Asianet Suvarna News Asianet Suvarna News

ವಿಧಿಯ ಕೈವಾಡ ಆ ವರ್ಷ 2 ದುರಂತ ನಡೆಯಿತು; ಶಾಸ್ತ್ರಿ ನಿಧನರಾದರು, ಇಂದಿರಾ ಪ್ರಧಾನಿಯಾದರು!

ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದಲ್ಲಿ ಹಲವು ದುರಂತಗಳು, ಅವಘಡಗಳು, ಪ್ರಮಾದಗಳು ನಡೆದಿದೆ. ಹೀಗೆ 1966ರಲ್ಲಿ ಎರಡು ದುರದೃಷ್ಟಕರ ಘಟನೆ ನಡೆಯಿತು. ಒಂದು ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನ. ಮತ್ತೊಂದು ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ.  ಇದರಲ್ಲಿ ಎರಡನೇ ಘಟನೆ ದುರಂತ ಹೇಗಾಯ್ತು ಅನ್ನೋ ಗೊಂದಲ ನಿಮ್ಮನ್ನು ಕಾಡಬಹುದು. ಇತಿಹಾಸ ಪುಟ ಸೇರಿದ ಈ ದುರಂತ ಅಧ್ಯಾಯದ ಕತೆ ಇಲ್ಲಿದೆ.

Death of Lal Bahadur Shastri and PM Indira gandhi 2 tragic stories from Indian history
Author
Bengaluru, First Published Jun 23, 2020, 3:50 PM IST

ಭಾರತ ಕಂಡ ಅತ್ಯಂತ ಯಶಸ್ವಿ, ಪ್ರಭಾವಿ ಹಾಗೂ ಅತ್ಯುತ್ತಮ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಪಾತ್ರರಾಗಿದ್ದಾರೆ. ಹಸಿರು ಕ್ರಾಂತಿ, ಹಾಲಿನ ಕ್ರಾಂತಿ, ಉತ್ಪನ್ನ ಕ್ರಾಂತಿ ಸೇರಿದಂತೆ ಭಾರತದ ಅಭಿವೃದ್ಧಿಗೆ ಅಡಿಪಾಯ ಹಾಕಿದ ಧೀಮಂತ ನಾಯಕ. ಸಾಮಾನ್ಯ ಪ್ರಜೆಯನ್ನು ಪ್ರತಿನಿಧಿಸಿದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ದುರದೃಷ್ಟವಶಾತ್ ಜನವರಿ 11, 1966ರಲ್ಲಿ  ನಿಧನರಾದರು. ತಾಷ್ಕೆಂಟ್‌ನಲ್ಲಿ ಶಾಸ್ತ್ರಿಗೆ ವಿಷವುಣಿಸಿ ಕೊಲ್ಲಲಾಯಿತು ಅನ್ನೋ ಮಾತಿದೆ. ಏನೇ ಆದರೂ ಇದು ಭಾರತದ ಇತಿಹಾಸದಲ್ಲೇ ದುರದೃಷ್ಟಕರ ಘಟನೆಯಾಗಿದೆ. ಶಾಸ್ತ್ರಿ ನಿಧನದ ಬೆನ್ನಲ್ಲೇ ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಭಾರತ ಇತಿಹಾಸದಲ್ಲಿ ನಡೆದ ಮತ್ತೊಂದು ದುರದೃಷ್ಟಕರ ಘಟನೆ.

ಲಾಕ್‌ಡೌನ್ ನಿರ್ಬಂಧವೇ ಕಹಿಯಾಗಿದ್ದ ನಮಗೆ, 1975ರ ತುರ್ತು ಪರಿಸ್ಥಿತಿ ಊಹಿಸಲು ಸಾಧ್ಯವೇ?

