Asianet Suvarna News Asianet Suvarna News

ಇನ್ನೇನು ಶವಕ್ಕೆ ಬೆಂಕಿ ಇಡ್ಬೇಕು ಆಗ ಗೊತ್ತಾಯ್ತು ಸತ್ಯ, ಅಂತ್ಯಸಂಸ್ಕಾರ ನಿಲ್ಲಿಸಿ ಆಸ್ಪತ್ರೆಗೆ ಓಡಿದ ಕುಟುಂಬಸ್ಥರು

ವ್ಯಕ್ತಿ ಏನೋ ಸತ್ತ, ಆತನ ಹಣ, ಆಸ್ತಿ ಸಾಯ್ಲಿಲ್ವಲ್ಲ. ಅದಕ್ಕೆ ಬೇಡಿಕೆ, ಬೆಲೆ ಇದ್ದೇ ಇದೆ. ಚಿತೆ ಮೇಲೆ ಮಲಗಿಸಿದ್ದ ಶವವನ್ನು ಎತ್ತಿ ಆಸ್ಪತ್ರೆಗೆ ಸಾಗಿಸ್ತಾರೆ ಅಂದ್ರೆ ಹಣಕ್ಕೆಷ್ಟು ಮಹತ್ವ ಇದೆ ಊಹಿಸಿಕೊಳ್ಳಿ. ಫಿರೋಜಾಬಾದ್ ನಲ್ಲಿ ಇಂಥದ್ದೊಂದು ಘಟನೆ ಅಚ್ಚರಿ ಹುಟ್ಟಿಸಿದೆ.  

dead body lifted from funeral pyre in pursuit of insurance claim roo
Author
First Published Sep 25, 2024, 3:37 PM IST | Last Updated Sep 25, 2024, 3:37 PM IST

ಹಣದ ಮುಂದೆ ಹೆಣಕ್ಕೂ ಬೆಲೆ ಇಲ್ಲ. ಇದು ಆಗಾಗ ಸಾಭೀತಾಗ್ತಾನೆ ಇರುತ್ತೆ. ಸ್ಮಶಾನ (cemetery) ಕ್ಕೆ ತೆಗೆದುಕೊಂಡು ಹೋಗಿ, ಅಂತ್ಯ ಸಂಸ್ಕಾರ (Last rites) ಕ್ಕೆ ಎಲ್ಲ ಸಿದ್ಧತೆ ಮಾಡಿದ್ಮೇಲೆ ಏಕಾಏಕಿ ಹೆಣವನ್ನು ಅಲ್ಲಿಂದ ಎತ್ತಿ ಆಸ್ಪತ್ರೆಗೆ ದಾಖಲಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಇನ್ನೇನು ಚಿತೆಗೆ ಬೆಂಕಿ ಹಚ್ಚಬೇಕು ಎನ್ನುವ ಸಮಯದಲ್ಲಿ ಕುಟುಂಬಸ್ಥರಿಗೆ ಸತ್ಯವೊಂದು ಗೊತ್ತಾಗಿದೆ. ತಕ್ಷಣ ಹೆಣವನ್ನು ಅಲ್ಲಿಂದ ಆಸ್ಪತ್ರೆಗೆ ರವಾನೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೃತ ವ್ಯಕ್ತಿ ಇನ್ಶುರೆನ್ಸ್ (Insurance) ಮಾಡಿಸಿದ್ದ. ಆತನ ಹೆಸರಿನಲ್ಲಿ ವಿಮ ಇದೆ ಎಂಬುದು ಗೊತ್ತಾಗ್ತಿದ್ದಂತೆ ಅಲರ್ಟ್ ಆದ ಕುಟುಂಬಸ್ಥರು ಪೋಸ್ಟ್ ಮಾರ್ಟಮ್ (Post mortem) ಮಾಡಲು ಮುಂದಾಗಿದ್ದಾರೆ. 

ಈ ಘಟನೆ ಫಿರೋಜಾಬಾದ್ ನ ದಮ್ಮಾಮಲ್ ನಲ್ಲಿ ನಡೆದಿದೆ. ಇಲ್ಲಿನ ನಿವಾಸಿ 55 ವರ್ಷದ ವ್ಯಕ್ತಿ, ಮನೆಯಲ್ಲಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದ.  ಮೃತನ ಹೆಸರು ಹರೇಂದ್ರ. ಮನೆಯಲ್ಲಿ ವಿದ್ಯುತ್ ಕೆಲಸ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಹರೇಂದ್ರನನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿತ್ತು. ಸಂಬಂಧಿಕರೆಲ್ಲ ಬಂದ್ಮೇಲೆ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. ಶವಾಗಾರದಲ್ಲಿ ಎಲ್ಲ ಕೆಲಸ ಪೂರ್ಣಗೊಂಡಿತ್ತು. ಚಿತೆ ಮೇಲಿದ್ದ ಶವಕ್ಕೆ ಅಗ್ನಿ ಸ್ಪರ್ಶ ಮಾಡೋದೊಂದೇ ಬಾಕಿ ಇತ್ತು. ಈ ಸಮಯದಲ್ಲಿ ಕುಟುಂಬಸ್ಥರಿಗೆ, ಹರೇಂದ್ರ ವಿಮೆ ಮಾಡಿಸಿದ್ದರು ಎಂಬುದು ನೆನಪಿಗೆ ಬಂದಿದೆ. 

