ದೆಹಲಿ ಸ್ಪೋಟದ ರೂವಾರಿ ವೈದ್ಯ ಉಮರ್ ಆಪ್ತ ರಶೀದ್ ಅರೆಸ್ಟ್, ಕೃತ್ಯಕ್ಕೆ 20 ಲಕ್ಷ ರೂ ಪಾವತಿ ಮಾಡಿರುವ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಜೈಶ್ ಇ ಮೊಮ್ಮದ್ ಉಗ್ರರು ಹವಾಲ ಮೂಲಕ ಮೊತ್ತ ಪಾವತಿ ಮಾಡಿದ್ದಾರೆ.
ನವದೆಹಲಿ (ನ.16) ದೆಹೆಲಿ ಕೆಂಪು ಕೋಟೆ ಬಳಿ ನಡೆಸಿದ ಉಗ್ರರ ಸ್ಫೋಟ ಪ್ರಕರಣದಲ್ಲಿ 10 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣವ್ನು ಎನ್ಐಎ ತನಿಖೆ ನಡೆಸುತ್ತಿದೆ. ಇದೀಗ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸ್ಫೋಟದ ರೂವಾರಿ ವೈದ್ಯ ಉಮರ್ ನಬಿ ಆಪ್ತ, ಕಾಶ್ಮೀರ ಮೂಲಕ ಅಮಿರ್ ರಶೀದ್ ಅಲಿಯನ್ನು ಬಂಧಿಸಲಾಗಿದೆ. ವೈದ್ಯ ಉಮರ್ ನಬಿ ಜೊತೆ ಸೇರಿಕೊಂಡ ಅಮಿರ್ ರಶೀದ್ ಅಲಿ ಈ ಬಹುದೊಡ್ಡ ಉಗ್ರ ದಾಳಿಗೆ ಸಂಚು ರೂಪಿಸಿದ್ದ. ಇದರ ಜೊತೆಗೆ ತನಿಖೆಯಲ್ಲಿ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ದೆಹಲಿ ಸ್ಫೋಟಕ್ಕೆ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹವಾಲ ಮೂಲಕ 20 ಲಕ್ಷ ರೂಪಾಯಿ ಪಾವತಿಸಿದೆ ಅನ್ನೋ ಮಾಹಿತಿಯೂ ಬಯಲಾಗಿದೆ.
ಐ20 ಕಾರಿನ ಮಾಲೀಕ ರಶೀದ್ ಅಲಿ
ವೈದ್ಯ ಉಮರ್ ನಬಿ ಸ್ಫೋಟಕಗಳನ್ನು ಹ್ಯುಂಡೈ ಐ20 ಕಾರಿನಲ್ಲಿ ತುಂಬಿಕೊಂಡು ದೆಹಲಿ ಕೆಂಪು ಕೋಟೆ ಬಂದಿದ್ದಾನೆ. ಬಳಿಕ ಸ್ಫೋಟಿಸಲಾಗಿದೆ. ದೆಹಲಿ ಸ್ಫೋಟಕ್ಕೆ ಉಮರ್ ನಬಿ, ಇದೇ ಅಮಿರ್ ರಶೀದ್ ಅಲಿ ಜೊತೆ ಸಂಚು ರೂಪಿಸಿದ್ದ. ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್‌ನ ಸಂಬೂರ ವಲಯದ ಈ ರಶೀದ್ ಅಲಿ, ಉಮರ್ ನಬಿ ಜೊತೆ ದೇಶದಲ್ಲಿ ಹಲವು ಸ್ಫೋಟಕ್ಕೆ ಸಂಚು ರೂಪಿಸಿದ್ದ. ಇದೇ ರಶೀದ್ ಆಲಿ ಹೆಸೆರಿನಲ್ಲಿದೆ ಉಮರ್ ನಬಿ ಬಳಸಿದ ಐ20 ಕಾರು.
ಅಮಿರ್ ರಶೀದ್ ಅಲಿ ಬಂಧನದಿಂದ ದೆಹಲಿ ಸ್ಫೋಟದ ಪ್ರಮುಖ ಮಾಹಿತಿಗಳು ಲಭ್ಯವಾಗಲಿದೆ. ಅಲ್ ಫಲಾಹ ವಿಶ್ವಿವಿದ್ಯಾಲಯದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆ, ವೈದ್ಯರ ಸೋಗಿನಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳ ಪ್ಲಾನ್ ಕುರಿತು ಸಾಕಷ್ಟ ಮಾಹಿತಿಗಳು ಈಗಾಗಲೇ ತನಿಖೆಯಿಂದ ಲಭ್ಯವಾಗಿದೆ. ಅಲ್ ಫಲಾಹ ವಿಶ್ವವಿದ್ಯಾಲಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಕಾರಣ ಅಮಾನತುಗೊಂಡ ಬಹುತೇಕ ಎಲ್ಲಾ ಪ್ರೊಫೆಸರ್ ಕೆಲಸ ಗಿಟ್ಟಿಸಿದ್ದಾರೆ. ಅಲ್ ಫಲಾಹ ವಿಶ್ವವಿದ್ಯಾಲಯ ಇದೀಗ ತನಿಖಾ ಎಜೆನ್ಸಿಗಳ ರೆಡಾರ್‌ನಲ್ಲಿದೆ.
20 ಲಕ್ಷ ರೂಪಾಯಿ ಪಾವತಿ
ದೆಹಲಿ ಸ್ಫೋಟಕ್ಕಾಗಿ ಜೈಶ್ ಇ ಮೊಹಮ್ಮದ್ ಬರೋಬ್ಬರಿ 20 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ವೈದ್ಯ ಉಮರ್ ನಬಿ, ಮುಜಾಮ್ಮಿಲ್ ಹಾಗೂ ಶಾಹೀನ್ ಮೂವರಿಗೆ ಒಟ್ಟು 20 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಹವಾಲಾ ಮೂಲಕ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ಹಣವನ್ನು ಮೂವರು ವೈದ್ಯರಿಗೆ ಪಾವತಿ ಮಾಡಲಾಗಿದೆ ಅನ್ನೋ ಮಾಹಿತಿ ಬಯಲಾಗಿದೆ.
26 ಕ್ವಿಂಟಲ್ ನೈಟ್ರೋಜನ್ ಸೇರಿ ಹಲವು ವಸ್ತು ಖರೀದಿ
20 ಲಕ್ಷ ರೂಪಾಯಿ ಹಣದಲ್ಲಿ ಮೂರು ಲಕ್ಷ ರೂಪಾಯಿ ಮೊತ್ತವನ್ನು ನೈಟ್ರೋಜನ್, ಪೊಟಾಶಿಯಂ ಸೇರಿದಂತೆ ಹಲವು ರಾಸಾಯನಿಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಕೃಷಿ ರಾಸಾಯನಿಕ ವಸ್ತು, ಸ್ಫೋಟಕ ವಸ್ತುಗಳನ್ನು ಖರೀದಿಸಲಾಗಿದೆ. ಇದಾದ ಬಳಿಕ ವೈದ್ಯ ಉಮರ್ ನಬಿ ಕೃಷಿ ಗೊಬ್ಬರ ಖರೀದಿ ಮಾಡಿದ್ದೇನೆ ಎಂದು ಸಂದೇಶ ರವಾನಿಸಿದ್ದಾರೆ.
