ದೆಹಲಿ(ಎ.11): ಕೊರೋನಾ ಲಸಿಕೆ ಹಾಕಿಕೊಂಡರೆ ತೆರಿಗೆಯಲ್ಲಿ ರಿಯಾಯಿತಿ ಸಿಗಲಿದೆ. ಜನರು ವ್ಯಾಕ್ಸೀನ್ ಹಾಕಿಸಿಕೊಳ್ಳಲು ಪ್ರೋತ್ಸಾಹಿಸಲು ಈ ರೀತಿಯ ಒಂದು ಆಫರ್ ನೀಡಲಾಗಿದೆ.

ಅರ್ಹ ಕುಟುಂಬ ಸದಸ್ಯರಿಗೆ COVID-19 ವಿರುದ್ಧ ಲಸಿಕೆ ನೀಡಲಾಗಿದೆ ಎಂದು ಸಾಬೀತುಪಡಿಸುವ ಪ್ರಮಾಣಪತ್ರಗಳನ್ನು ವಸತಿ ಆಸ್ತಿ ಮಾಲೀಕರು ನೀಡಿದರೆ ಅವರಿಗೆ ಶೇ.5ರರಷ್ಟು ತೆರಿಗೆ ರಿಯಾಯಿತಿ ಸಿಗಲಿದೆ.

ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ: SSLC, PUC ಆದವರಿಗೂ ಅವಕಾಶ

ಉತ್ತರ ದೆಹಲಿ ಮಹಾನಗರ ಪಾಲಿಕೆ ಈ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಸಲ್ಲಿಸುವಾಗ ಹೆಚ್ಚುವರಿ 5% ರಿಯಾಯಿತಿ ನೀಡಿದೆ. 2021 ರ ಜೂನ್ 30 ರೊಳಗೆ ದೊಡ್ಡ ಮೊತ್ತವನ್ನು ಪಾವತಿಸಿದರೆ ವಸತಿ ಮಾಲೀಕರಿಗೆ ಈಗಾಗಲೇ ಆಸ್ತಿ ತೆರಿಗೆಯಲ್ಲಿ 15% ರಿಯಾಯಿತಿ ನೀಡಲಾಗಿದೆ.

ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಆಸ್ಪತ್ರೆಗಳ ಶೇ.50 ರಷ್ಟು ಬೆಡ್‌ಗಳನ್ನು ಕೊರೋನಾ ಸೋಂಕಿತರಿಗಾಗಿ  ಮೀಸಲಿಡಲಾಗಿದೆ. ನಗರದಲ್ಲಿ ಶನಿವಾರ 77,374 ಪ್ರಕರಣ ದಾಖಲಾಗಿದೆ.