಸಟ್ಟಾ ಬಜಾರ್ ಭವಿಷ್ಯ ಪ್ರಕಟ, ಹಲವು ಲೆಕ್ಕಾಚಾರ ಉಲ್ಟಾ!
