ನವದೆಹಲಿ(ಜೂ.05): ಕೊರೋನಾದ ಮತ್ತೊಂದು ರೂಪಾಂತರಿ ವೈರಸ್ ಡೆಲ್ಟಾ (B.1.617.2) ಇದೀಗ ಭಾರತದಲ್ಲೂ ಆರ್ಭಟ ಆರಂಭಿಸಿದೆ. ಸದ್ಯ ಪತ್ತೆಯಾಗುತ್ತಿರುವ ನಾಲ್ವರು ಕೊರೋನಾ ಸೋಂಕಿತರಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಕಾಣಸಿಕೊಳ್ಳುತ್ತಿದೆ. ಇದರ ನಡುವೆ ಅಧ್ಯಯನ ವರದಿಯೊಂದು ಬಿಡುಗಡೆಯಾಗಿದ್ದು ದೆಹಲಿಯಲ್ಲಿ ಶಕೇಡಾ 60 ರಿಂದ 75 ಮಂದಿ ಲಸಿಕೆ ಪಡೆವರಲ್ಲಿ ಡೆಲ್ಟಾ ವೈರಸ್ ಕಾಣಿಸಿಕೊಳ್ಳುತ್ತಿದೆ

ಬ್ರಿಟನ್‌ ಮೇಲೂ ಡೆಲ್ಟಾ ದಾಳಿ: ಭಾರತದಲ್ಲಿ ಪತ್ತೆಯಾದ ವೈರಸ್‌ ಅಬ್ಬರವೇ ಹೆಚ್ಚು!

ವೈರಸ್ ಪಡೆದು ಕೊರೋನಾಗೆ ಗುರಿಯಾಗುತ್ತಿರುವವರ ಪೈಕಿ ಹೆಚ್ಚಿನವರಲ್ಲಿ ಈ ರೂಪಾಂತರಿ ಡೆಲ್ಟಾ ವೈರಸ್ ಕಾಣಿಸಿಕೊಳ್ಳುತ್ತಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಈ ವೈರಸ್ ತ್ವರಿತಗತಿಯಲ್ಲಿ ಹರಡುತ್ತಿದೆ. ಇಷ್ಟೇ ಅಲ್ಲ ಸೋಂಕಿತರ ವೇಗವಾಗಿ ಅಸ್ವಸ್ಥಗೊಳ್ಳುತ್ತಿದ್ದಾರೆ.

ಕೊರೋನಾದಿಂದ ಚೇತರಿಸಿಕೊಂಡವರು ಮತ್ತೆ ಕೊರೋನಾಗೆ ಗುರಿಯಾದರೆ ಹಾಗೂ ಕೋವಿಡ್ ಲಸಿಕೆ ಪಡೆದ ಬಳಿಕ ನಿರ್ಲಕ್ಷ್ಯದಿಂದ ಕೋವಿಡ್‌ಗೆ ತುತ್ತಾಗುತ್ತಿರವವರಲ್ಲಿ ಇದೀಗ ಡೆಲ್ಟಾ ಕಾಣಿಸಿಕೊಳ್ಳುತ್ತಿದೆ. ಇದು ಆತಂಕಕಾರಿ ಎಂದು ಅಧ್ಯಯನ ವರದಿ ಹೇಳಿದೆ.

ಬ್ರಿಟನ್‌ ವೈರಾಣುಗಿಂತ ಭಾರತದ ಡೆಲ್ಟಾ ವೈರಸ್‌ ಭಾರಿ ಡೇಂಜರ್‌!

ಡೆಲ್ಟಾ ಕೊರೋನಾದ ಡಬಲ್ ಮ್ಯೂಟೇಶನ್ ವೈರಸ್ ಆಗಿದೆ. B.1.617 ಎಂಬುದು COVID-19 ರ ಡಬಲ್ ರೂಪಾಂತರದ ಹೆಸರು. ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿತ್ತು. E484Q ಮತ್ತು L452R ಎಂಬ ಎರಡು ರೂಪಾಂತರಿ ವೈರಸ್ ಹೊಂದಿರುವುದರಿಂದ ಇದು ಡಬಲ್ ಮ್ಯೂಟೇಶನ್ ವೈರಸ್ ಎಂದು ಕರೆಯಲಾಗುತ್ತಿದೆ. 

ಈ ವೈರಸ್ ದೆಹದಲ್ಲಿನ ರೋಗನಿರೋಧಕ ಶಕ್ತಿ ಕುಗ್ಗಿಸಿ ಸಂಪೂರ್ಣವಾಗಿ ಅಸ್ವಸ್ಥಗೊಳಿಸುತ್ತದೆ. ಹೀಗಾಗಿ ಡೆಲ್ಟಾ ವೈರಸ್ ಅಪಾಯಕಾರಿಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.