ನೂರಾರು ವರ್ಷದ ಭಾರತದ ಇತಿಹಾಸದಲ್ಲಿ ಇಂತಹ ಅನೇಕ ದುರದೃಷ್ಟಕರ ಘಟನಗಳು ನಡೆದಿದೆ. ಇದೆಲ್ಲ ಘಟನೆಗಳಿಗೆ ಭಾರತೀಯರೇ ಮೂಲ ಕಾರಣ. ಮೊಹಮ್ಮದ್ ಘಜ್ನಿ, ಮೊಹಮ್ಮದ್ ಘೋರಿ, ಮೊಘಲ್ ಸೇರಿದಂತೆ ಭಾರತದ ಮೇಲಿನ ಆಕ್ರಮಣ, ಬ್ರಿಟೀಷರ ದಬ್ಬಾಳಿಕೆ ಎಲ್ಲದಕ್ಕೂ ಭಾರತೀಯರನಲ್ಲಿ ಒಗ್ಗಟ್ಟಿನ ಕೊರತೆ, ತಮ್ಮ ತಮ್ಮೊಳಗೆ ಸಂಘರ್ಷವೇ ಕಾರಣವಾಗಿತ್ತು. 

ಭಾರತದ ಅವನತಿಗೆ ಕಾರಣ:

ಲಾಲ್ ಬಹದ್ದೂರ್ ಶಾಸ್ತ್ರಿ ನಿಧನದ ವೇಳೆಯೂ ಇಂತದ್ದೆ ಸಂಘರ್ಷ, ಒಳಜಗಳ ಮತ್ತೊಂದು ದುರಂತಕ್ಕೆ ದಾರಿ ಮಾಡಿಕೊಟ್ಟಿತು. ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ, ಕಿತ್ತಾಟ ಭಾರತದ ಅವನತಿಗೆ ಕಾರಣವಾಯಿತು. ಲಾಲ್ ಬಹದ್ದೂರ್ ಶಾಸ್ತ್ರಿ ನಿಧನದ ಬಳಿಕ ಈ ಪ್ರಧಾನಿ ಸ್ಥಾನಕ್ಕೆ ಮೊರಾರ್ಜಿ ದೇಸಾಯಿ ಅರ್ಹರಾಗಿದ್ದರು. ಆದರೆ  ಜವಾಹರ್ ಲಾಲ್ ನೆಹರು ಪುತ್ರಿ ಹಾಗೂ ಗಾಂಧಿ ಕುಟುಂಬವನ್ನು ಒಲೈಸಲು ಅಂದಿನ ಕಾಂಗ್ರೆಸ್ ಅಧ್ಯಕ್ಷ ಕೆ ಕಾಮರಾಜ್ ಹಾಗೂ ಬಣ ಇಂದಿರಾ ಗಾಂಧಿಯನ್ನು ಪ್ರಧಾನಿ ಎಂದು ಘೋಷಿಸಿತು. 

fact Check: ಸೈನಿರನ್ನು ಉದ್ದೇಶಿಸಿ ಗಲ್ವಾನ್‌ನಲ್ಲಿ ಇಂದಿರಾ ಭಾಷಣ ಮಾಡಿದ್ರಾ?

ಕಾಂಗ್ರೆಸ್ ವಿರುದ್ಧ ಮತಚಲಾವಣೆ:

1947ರ ಸ್ವಾತಂತ್ರ್ಯ ನಂತರ ಘಟಿಸಿದ ಮತ್ತೊಂದು ದುರಂತವೆಂದರೆ, ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅಸ್ತಿತ್ವವಿರಲಿಲ್ಲ.  ಪ್ರತಿಪಕ್ಷಗಳು ಬಹುಮತ ಪಡೆದಿದ್ದರೂ, ವಿಭಜಿತ ಮನೆಯಾಗಿತ್ತು.  ಬಹುಮತ ಪಡೆದಿದ್ದ ಪ್ರತಿಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಾಗ, ಕೇವಲ ಅಲ್ಪಸಂಖ್ಯಾತ ಮತ ಪಡೆದಿದ್ದ ಕಾಂಗ್ರೆಸ್ ಸರ್ಕಾರ ರಚಿಸಿತು. ಜವಾಹರ್ ಲಾಲ್ ನೆಹರೂ ಸಮಯದಲ್ಲಿ  ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಗರಿಷ್ಠ ಮತ 48%. ಅಂದರೆ ಶೇಕಡ 50ಕ್ಕಿಂತ ಹೆಚ್ಚು ಜನರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ್ದರು. 

