ಅಸ್ಸಾಂ ಸೇನಾ ನೆಲೆಗೆ ರಕ್ಷಣಾ ಸಚಿವರ ಭೇಟಿ: ಸಂದೇಶ್ ಆತೇ ಹೈ ಹಾಡಿದ ಯೋಧರು: video Viral

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಾಲ ಪ್ರದೇಶದ ಸೇನಾ ನೆಲೆಗಳಿಗೆ ಭೇಟಿ ನೀಡಿದ್ದು,  ಈ ವೇಳೆ ಯೋಧರು ಸಂದೇಶ್ ಆತೇ ಹೈ ಹಾಡು ಹಾಡಿ ರಂಜಿಸಿದರು, ಯೋಧರ ಪ್ರತಿಭೆಯನ್ನು ಸಚಿವರು ಶ್ಲಾಘಿಸಿದರು.

Defence Minister Rajnath Singh visit Dinjan military station in Assam soldiers sang Sandese Aate Hain akb

ಅಸ್ಸಾಂ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಾಲ ಪ್ರದೇಶದ ಸೇನಾ ನೆಲೆಗಳಿಗೆ ಭೇಟಿ ನೀಡಿದ್ದು, ಅರುಣಾಚಲ ಪ್ರದೇಶದ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಇರುವ ಸೇನಾ ನೆಲೆಗಳಿಗೆ ಎರಡು ದಿನಗಳ ಭೇಟಿಗೆ ತೆರಳಿದ ರಕ್ಷಣಾ ಸಚಿವರು, ಅಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ವೀಕ್ಷಿಸಿದರು. ಈ ವೇಳೆ ಯೋಧರು, ಬಾರ್ಡರ್ ಸಿನಿಮಾದ ಜನಪ್ರಿಯ ಹಾಡು ಸಂದೇಶ್ ಆತೇ ಹೈ ಹಾಡಿ ಸಚಿವರಿಗೆ ಮನೋರಂಜನೆ ನೀಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath singh) ಅವರು ಬುಧವಾರ ಅಸ್ಸಾಂನ (Assam) ದಿಂಜನ್ (Dinjan) ಸೇನಾ ನೆಲೆಗೆ ಭೆಟಿ ನೀಡಿದ್ದು, ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯವನ್ನು ಪರಿಶೀಲಿಸಿದರು. ಸಚಿವರ ಜೊತೆ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ (Manoj Pande), ಲೆಫ್ಟಿನೆಂಟ್ ಜನರಲ್ ಆರ್.ಪಿ. ಕಲಿತಾ (R.P.kalita), ಪೂರ್ವ ವಿಭಾಗದ ಸೇನಾ ಕಮಾಂಡರ್ ಹಾಗೂ ಸೇನೆಯ ಹಿರಿಯ ಅಧಿಕಾರಿಗಳು ಯೋಧರನ್ನು ಭೇಟಿಯಾಗಿ ಅವರ ಜೊತೆ ಮಾತುಕತೆ ನಡೆಸಿದರು. ಈ ಮಾತುಕತೆಯ ವೇಳೆಯೇ ಯೋಧರು 1997ರ ಬಾರ್ಡರ್ ಸಿನಿಮಾದ (Border Movie) ಜನಪ್ರಿಯ ಹಾಡು ಸಂದೇಶ್ ಆತೇ ಹೈ (Sandesh ate hai) ಹಾಡಿ ರಂಜಿಸಿದರು. 

