ಇಂದು ಮುಂಬೈನಲ್ಲಿ ನೀರಿಗೆ ಇಳಿಯಲಿರುವ ಎರಡು ಹಡಗುಗಳೆಂದರೆ, ಸೂರತ್ ಮತ್ತು ಉದಯಗಿರಿ. ಸ್ಟೆಲ್ತ್ ಡಿಸ್ಟ್ರಾಯರ್‌ಗಳಲ್ಲಿ ನಾಲ್ಕನೇ ಮತ್ತು ಕೊನೆಯದಾಗಿರುವ "ಪ್ರಾಜೆಕ್ಟ್ 15 ಬಿ' ಕಾರ್ಯಕ್ರಮದ ಅಡಿಯಲ್ಲಿ ಮೊದಲನೆಯ ಹಡಗು ನಿರ್ಮಾಣವಾಗಿದ್ದರೆ, ಎರಡನೇ ಹಡಗು 'ಪ್ರಾಜೆಕ್ಟ್ 17 ಎ' ಫ್ರಿಗೇಟ್ ಕಾರ್ಯಕ್ರಮದ ಭಾಗವಾಗಿದೆ.
ಮುಂಬೈ (ಮೇ. 17): ಭಾರತೀಯ ನೌಕಾಪಡೆಗೆ (Indian Navy ) ದೇಶೀಯವಾಗಿ ನಿರ್ಮಿತ ಎರಡು ಯುದ್ಧನೌಕೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಇಂದು ಮುಂಬೈನಲ್ಲಿ ಚಾಲನೆ ನೀಡಲಿದ್ದಾರೆ. ಯುದ್ಧ ನೌಕೆಗಳ ವಿಚಾರದಲ್ಲಿ ಚಾಲನೆ ಎಂದಲ್ಲಿ, ನೌಕೆಗಳು ಮೊದಲ ಬಾರಿಗೆ ನೀರಿಗೆ ಇಳಿಯುವುದಾಗಿರುತ್ತದೆ.
ಈ ವಾರದ ಆರಂಭದಲ್ಲಿ, ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರೂ ಕೂಡ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ್ದರು. "ಭಾರತೀಯ ನೌಕಾಪಡೆಯ ಎರಡು ಮುಂಚೂಣಿಯ ಯುದ್ಧನೌಕೆಗಳು ಮೇ 17 ರಂದು ಮುಂಬೈನ ಮಜಗಾಂವ್ ಡಾಕ್ಸ್ ಲಿಮಿಟೆಡ್ (MDL) ನಲ್ಲಿ ಏಕಕಾಲದಲ್ಲಿ ಅನಾವರಣಗೊಳ್ಳುವ ಸಂದರ್ಭದೊಂದಿಗೆ ದೇಶವು ದೇಶೀಯ ನಿರ್ಮಿತ ಯುದ್ಧನೌಕೆ ನಿರ್ಮಾಣದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಗೆ ಸಾಕ್ಷಿಯಾಗಲಿದೆ' ಎಂದು ಹೇಳಿದ್ದರು.
ಅನಾವರಣವಾಗಲಿರುವ ಎರಡು ಹಡಗುಗಳೆಂದರೆ 'ಸೂರತ್' (Surat) ಮತ್ತು 'ಉದಯಗಿರಿ' (Udaygiri). ಮೊದಲನೆಯದು 'ಪ್ರಾಜೆಕ್ಟ್ 15 ಬಿ' ಕಾರ್ಯಕ್ರಮದ ಅಡಿಯಲ್ಲಿ ಸ್ಟೆಲ್ತ್ ಡಿಸ್ಟ್ರಾಯರ್‌ಗಳಲ್ಲಿ (stealth-guided missile destroyers) ನಾಲ್ಕನೇ ಮತ್ತು ಕೊನೆಯದು ಇನ್ನು ಎರಡನೆಯದು 'ಪ್ರಾಜೆಕ್ಟ್ 17 ಎ' ಫ್ರಿಗೇಟ್ ಕಾರ್ಯಕ್ರಮದ ಭಾಗವಾಗಿದೆ.
