ದೇಶದ ಮೊದಲ ಎಲಿವೇಟೆಡ್‌ ಟ್ಯಾಕ್ಸಿವೇಯಲ್ಲಿ B747 ವಿಮಾನದ ಅದ್ಭುತ ನೋಟ ಹೀಗಿದೆ..

ದೆಹಲಿ ಏರ್‌ಪೋರ್ಟ್‌ನ ಈ ಎಲಿವೇಟೆಡ್ ಟ್ಯಾಕ್ಸಿವೇಯಲ್ಲಿ ಎತ್ತರದ ರಚನೆಯ ಉದ್ದಕ್ಕೂ ಸಾಗುತ್ತಿರುವ ನಯವಾದ ಮತ್ತು ಭವ್ಯವಾದ B747 ವಿಮಾನವನ್ನು ಪ್ರದರ್ಶಿಸಿದೆ.

delhi airport s first ever elevated taxiway showcasing b747 aircraft watch ash

ನವದೆಹಲಿ (ಜನವರಿ 29, 2024): ದೆಹಲಿ ವಿಮಾನ ನಿಲ್ದಾಣವು ಭಾರತದ ಮೊದಲ ಎಲಿವೇಟೆಡ್ ಟ್ಯಾಕ್ಸಿವೇಯನ್ನು ಜುಲೈ, 2023ರಲ್ಲಿ ಉದ್ಘಾಟಿಸಿತ್ತು. ಈ ಎಲಿವೇಟೆಡ್‌ ಟ್ಯಾಕ್ಸಿ ವೇ ಯಲ್ಲಿ ಇತ್ತೀಚೆಗೆ ಐಕಾನಿಕ್ ಹಾಗೂ ದೊಡ್ಡ ಬೋಯಿಂಗ್ ವಿಮಾನ B747 ಸಂಚರಿಸಿದೆ.  ಇದರ ಅದ್ಭುತ ದೃಶ್ಯಾವಳಿಯ ವಿಡಿಯೋವನ್ನು ರಾಷ್ಟ್ರ ರಾಜಧಾನಿಯ ಜನತೆ ಕಣ್ತುಂಬಿಕೊಂಡಿದ್ದಾರೆ. ಹಾಗೂ, ಈ ಸಂಬಂಧ ವಿಡಿಯೋವೊಂದು ವೈರಲ್‌ ಆಗಿದ್ದು, ಇದಕ್ಕೆ ನೆಟ್ಟಿಗರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿ ಏರ್‌ಪೋರ್ಟ್‌ನ ಈ ಎಲಿವೇಟೆಡ್ ಟ್ಯಾಕ್ಸಿವೇಯಲ್ಲಿ ಎತ್ತರದ ರಚನೆಯ ಉದ್ದಕ್ಕೂ ಸಾಗುತ್ತಿರುವ ನಯವಾದ ಮತ್ತು ಭವ್ಯವಾದ B747 ವಿಮಾನವನ್ನು ಪ್ರದರ್ಶಿಸುತ್ತದೆ. ವಿಡಿಯೋವೊಂದರಲ್ಲಿ, ಈ ಐತಿಹಾಸಿಕ ಕ್ಷಣದ ಸಾರವನ್ನು ಸೆರೆಹಿಡಿಯಲಾಗಿದ್ದು, ಇದು ವಾಯುಯಾನ ಮೂಲಸೌಕರ್ಯದಲ್ಲಿ ಭಾರತ ಬದಲಾಗುತ್ತಿರುವುದನ್ನು ಸಂಕೇತಿಸುತ್ತದೆ. 

ಇದನ್ನು ಓದಿ: ಭಾರತದ ಮೇಲೆ ಯಾಕಿಷ್ಟು ದ್ವೇಷ? HAL ವಿಮಾನ ನಿರಾಕರಿಸಿದ ಮುಯಿಝು; ಹಾರಿಹೋದ ಮಾಲ್ಡೀವ್ಸ್‌ ಬಾಲಕನ ಪ್ರಾಣ ಪಕ್ಷಿ

ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @MeghUpdates ಜನವರಿ 28ರ ಮಧ್ಯಾಹ್ನ ಈ ವಿಡಿಯೋ ಶೇರ್‌ ಮಾಡಿಕೊಂಡಿದೆ. ಹಾಗೂ, ಈ ವಿಡಿಯೋ ಈವರೆಗೆ 7 ಲಕ್ಷ 58 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 

ಹಾಗೂ, ವಾಯುಯಾನ ತಜ್ಞರು ಮತ್ತು ಉತ್ಸಾಹಿಗಳು ಎಲಿವೇಟೆಡ್‌ ಟ್ಯಾಕ್ಸಿವೇಯನ್ನು ಮೆಚ್ಚಿಕೊಂಡಿದ್ದು, ದೆಹಲಿ ವಿಮಾನ ನಿಲ್ದಾಣದ ಒಟ್ಟಾರೆ ಸಾಮರ್ಥ್ಯ ಮತ್ತು ದಕ್ಷತೆಯ ಮೇಲೆ ಈ ಎತ್ತರದ ಟ್ಯಾಕ್ಸಿವೇ ಧನಾತ್ಮಕ ಪರಿಣಾಮ ಬೀರುವ ಬಗ್ಗೆಯೂ ಹಲವು ನೆಟ್ಟಿಗರು ಮಾತನಾಡಿದ್ದಾರೆ. ಅಲ್ಲದೆ, ಅಂತಹ ಅತ್ಯಾಧುನಿಕ ಮೂಲಸೌಕರ್ಯಗಳ ಸಂಯೋಜನೆಯು ವಾಯುಯಾನ ಪ್ರಗತಿಯಲ್ಲಿ ಮುಂಚೂಣಿಯಲ್ಲಿ ಉಳಿಯಲು ಭಾರತದ ಬದ್ಧತೆಯನ್ನು ತೋರಿಸುತ್ತದೆ.

ಭಾರತದಲ್ಲಿ ನಿಂತಂತೆ ವಿದೇಶದಲ್ಲಿ ಮತ್ತೆ ಕೆಟ್ಟು ಹೋದ ಕೆನಡಾ ಪ್ರಧಾನಿ ವಿಮಾನ: 4 ತಿಂಗಳಲ್ಲಿ 2 ಬಾರಿ ಸಮಸ್ಯೆ

ಇನ್ನು, ಈ ವಿಡಿಯೋಗೆ ಸಾಮಾಜಿಕ ಜಾಲತಾಣ ಬಳಕೆದಾರರು ನಾನಾ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ. ಈ ಎಲಿವೇಟೆಡ್‌ ಟ್ಯಾಕ್ಸಿವೇ ಬಗ್ಗೆ ಹಲವರು ವಿಸ್ಮಯ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ತುಂಬಾ ಸುಂದರವಾಗಿ ಕಾಣುತ್ತದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆ, ಮತ್ತೊಬ್ಬರು, ದೆಹಲಿ ವಿಮಾನ ನಿಲ್ದಾಣ ತನ್ನ ಮೊದಲ ಎಲಿವೇಟೆಡ್ ಟ್ಯಾಕ್ಸಿವೇಯೊಂದಿಗೆ ಭಾರತವು ಹೊಸ ಎತ್ತರಕ್ಕೆ ಏರುತ್ತಿದೆ ಎಂದೂ ಮತ್ತೊಬ್ಬರು ನೆಟ್ಟಿಗರು ಪೋಸ್ಟ್‌ ಮಾಡಿದ್ದಾರೆ. 

Latest Videos
Follow Us:
Download App:
  • android
  • ios