Asianet Suvarna News Asianet Suvarna News

ಶಾಲೆ, ಫ್ಯಾಕ್ಟರಿ ಬಂದ್, ನಿರ್ಮಾಣ, ಡೀಸೆಲ್ ವಾಹನಕ್ಕೆ ಬ್ರೇಕ್, ದೆಹಲಿಯಲ್ಲಿ ಕೈಮೀರಿದ ಪರಿಸ್ಥಿತಿ!

ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಕೈಮೀರಿದೆ. ಶಾಲೆಗಳು ಮುಚ್ಚಲಾಗಿದೆ. ಯಾವುದೇ ಫ್ಯಾಕ್ಟರಿ ಕಾರ್ಯನಿರ್ವಹಿಸುವಂತಿಲ್ಲ, ಕಟ್ಟಡ ನಿರ್ಮಾಣಕ್ಕೆ ಬ್ರೇಕ್, ಡೀಸೆಲ್ ವಾಹನ ಓಡಾಟಕ್ಕೆ ಅನುಮತಿ ನಿರಾಕರಿಸಲಾಗಿದೆ.

Delhi Air pollution schools temporarily shut down factories construction works halt to curb situation ckm
Author
First Published Nov 4, 2022, 7:36 PM IST

ನವದೆಹಲಿ(ನ.04): ದೆಹಲಿಯಲ್ಲಿ ವಾಯು ಮಾಲಿನ್ಯ ಪರಿಸ್ಥಿತಿ ಕೈಮೀರಿದೆ. ವಾಯುಗುಣಟ್ಟಸೂಚ್ಯಂಕ 426ಕ್ಕೆ ಏರಿಕೆಯಾಗಿದೆ. ಈ ಮೂಲಕ ದೆಹಲಿ ಅತ್ಯಂತ ಗಂಭೀರ ಹಾಗೂ ಅತ್ಯಂತ ಕಳಪೆ ವಾಯುಗುಣಮಟ್ಟ ಪರಿಸ್ಥಿತಿಗೆ ಕಾರಣವಾಗಿದೆ. ಪರಿಣಾಮ ತುರ್ತು ಸಭೆ ಕರೆದು ದೆಹಲಿಯಲ್ಲಿ ಹಲವು ನಿರ್ಬಂಧ ಹೇರಲಾಗಿದೆ. ದೆಹಲಿ ವಾಯು ಮಾಲಿನ್ಯ ನಿಯಂತ್ರಿಸಲು ಈಗಾಗಲೇ ಉದ್ಯೋಗಿಗಳಿಗೆ ಶೇಕಡಾ 50 ರಷ್ಟು ಮಂದಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಮತ್ತಷ್ಟು ಕಠಿಣ ನಿಯಮ ಜಾರಿಯಾಗಿದೆ. ಶಾಲೆಗಳು ಮುಚ್ಚಲಾಗಿದೆ. ಫ್ಯಾಕ್ಟರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಕಟ್ಟಡ ನಿರ್ಮಾಣ, ಕಾಮಾಗಾರಿಗಳಿಗೆ ಬ್ರೇಕ್ ನೀಡಲಾಗಿದೆ. ಡೀಸೆಲ್ ವಾಹನ ಓಡಾಟಕ್ಕೂ ಬ್ರೇಕ್ ಹಾಕಲಾಗಿದೆ. ಈ ಮೂಲಕ ದೆಹಲಿ ಮಾಲಿನ್ಯ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾಲಿನ್ಯ ಹಾಗೂ ಈ ಕಠಿಣ ನಿಯಮ ಪರಿಣಾಮ ಇದೀಗ ವಲಸೆ ಕಾರ್ಮಿಕರು ಸೇರಿದಂತೆ ಹಲವರು ದೆಹಲಿಯಿಂದ ಹೊರಹೋಗುತ್ತಿದ್ದಾರೆ.

ಶಾಲೆಗಳನ್ನು ಆನ್‌ಲೈನ್ ಮೂಲಕ ನಡೆಸಲು ಕೋರಲಾಗಿದೆ. ಕಾಲೇಜುಗಳ ಹೊರಾಂಗಣದಲ್ಲಿನ ಎಲ್ಲಾ ಚಟುವಟಿಕೆಗೆ ನಿಲ್ಲಿಸಲು ಸೂಚಿಸಲಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯ(Delhi Air Pollution) ಮತ್ತಷ್ಟುಗಂಭೀರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್‌ ಅವಕಾಶ ನೀಡಲಾಗಿದೆ. ಇದೇ ವೇಳೆ ಖಾಸಗಿ ಕಂಪನಿಗಳು ಕೂಡ ಇದೇ ನೀತಿ ಅನುಸರಿಸಬೇಕು ಎಂದು ಸೂಚಿಸಲಾಗಿದೆ.

