ಶೇ.50 ರಷ್ಟು ಸರ್ಕಾರಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ, ಸರ್ಕಾರದ ಹೊಸ ಆದೇಶ!

ವರ್ಕ್ ಫ್ರಮ್ ಹೋಮ್...ಮತ್ತೆ ಮನೆಯಿಂದ ಕೆಲಸ ಮಾಡುವ ಪದ್ಧತಿ ಮರಳುತ್ತಿದೆ. ಸರ್ಕಾರದ ಪರಿಸರ ಖಾತೆ ಸಚಿವರೇ ಈ ಆದೇಶ ಹೊರಡಿಸಿದ್ದಾರೆ. ಶೇ.50 ಸರ್ಕಾರಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಿ ಎಂದಿದೆ. ಇಷ್ಟೇ ಅಲ್ಲ ಖಾಸಗಿ ಕಂಪನಿಗಳು ಇದೇ ನಿಯಮ ಪಾಲಿಸಿ ಎಂದು ಆದೇಶದಲ್ಲಿ ಸೂಚಿಸಿದೆ.

Delhi Air pollution 50 percent of govt employees told to work from home Environment Minister Gopal Rai announces new restrictions ckm

ನವದೆಹಲಿ(ನ.04): ಸರ್ಕಾರವೇ ಶೇಕಡಾ 50 ರಷ್ಟು ಮಂದಿಗೆ ಮನೆಯಿಂದ ಕೆಲಸ ಮಾಡಲು ಆದೇಶ ನೀಡಿದೆ ಎಂದಾದರೆ,  ಕೊರೋನಾ ವಕ್ಕರಿಸಿತಾ? ಉಪತಳಿಗಳ ಹಾವಳಿ ಶುರುವಾಯಿತಾ ಅಂತಾ ಗಾಬರಿಯಾಗಬೇಡಿ. ಇನ್ನೂ ಕೋವಿಡ್ ಸಮಸ್ಯೆಗಿಂತ ಭೀಕರವಾದ ಸಮಸ್ಯೆಯೊಂದು ದೇಶಕ್ಕೆ ವಕ್ಕರಿಸಿದೆ. ದೇಶದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಅಧಿಕವಾಗಿದೆ. ಇದೀಗ ದೆಹಲಿಯಲ್ಲಿ ಪರಿಸ್ಥಿತಿ ಕೈಮೀರಿದೆ. ಚಿಕ್ಕ ಮಕ್ಕಳು ಸೇರಿದಂತೆ ಬಹುತೇಕರು ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯವಂತರು ದಿನದಿಂದ ದಿನಕ್ಕೆ ಆಯಸ್ಸು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಮಾಲಿನ್ಯ ವಿಪರೀತವಾಗಿದೆ. ಹೀಗಾಗಿ ವಾಹನ ದಟ್ಟಣೆ ಕಡಿಮೆ ಮಾಡಲು ಇದೀಗ ದೆಹಲಿ ಸರ್ಕಾರ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ. ಸರ್ಕಾರದ ಶೇಕಡಾ 50 ರಷ್ಟು ಮಂದಿಗೆ ಕಡ್ಡಾಯವಾಗಿ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದೆ. ಇಷ್ಟೇ ಅಲ್ಲ ಇದೇ ನಿಯಮವನ್ನು ಖಾಸಗಿ ಕಂಪನಿಗಳು ಪಾಲಿಸುವಂತೆ ಪರಿಸರ ಖಾತೆ ಸಚಿವ ಗೋಪಾಲ್ ರೈ ಆದೇಶ ಹೊರಡಿಸಿದ್ದಾರೆ.

ದೆಹಲಿ ಗ್ಯಾಸ್ ಚೇಂಬರ್‌ನಂತಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ದೆಹಲಿಯ ಪರಿಸ್ಥಿತಿ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಹಲವು ಗಣ್ಯರು ಇದೀಗ ದೆಹಲಿಯಲ್ಲಿ ಓಡಾಡಬೇಡಿ. ಒಳಾಂಗಣದಲ್ಲೇ ಇರಿ ಎಂದು ಸಲಹೆ ನೀಡಿದ್ದಾರೆ.  ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಅಧಿಕಾರಿಗಳು, ಸಚಿವರ ಸಮಿತಿ ಜೊತೆ ಸಭೆ ಸೇರಿದ ಗೋಪಾಲ್ ರೈ ದೆಹಲಿ ಮಾಲಿನ್ಯ ನಿಯಂತ್ರಣ ಕುರಿತು ಚರ್ಚಿಸಿದ್ದಾರೆ.

ಮನೆಯಿಂದ ಕೆಲಸ ಮಾಡಿ ಇಲ್ಲ ಸಾರ್ವಜನಿಕ ಸಾರಿಗೆ ಬಳಸಿ, ಮಾಲಿನ್ಯ ತಡೆಯಲು ಸಚಿವರ ಹೊಸ ಸೂತ್ರ!