70 ದಶಕದಲ್ಲಿ ಇಂದಿರಾಗಾಂಧಿ ಎಂದರೆ ದೇವಿ, ನಾಯಕಿ, ಮಹಿಷಾಸುರ ಮರ್ಧಿನಿ!

ಇಂದಿರಾ ಗಾಂಧಿ ಮಾಡಿದ ಕೆಲ ತಪ್ಪುಗಳಿಂದ 1970ರ ಅಂತ್ಯದಲ್ಲಿ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳಲು ಆರಂಭಿಸಿತು.  ಈ ವೇಳೆ ಇಂದಿರಾ ಗಾಂಧಿ ಗರೀಬಿ ಹಟಾವೋ ಆಂದೋಲನಕ್ಕೆ ಚಾಲನೆ ನೀಡಿದರು. ಬಡತನದಲ್ಲಿ ಬೆಂದು ಹೋಗಿದ್ದ ಭಾರತೀಯರಿಗೆ ಬಡತನ ನಿರ್ಮೂಲನೆ ಮಾಡುವುದಾಗಿ ಭರವಸೆ ನೀಡಿದರು. ಇಂದಿರಾ ಗಾಂಧಿ ಪ್ರಧಾನ ಮಂತ್ರಿ ಅವಧಿ1972ಕ್ಕೆ ಅಂತ್ಯವಾಗುತ್ತಿತ್ತು. 1972ರಲ್ಲಿ ಲೋಕಸಭಾ ಚುನಾವಣೆ ನಡೆಯಬೇಕಿತ್ತು. ಆದರೆ ಇಂದಿರಾ ಗಾಂಧಿ ಯಾವ ಕಾರಣವೂ ಇಲ್ಲದೆ, ಡಿಸೆಂಬರ್ 20, 1970ರಲ್ಲಿ ಲೋಕಸಭೆ ವಿಸರ್ಜಜನೆಗೊಳಿಸಿದ್ದರು. ತಮ್ಮ ವೈಯುಕ್ತಿಕ ಹಾಗೂ ಪಕ್ಷದ ಹಿತದೃಷ್ಟಿಯಿಂದ ದಿಢೀರ್ ಲೋಕಸಭೆ ವಿಸರ್ಜನೆ ಮಾಡಿದರು. 1971ರಲ್ಲಿ ಲೋಕಸಭಾ ಚುನಾವಣೆ ಎದುರಿಸಿದರು. ಈ ಮೂಲಕ ಗರೀಬಿ ಹಟಾವೋ ಘೋಷಣೆಯಲ್ಲೇ ಜನರನ್ನು ಮರಳು ಮಾಡಿ,ಗೆದ್ದು ಬಂದರು.

ಇಂದಿರಾ ಮತ್ತು ಪ್ರಿಯಾಂಕಾ: ಕಾಂಗ್ರೆಸ್‌ಗೆ ಇದೆಲ್ಲಾ ಬೇಕಾ?