ಶೇ.50 ರಷ್ಟು ಸರ್ಕಾರಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ, ಸರ್ಕಾರದ ಹೊಸ ಆದೇಶ!

ಇನ್ನೊಂದು ಕಡೆ 1ರಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ಪುಟ್ಟಮಕ್ಕಳ ಆರೋಗ್ಯದ ಸೃಷ್ಟಿಯಿಂದ ಶನಿವಾರದಿಂದ ರಜೆ ಘೋಷಿಸಲಾಗಿದೆ. ನಂತರದ ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗಿದ್ದರೂ, ಯಾವುದೇ ಹೊರಂಗಣ ಚಟುವಟಿಕೆಗಳನ್ನು ನಡೆಸದಂತೆ ಸೂಚಿಸಲಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಘೋಷಿಸಿದ್ದಾರೆ.

ಇನ್ನು ವಾಯುಮಾಲಿನ್ಯ ತಗ್ಗಿಸಲು ಈ ಹಿಂದಿನಂತೆ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಮರುಜಾರಿಗೆ ಚಿಂತಿಸಲಾಗುತ್ತಿದೆ. ಜೊತೆಗೆ ಬೈಕು, ಕಾರ್‌ನಂಥ ವಾಹನಗಳನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆ ಉತ್ತೇಜಿಸಲಾಗುತ್ತಿದೆ. ಸರ್ಕಾರವೇ 500 ಸಿಎನ್‌ಜಿ ಚಾಲಿತ ಖಾಸಗಿ ಬಸ್‌ಗಳನ್ನು ‘ಪರಾರ‍ಯವರಣ ಬಸ್‌ ಸೇವೆ’ ಹೆಸರಿನಲ್ಲಿ ಓಡಿಸಲು ನಿರ್ಧರಿಸಿದೆ ಎಂದು ವರ್ಕ್ ಫ್ರಂ ಹೋಂ ಘೋಷಣೆ ಮಾಡುವ ವೇಳೆ ಪರಿಸರ ಸಚಿವ ಗೋಪಾಲ್‌ ರಾಯ್‌ ಹೇಳಿದ್ದಾರೆ. ಸರ್ಕಾರದ ಸೂಚನೆ ಜಾರಿಗೆ 6 ತಂಡಗಳನ್ನು ರಚಿಸಲಾಗಿದೆ.

ಮನೆಯಿಂದ ಕೆಲಸ ಮಾಡಿ ಇಲ್ಲ ಸಾರ್ವಜನಿಕ ಸಾರಿಗೆ ಬಳಸಿ, ಮಾಲಿನ್ಯ ತಡೆಯಲು ಸಚಿವರ ಹೊಸ ಸೂತ್ರ!

ದಿಲ್ಲಿಯಲ್ಲಿ ಶುಕ್ರವಾರ ವಾಯುಗುಣಟ್ಟಸೂಚ್ಯಂಕ 426 ಇದೆ. 400ಕ್ಕಿಂತ ಹೆಚ್ಚು ಅಂಕವಿದ್ದರೆ ಅದನ್ನು ‘ಗಂಭೀರ ವಾಯುಗುಣಮಟ್ಟ’ ಎನ್ನಲಾಗುತ್ತದೆ. ದಿಲ್ಲಿ ಪಕ್ಕದ ಪಂಜಾಬ್‌, ಹರಾರ‍ಯಣದಲ್ಲಿ ಈಗ ಕಬ್ಬಿನ ಬೆಳೆ ತ್ಯಾಜ್ಯ ಸುಡುವಿಕೆ, ಇತ್ತೀಚಿನ ದೀಪಾವಳಿ ಪಟಾಕಿ ಅಬ್ಬರ, ದಿಲ್ಲಿಯಲ್ಲಿನ ಚಳಿಗಾಲದ ವಾತಾವರಣವು ಮಾಲಿನ್ಯ ಏರಿಕೆಗೆ ಕಾರಣವಾಗಿದೆ.
 

Follow Us:
Download App:
  • android
  • ios