ನವದೆಹಲಿ(ಅ.12):  ಗಡಿ ವಲಯದಲ್ಲಿ ಭಾರತೀಯ ಸೇನೆ ವಾಹನಗಳಾದ ಸೇನಾ ಟ್ಯಾಂಕರ್, ಯುದ್ಧ ಟ್ಯಾಂಕರ್ ಗಳು ಸಂಚರಿಸಲು 44 ಸೇತುವೆಗಳು ಮುಕ್ತವಾಗಿದೆ. ಭಾರಿ ಘನ ವಾಹನಗಳನ್ನು ಹೊರುವ ಸಾಮರ್ಥ್ಯ ಸೇತುವಗಳನ್ನು ಭಾರತೀಯ ಸೇನೆ ಬಾರ್ಡರ್ ರೋಡ್ ಆರ್ಗನೈಸೇಶನ್ ನಿರ್ಮಾಣ ಮಾಡಿದೆ. 108 ಸೇತುವೆಗಳ ಪೈಕಿ ಈಗಾಗಲೇ 44 ಸೇತುವಗಳು ಸಂಚಾರ ಮುಕ್ತವಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೊಸದಾಗಿ ನಿರ್ಮಿಸಲಾದ ಸೇತುವೆಗಳನ್ನು ಉದ್ಘಾಟನೆ ಮಾಡಿದ್ದಾರೆ.

 

ಲಡಾಖ್‌ ಸಂಪರ್ಕಿಸುವ ರಸ್ತೆ ಯೋಜನೆಗಳ ಶೀಘ್ರ ಪೂರ್ಣಕ್ಕೆ ಮೋದಿ ಸೂಚನೆ!

ಉದ್ಘಟಾನೆಗೊಂಡ 44 ಸೇತುವೆಗಳ ಪೈಕಿ, 30 ಸೇತುವೆಗಳು ಲಡಾಖ್ ಹಾಗೂ ಅರುಣಾಚಲ ಪ್ರದೇಶ ಗಡಿ ವಲಯದಲ್ಲಿ ನಿರ್ಮಿಸಲಾಗಿದೆ. ಗಡಿ ನಿಯಂತ್ರಣ ರೇಖೆ ಬಳಿ ಶತ್ರುಗಳ ಚಲನವಲನ ಗಮನಿಸಲು, ಶಸ್ತ್ರಾಸ್ತ್ರ ಪೂರೈಸಲು ಈ ಗಡಿ ರಸ್ತೆ ಹಾಗೂ ನೂತನವಾಗಿ ನಿರ್ಮಾಣ ಮಾಡಿರುವ ಸೇತುವೆ ಅತ್ಯಂತ ಸಹಕಾರಿಯಾಗಿದೆ.

ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್

ನೂತನವಾಗಿ ನಿರ್ಮಾಣ ಮಾಡಲಾಗಿರುವ ಸೇತುವೆಗಳು 70 ಟನ್ ವಾಹನಗಳ ತೂಕವನ್ನು ಸಹಿಸಬಲ್ಲ ತಾಂತ್ರಿಕತೆ ಹೊಂದಿದೆ. ಭಾರತೀಯ ಸೇನೆಯಲ್ಲಿರುವ ಅತ್ಯಂತ ಭಾರವಾದ ಅರ್ಜುನ ಟ್ಯಾಂಕ್ 60 ಟನ್ ತೂಕ ಹೊಂದಿದೆ. ಪೂರ್ವ ಲಡಾಖ್‌ನಲ್ಲಿ ಗಡಿ ನಿಯಂತ್ರಣ ರೇಖೆಯಿಂದ ಹಿಂದೆ ಸರಿಯಲು ಚೀನಾ ಹಿಂದೇಟು ಹಾಕಿದಾದ ಭಾರತೀಯ ಸೇನೆಯ  T-90 ಟ್ಯಾಂಕ್ ಪೂರ್ವ ಲಡಾಖ್‌ಗೆ ಕಳುಹಿಸಲಾಗಿತ್ತು. ಇದರ ತೂಕ 45 ಟನ್ ಹೊಂದಿದೆ.

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಯಾವುದೇ ಪರಿಸ್ಥಿತಿಗೆ ಸ್ಪಂದಿಸುವ ಹಾಗೂ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು, ಸೈನ್ಯ ಕಾರ್ಯಚಟುವಟಿಕೆಗಳಿಗೆ ಈ ಸೇತುವೆಗಳು ಪ್ರಮುಖವಾಗಿದೆ. ಈ ಹಿಂದೆ ಸರಿಯಾದ ರಸ್ತೆ ಇಲ್ಲದೆ ಗಡಿ ನಿಯಂತ್ರಣ ರೇಖೆಗೆ ಶಸ್ತ್ರಾಸ್ತ್ರ ಸಾಗಾಟ ದುರ್ಗಮವಾಗಿತ್ತು.