ರಕ್ಷಣಾ ಸಚಿವರು (Defence Minister) ಯೋಧರ ಪ್ರತಿಭೆಯನ್ನು ಶ್ಲಾಘಿಸಿದರು ಜೊತೆಗೆ ದೇಶಕ್ಕಾಗಿ ಅವರ ಶ್ರಮ ಹಾಗೂ ತ್ಯಾಗವನ್ನು ಶ್ಲಾಘಿಸಿದರು. ರಕ್ಷಣಾ ಸಚಿವರ ಮುಂದೆ ಯೋಧರು ಹಾಡು ಹಾಡುತ್ತಿರುವುದನ್ನು ಸುದ್ದಿ ಸಂಸ್ಥೆ ಎಎನ್‌ಐ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಅಸ್ಸಾಂನ ದಿನ್‌ಜನ್‌ ಸೇನಾ ನೆಲೆಯಲ್ಲಿ ಭಾರತೀಯ ಸೇನೆ (Indian Army) ಯೋಧರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭೇಟಿ ವೇಳೆ ಸಂದೇಶ್ ಆತೇ ಹೈ ಹಾಡು ಹಾಡಿದರು ಎಂದು ಪೋಸ್ಟ್ ಮಾಡಲಾಗಿದೆ. 

ನಂತರ ರಕ್ಷಣಾ ಸಚಿವರು ದೇಶದ ಪೂರ್ವದ ಭಾಗದಲ್ಲಿ ಸೇನಾ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದರು. ಭೇಟಿಯ ಸಮಯದಲ್ಲಿ, ರಕ್ಷಣಾ ಸಚಿವರಿಗೆ ಅತ್ಯಾಧುನಿಕ ಮಿಲಿಟರಿ ಉಪಕರಣಗಳು (military equipment and technology) ಮತ್ತು ಮುಂಚೂಣಿಯಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ತಂತ್ರಜ್ಞಾನದ ಕೆಲಸದ ಕುರಿತು ವಿವರಿಸಲಾಯಿತು.

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಶತ್ರುರಾಷ್ಟ್ರದಲ್ಲಿ ತಳಮಳ ಸೃಷ್ಟಿಸಿದ ರಾಜನಾಥ್ ಹೇಳಿಕೆ!

ಇಂದು ಕೂಡ ಅರುಣಾಚಲ ಪ್ರದೇಶ ಭೇಟಿಯಲ್ಲಿರುವ ರಕ್ಷಣಾ ಸಚಿವರು ಸೇನಾ ಕಾರ್ಯಾಚರಣೆಯ ಸನ್ನದ್ಧತೆಯ ಬಗ್ಗೆ ಮೊದಲ ಮಾಹಿತಿ ಪಡೆಯಲು ಮತ್ತು ಪಡೆಗಳೊಂದಿಗೆ ಸಂವಹನ ನಡೆಸಲು ಸೇನಾ ಪೋಸ್ಟ್‌ಗಳಿಗೆ ಭೇಟಿ ನೀಡಲಿದ್ದಾರೆ. ಜೊತೆಗೆ ಅವರು ಸ್ಥಳೀಯ ಇಡು ಮಿಶ್ಮಿ ಬುಡಕಟ್ಟು (Idu Mishmi tribe) ಸಮುದಾಯದ ವಾರ್ಷಿಕ ಹಬ್ಬ ಅಥುಪೊಪು (Athu Popu) ಟ್ರೆಕ್ಕಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆ ಸಮುದಾಯದ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. 2021 ರಿಂದ ಭಾರತೀಯ ಸೇನೆ ಇದಕ್ಕೆ ನೆರವಾಗುತ್ತಿದ್ದು, ಇದು ಸೇನೆಯು ಸ್ಥಳೀಯ ಸಮುದಾಯವನ್ನು ಬೆಂಬಲಿಸುವ ಹಾಗೂ ಅಭಿವೃದ್ಧಿಪಡಿಸುವ ಹಾಗೂ ಪ್ರವಾಸೋದ್ಯಮ ಅಭಿವೃದ್ಧಪಡಿಸುವ ಪ್ರಯತ್ನದ ಭಾಗವಾಗಿದೆ.

ಅಗ್ನಿಪಥ್‌ ಜಾರಿಗೆ ಮೊದಲೇ ಚಿಂತನೆ ನಡೆಸಿಲ್ಲವೇ? ರಾಜನಾಥ್ ಸಿಂಗ್ ಹೇಳಿದ್ದೇನು?

Latest Videos
Follow Us:
Download App:
  • android
  • ios