ಈ ಸಭೆ ಬಳಿಕ ಗೋಪಾಲ್ ರೈ ಸುದ್ದಿಗೋಷ್ಠಿ ನಡೆಸಿದರು. ಬಳಿಕ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ತಕ್ಷಣಕ್ಕೆ ಜಾರಿಬರುವಂತೆ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 

1)ಸಂಚಾರ ದಟ್ಟಣೆಯಿಂದ ಆಗುತ್ತಿರುವ ಮಾಲಿನ್ಯ ನಿಯಂತ್ರಿಸಲು ಟ್ರಾಫಿಕ್ ಡೈವರ್ಟ್ ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ
2)ದೆಹಲಿ ಸರ್ಕಾರಿ ಉದ್ಯೋಗಿಗಳಿಗೆ ಶೇಕಡಾ 50 ರಷ್ಟು ಮಂದಿ ಮನೆಯಿಂದ ಕಡ್ಡಾಯ ಕೆಲಸ ಮಾಡಲು ಸೂಚಿಸಲಾಗಿದೆ. ಖಾಸಗಿ ಸಂಸ್ಥೆಗಳು ಇದೇ ನಿಯಮ ಪಾಲಿಸಲು ಸಲಹೆ ನೀಡಲಾಗಿದೆ. 
3) ಖಾಸಗಿ ಸಂಸ್ಥೆಗಳಿಗೂ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಲು ಮತ್ತೊಂದು ಆರ್ಡರ್ ನೀಡಲಾಗುವುದು
4) ಸಾರಿಗೆ ಇಲಾಖೆಯಿಂದ ತ್ವರಿತಗತಿಯಲ್ಲಿ 500 ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಲು ಅನುಮೋದನೆ ನೀಡಲಾಗಿದೆ
5) ದೆಹಲಿ ಚಳಿಗೆ ಹೆಚ್ಚಿನ ಭಾಗಗಳಲ್ಲಿ ಕಲ್ಲಿದ್ದಲು, ಕಟ್ಟಿಗೆಗಳನ್ನು ಉರಿಸಲಾಗುತ್ತಿದೆ. ಇದನ್ನು ತಡೆಯಲು ಎಲೆಕ್ಟ್ರಿಕ್ ಹೀಟರ್ ಒದಿಗಸಲು ನಿರ್ಧರಿಸಲಾಗಿದೆ
6) ಕೈಗಾರಿಕೆಯಿಂದ ಮಾಲಿನ್ಯ ತಗ್ಗಿಸಲು 33 ತಂಡಗಳನ್ನು ರಚಿಸಲಾಗಿದೆ.
7) ಪ್ರಾಥಮಿಕ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚಿಸಲಾಗಿದೆ. ಮಕ್ಕಳಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುವ ಕಾರಣ ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

Air Pollution: ಗ್ಯಾಸ್‌ ಚೇಂಬರ್‌ ಆದ ದೆಹಲಿ, ಗುಜರಾತ್‌ ಎಲೆಕ್ಷನ್‌ನಲ್ಲಿ ಕೇಜ್ರಿವಾಲ್‌ ಬ್ಯುಸಿ!

ದೀಪಾವಳಿ ಹಾಗೂ ಬಳಿಕ ದೆಹಲಿ ವಾಯು ಮಾಲಿನ್ಯ ಸುಧಾರಣೆಯಾಗಿತ್ತು. ಈ ಬಾರಿ ಕಟ್ಟು ನಿಟ್ಟಿನ ನಿಯಮದಿಂದ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡಿರಲಿಲ್ಲ. ಈ ಮೂಲಕ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಧಾರಣೆಯಾಗಿತ್ತು. ಈ ಕುರಿತು ಸಚಿವ ಗೋಪಾಲ್ ರೈ ಹೇಳಿಕೆ ನೀಡಿದ್ರು.  ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯು ಗುಣಮಟ್ಟಸುಧಾರಣೆಯಾಗಿದ್ದು, ಕಳೆದ 5 ವರ್ಷದಲ್ಲೇ ಇದೆ ಮೊದಲ ಬಾರಿ ದಾಖಲಾಗಿದೆ ಎಂದು ಪರಿಸರ ಸಚಿವ ಗೋಪಾಲ್‌ ರೈ ಹೇಳಿದ್ದಾರೆ. ಅಲ್ಲದೇ ಶೇ.30ರಷ್ಟುಕಡಿಮೆ ವಾಯುಮಾಲಿನ್ಯ ಉಂಟಾಗಿದ್ದು, ಕಳೆದ ವರ್ಷಕ್ಕಿಂತ ವಾಯುಮಾಲಿನ್ಯ ಮತ್ತಷ್ಟುಕಡಿಮೆಯಾಗಿದೆ. ಕಳೆದ ಬಾರಿ ವಾಯು ಗುಣಮಟ್ಟಸೂಚ್ಯಂಕ 462ರಷ್ಟಿತ್ತು. ಈ ವರ್ಷ 323ಕ್ಕೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪಟಾಕಿ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಬೆಳವಣಿಗೆ ನಡೆದಿದೆ ಎಂದು ರೈ ಅಭಿಪ್ರಾಯಿಸಿದ್ದಾರೆ. ರಾಜ್ಯದ ಜನತೆ ಸರ್ಕಾರದ ಆದೇಶಕ್ಕೆ ತಕ್ಕಂತೆ ನಡೆದುಕೊಂಡಿದೆ ಎಂದು ರೈ ಸಂತಸ ವ್ಯಕ್ತಪಡಿಸಿದ್ದರು. ಆದರೆ ಕೆಲ ದಿನಗಳಲ್ಲೇ ಇದೀಗ ದೆಹಲಿ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. 

Latest Videos
Follow Us:
Download App:
  • android
  • ios