ಮಧುಮೇಹ ನಿಯಂತ್ರಣಕ್ಕೆ ಮೌಖಿಕ ಔಷಧಗಳನ್ನು ಬಳಸುತ್ತಿದ್ದಾರೆ ಜೊತೆಗೆ ಕೇಜ್ರವಾಲ್‌ರಿಗೆ ಇನ್ಸುಲಿನ್ ಅಗತ್ಯವಿಲ್ಲವೆಂದು ತಿಳಿಸಿದ ವೈದ್ಯರು 

ನವದೆಹಲಿ(ಏ.21): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಬಂಧನಕ್ಕೂ ಮೊದಲೇ ಮಧುಮೇಹಕ್ಕೆ ಬಳಸುವ ಇನ್ನುಲಿನ್‌ ಪಡೆಯುವುದನ್ನು ನಿಲ್ಲಿಸಿದ್ದರು ಎಂದು ಜೈಲಧಿಕಾರಿಗಳು ದೆಹಲಿಯ ಲೆಫ್ಟಿನೆಂಟ್ ಗವರನರ್‌ಗೆ ಮಾಹಿತಿ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಕೇಜ್ರಿವಾಲ್ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದರೂ ಅವರಿಗೆ ಇನ್ಸುಲಿನ್ ನೀಡದೇ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆಮ್ ಆದ್ಮ ಪಕ್ಷದ ನಾಯಕರ ಆರೋಪದ ಹಿನ್ನೆಲೆಯಲ್ಲಿ ಈ ಕುರಿತು 24 ಗಂಟೆಗಳಲ್ಲಿ ವರದಿ ನೀಡುವಂತೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವರದಿ ಸಲ್ಲಿಸಿರುವ ಅಧಿಕಾರಿಗಳು, ಬಂಧನಕ್ಕೂತಿಂಗಳ ಮೊದಲೇ ಕೇಬ್ರಿವಾಲ್ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. 

ಜೈಲಿನಲ್ಲೇ ಅರವಿಂದ್ ಕೇಜ್ರಿವಾಲ್‌ ಹತ್ಯೆಗೆ ಸಂಚು: ಆಪ್‌ ಆರೋಪ

ಮಧುಮೇಹ ನಿಯಂತ್ರಣಕ್ಕೆ ಮೌಖಿಕ ಔಷಧಗಳನ್ನು ಬಳಸುತ್ತಿದ್ದಾರೆಂದು ತಿಳಿಸಿದ್ದಾರೆ. ಜೊತೆಗೆ ಕೇಜ್ರವಾಲ್‌ರಿಗೆ ಇನ್ಸುಲಿನ್ ಅಗತ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.