ಇಂದಿರಾ ಅಲೆಯಲ್ಲಿ ಮುನ್ನಗ್ಗಿದ ಕಾಂಗ್ರೆಸ್‌ಗೆ ಮುಖಭಂಗ:

ಪ್ರಜಾಪ್ರಭುತ್ವ ಕಾಪಾಡಿಕೊಳ್ಳುವ ಅಥವಾ ದೇಶದ ಅಭಿವೃದ್ಧಿ, ಆರ್ಥಿಕ ಸಂಕಷ್ಟ ನಿವಾರಿಸುವ ಯಾವುದೇ ಆಲೋಚನೆ ಇಂದಿರಾ ಬಳಿ ಇದ್ದಂತೆ ಕಾಣಿಸಲಿಲ್ಲ. ತನ್ನ ಸ್ವಂತ ಲಾಭಕ್ಕಾಗಿ ಮತ್ತು  ಪಕ್ಷದ ಹಿತದೃಷ್ಟಿಯಿಂದ ಮತ್ತೆ ಅಧಿಕಾರಕ್ಕೆ ಬರಲು ಇಂದಿರಾ ಈ ನಿರ್ಧಾರ ತೆಗೆದುಕೊಂಡಿದ್ದರು ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ನೆಹರು ಪುತ್ರಿ  ಭಾರತದ ಬಡತನವನ್ನು ಅಳಿಸಿ ಹಾಕುತ್ತಾರೆ ಎಂದೇ ಜನ ನಂಬಿದ್ದರು. ಬಡತನ ನಿರ್ಮೂಲನೆ ಘೋಷಣೆಯ ಬೆನ್ನಲ್ಲೇ ಚುನಾವಣೆ ನಡೆದ ಕಾರಣ ಕಾಂಗ್ರೆಸ್ ಬಹುಮತದೊಂದಿಗೆ ಲೋಕಸಭೆಗೆ ಲಗ್ಗೆ ಇಟ್ಟಿತು. ಇಲ್ಲಿ ಮತ್ತೊಮ್ಮೆ, ಕಾಂಗ್ರೆಸ್ ಪಕ್ಷ ಒಟ್ಟು ಮತದಾನದಲ್ಲಿ ಕೇವಲ 43.68% ಮತಗಳನ್ನು ಪಡೆಯಿತು ಅನ್ನೋದನ್ನು ಗಮನಿಸಬೇಕು. ಹೀಗಾಗಿ, 1971 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಅಲೆ ಇದೆ ಎಂದು ಮುನ್ನಗ್ಗಿದ ಕಾಂಗ್ರೆಸ್ ಪಕ್ಷವು ಮತದಾನದ ಅರ್ಧದಷ್ಟು ಮತಗಳನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ.

ಇಂದಿರಾಗೆ ಸಂಸತ್ತಿನಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು ವಾಜಪೇಯಿ

ತನ್ನ ಹಿಂದೆ ಭಾರತವೇ ಇದೆ. ಜನರು ತನಗೆ ಆಶೀರ್ವಾದ ಮಾಡಿದ್ದಾರೆ ಎಂದು ಪದೇ ಪದೇ ಇಂದಿರಾ ಹೇಳುತ್ತಿದ್ದರು. ಇತ್ತ ಕಾಂಗ್ರೆಸ್ ಪಕ್ಷ ದೇಶದಲ್ಲಿ ನಿಧಿ ಸಂಗ್ರಹಕ್ಕೆ ಮುಂದಾಯಿತು. ಈ ಮೂಲಕ ಪಕ್ಷ ಬಲಪಡಿಸಲು ಕಾರ್ಯತಂತ್ರ ಹೆಣೆಯಿತು. ಭಾರತದಲ್ಲಿ ಉದ್ಯಮಿಗಳು, ಕಂಪನಿಗಳು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿತು. ಭಾರತದಲ್ಲಿ ಕಾಂಗ್ರೆಸ್ ಪಕ್ಷ ಹೊರತು ಪಡಿಸಿ ಇನ್ಯಾವ ಪಕ್ಷವೂ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ತಮ್ಮ ಉದ್ಯಮಕ್ಕೆ ಕಾಂಗ್ರೆಸ್ ಪಕ್ಷದಿಂದ ಹಲವು ಲಾಭಗಳಿದೆ ಎಂದು ಉದ್ಯಮಿಗಳು ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿದರು. 