'ಪ್ರಾಜೆಕ್ಟ್ 15 ಬಿ' ವರ್ಗದ ಹಡಗುಗಳು ಮುಂಬೈನ ಮಜಗಾಂವ್ ಡಾಕ್ಸ್ ಲಿಮಿಟೆಡ್ ನಲ್ಲಿ (Mazgaon Docks Limited) ನಿರ್ಮಿಸಲಾಗುತ್ತಿರುವ ನೌಕಾಪಡೆಯ ಮುಂದಿನ ಪೀಳಿಗೆಯ ಸ್ಟೀಲ್ತ್-ನಿರ್ದೇಶಿತ ಕ್ಷಿಪಣಿ ವಿಧ್ವಂಸಕಗಳಾಗಿವೆ. 'ಸೂರತ್' 'ಪ್ರಾಜೆಕ್ಟ್ 15ಬಿ' ವಿಧ್ವಂಸಕಗಳ ನಾಲ್ಕನೇ ಹಡಗು, ಇದು P15A (ಕೋಲ್ಕತ್ತಾ ವರ್ಗ) ವಿಧ್ವಂಸಕಗಳ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಎರಡು ವಿಭಿನ್ನ ಭೌಗೋಳಿಕ ಸ್ಥಳಗಳಲ್ಲಿ ಹಲ್ ನಿರ್ಮಾಣವನ್ನು ಒಳಗೊಂಡಿರುವ ಬ್ಲಾಕ್ ನಿರ್ಮಾಣ ವಿಧಾನವನ್ನು ಬಳಸಿಕೊಂಡು ಇದನ್ನು ನಿರ್ಮಿಸಲಾಗಿದೆ ಮತ್ತು ಎಂಡಿಎಲ್ ನಲ್ಲಿ ಒಟ್ಟಿಗೆ ಸೇರಿಕೊಳ್ಳಲಾಗಿದೆ. ಈ ವರ್ಗದ ಮೊದಲ ಹಡಗನ್ನು 2021 ರಲ್ಲಿ ಮೊದಲ ಬಾರಿಗೆ ಸೇನೆಗೆ ನಿಯೋಜಿಸಲಾಗಿದೆ. ಎರಡನೇ ಮತ್ತು ಮೂರನೇ ಹಡಗುಗಳ ನಿರ್ಮಾಳ ಪ್ರಾರಂಭವಾಗಿದ್ದು ಮತ್ತು ಪ್ರಯೋಗಗಳ ವಿವಿಧ ಹಂತಗಳಲ್ಲಿವೆ.
ಈ ನಡುವೆ ಇನ್ನೊಂದು ಹಡಗಿಗೆ 'ಉದಯಗಿರಿ' ಎಂದು ಆಂಧ್ರಪ್ರದೇಶ ರಾಜ್ಯದ ಪರ್ವತ ಶ್ರೇಣಿಯ ಹೆಸರನ್ನು ಇಡಲಾಗಿದೆ. ಇದು 'ಪ್ರಾಜೆಕ್ಟ್ 17A' ಫ್ರಿಗೇಟ್‌ಗಳ ಮೂರನೇ ಹಡಗು ಮತ್ತು ಸುಧಾರಿತ ಸ್ಟೆಲ್ತ್ ವೈಶಿಷ್ಟ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳು ಮತ್ತು ಪ್ಲಾಟ್‌ಫಾರ್ಮ್ ನಿರ್ವಹಣಾ ವ್ಯವಸ್ಥೆಗಳೊಂದಿಗೆ P17 ಫ್ರಿಗೇಟ್‌ಗಳನ್ನು (ಶಿವಾಲಿಕ್ ಕ್ಲಾಸ್) ಅನುಸರಿಸುತ್ತದೆ. 15B ಮತ್ತು P17A ಎರಡೂ ಹಡಗುಗಳನ್ನು ನೇವಲ್ ಡಿಸೈನ್ ನಿರ್ದೇಶನಾಲಯವು ಆಂತರಿಕವಾಗಿ ವಿನ್ಯಾಸಗೊಳಿಸಿದೆ.