ಎನ್‌ಆರ್‌ಸಿ: ಇಂದಿರಾ ಹೇಳಿದ್ದೇನು? ಕಾಂಗ್ರೆಸ್ ಮಾಡ್ತಿರೋದೇನು?.

ಪಕ್ಷಾಂತರವನ್ನು ಪ್ರೋತ್ಸಾಹಿಸಿದ ಕಾರಣ ಹಲವು ಪ್ರತಿಪಕ್ಷದ ಪ್ರಮುಖ ಸದಸ್ಯರು ಕಾಂಗ್ರೆಸ್ ಪಕ್ಷ ಸೇರಿದರು. ಸಿದ್ದಾಂತ ಹಾಗೂ ಪಕ್ಷ ಕಟ್ಟಿದ ನಾಯಕರು ಪ್ರತಿಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲಿಲ್ಲ. ಕಾಂಗ್ರೆಸ್ ಪಕ್ಷ ಹಲವು ದಶಕ ಅಂದರೆ ಬುಹಪಾಲು ದೇಶವನ್ನು ಆಳಿದೆ. ತನ್ನ ಆಳ್ವಿಕೆಯಲ್ಲಿ ವೈಯುಕ್ತಿ ಹಿತದೃಷ್ಟಿ ಕಡೆಗೆ ಗಮನಹರಿಸಿತೇ ಹೊರತು ದೇಶದ ಅಭಿವೃದ್ದಿ ಕಡೆ ಕಣ್ಣೆತ್ತಿ ನೋಡಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಪಕ್ಷ ಹಾಗೂ ಪಕ್ಷದ ಸದಸ್ಯರು ಅಭಿವೃದ್ಧಿಯಾದರು. ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿದರು. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಯಥಾ ರಾಜ ತಥಾ ಪ್ರಜೆ ಅನ್ನೋ ಹಾಗಾಯಿತು.

11 ವರ್ಷಗಳ ಇಂದಿರಾ ಪಯಣ:

ಫೆಬ್ರವರಿ 1966ರಿಂದ ಆರಂಭಗೊಂಡ  ಪ್ರಧಾನಿ ಪಯಣ 1977ರಲ್ಲಿ ದಿಢೀರ್ ಅಂತ್ಯವಾಯಿತು, ಸತತ 11 ವರ್ಷಗಳ ಕಾಲ ಇಂದಿರಾ ಗಾಂಧಿ, ಹೇಗಾದರೂ ಮಾಡಿ ಅಧಿಕಾರದಲ್ಲಿ ಇರಲು ಬಯಸಿದ್ದರು. ಇದಕ್ಕಾಗಿ ಯಾವ ಹಂತಕ್ಕೂ, ಯಾವ ತಲೆಹಿಡುಕ ಐಡಿಯಾವನ್ನು ಜಾರಿಗೊಳಿಸುತ್ತಿದ್ದರು.  ನೆಹರು ಕುಟುಂಬ ಪ್ರಜಾಪ್ರಭುತ್ವನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ತಮ್ಮ ಮೂಗಿನ ನೇರಕ್ಕೆ ಇಲ್ಲ ಎಂದಾಗ ವಿಸರ್ಜನೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಅಸಲಿಯತ್ತ ತಿಳಿದಾಗ ಜನ ತಿರಸ್ಕರಿಸುತ್ತಾರೆ ಎಂದು ಖ್ಯಾತ ನಾಯಕ ಡಾ. ರಾಮ್ ಮನೋಹರ್ ಲೋಹಿಯಾ ಹೇಳಿದ್ದರು. ಅಂದು ಅವರ ಮಾತಿಗೆ ಜನ ನಕ್ಕಿದ್ದರು. ಆದರೆ ಇಂದು ನಿಜವಾಗಿದೆ.

Follow Us:
Download App:
  • android
  • ios