60 ವರ್ಷದ ಅಮ್ಮನನ್ನು ಬಲತ್ಕರಿಸಿ, ಹೆಂಡ್ತಿ ತರ ಇರು ಎಂದ ಪಾಪಿ ಮಗ!

ಆ ತಕ್ಷಣ ಚಿತೆ ಮೇಲಿದ್ದ ಹರೇಂದ್ರ ಶವವನ್ನು ತೆಗೆದು, ಪೊಲೀಸರಿಗೆ ಮಾಹಿತಿ ನೀಡಿ, ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ವರದಿ ಬಂದ್ಮೇಲೆ ಮತ್ತೆ ಶವಾಗಾರಕ್ಕೆ ತಂದು ಹಿಂದೂ ಪದ್ಧತಿಯಂತೆ ಅಂತ್ಯಸಂಸ್ಕಾರ ಪೂರ್ಣಗೊಳಿಸಿದ್ದಾರೆ.  ಹರೇಂದ್ರ ಅಂತ್ಯಸಂಸ್ಕಾರ ಹಾಗೆ ನಡೆದಿದ್ದರೆ ಕುಟುಂಬಸ್ಥರಿಗೆ  ವಿಮೆ ಹಣ ಬರ್ತಾ ಇರಲಿಲ್ಲ. ವಿಮೆ ಹಣ ಪಡೆಯಲು ಮರಣೋತ್ತರ ಪರೀಕ್ಷೆ ವರದಿ ಕಡ್ಡಾಯ. ಇದನ್ನು ತಿಳಿದ ಕುಟುಂಬಸ್ಥರು, ಶವವನ್ನು ಚಿತೆಯಿಂದ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. 

ವಿಮೆ ಪಡೆಯಲು ಯಾವೆಲ್ಲ ದಾಖಲೆ ಅಗತ್ಯ : ಒಬ್ಬ ವ್ಯಕ್ತಿ ಸಾವನ್ನಪ್ಪಿದ ನಂತ್ರ ಆತನ ಹೆಸರಿನಲ್ಲಿರುವ ವಿಮೆ ಹಣ ಪಡೆಯಲು ಕೆಲವೊಂದು ದಾಖಲೆ ಅನಿವಾರ್ಯ.

ಮರಣ ಪ್ರಮಾಣಪತ್ರ : ಮರಣ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.  ಇದರಲ್ಲಿ ವ್ಯಕ್ತಿಯ ಸಾವಿನ ಸಮಯ, ಸ್ಥಳ ಮತ್ತು ಕಾರಣಗಳಿರುತ್ತವೆ. ವಿಮಾ ಕಂಪನಿಗಳು, ಹಣ ಕ್ಲೈಮ್ ಮಾಡುವ ವ್ಯಕ್ತಿಯ ಗುರುತಿನ ಪುರಾವೆಗಳನ್ನು ಕೇಳುತ್ತದೆ. ಮೃತ ವ್ಯಕ್ತಿಯಿಂದ ನಾಮನಿರ್ದೇಶನಗೊಂಡ ವ್ಯಕ್ತಿಯೇ ಅರ್ಜಿ ಸಲ್ಲಿಸುತ್ತಿದ್ದಾನಾ ಎಂಬುದನ್ನು ಪರಿಶೀಲನೆ ನಡೆಸುತ್ತದೆ.  

ವಿಮಾ ಪಾಲಿಸಿ ಪೇಪರ್‌ : ವಿಮಾ ಪಾಲಿಸಿಯ ಮೂಲ ನಿಯಮಗಳು ಪಾವತಿಯ ಮೊತ್ತದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ವಿಮೆಗೆ ಕ್ಲೈಮ್ ಮಾಡುವ ವ್ಯಕ್ತಿ  ವಿಮೆ ಪಾಲಿಸಿ ಪೇಪರ್ ಗಳನ್ನು ನೀಡಬೇಕಾಗುತ್ತದೆ. 

ವೈದ್ಯಕೀಯ ಪ್ರಮಾಣಪತ್ರ :  ವಿಮಾ ಕಂಪನಿಯ ಅವಶ್ಯಕತೆಗಳನ್ನು ಇದು ಅವಲಂಬಿಸಿದೆ. 

ಪೋಸ್ಟ್‌ಮಾರ್ಟಮ್ ವರದಿ : ಅಸಹಜ ಸಾವಿನ ಸಂದರ್ಭದಲ್ಲಿ ಇದು ಅಗತ್ಯವಾಗಿರುತ್ತದೆ. ಮರಣದ ಸ್ವರೂಪವನ್ನು ಅವಲಂಬಿಸಿ ವಿಮಾ ನಿಯಮಗಳು ಮತ್ತು ಪಾವತಿಯ ಮೊತ್ತಗಳು ಬದಲಾಗುತ್ತವೆ. 

ಆಸ್ಪತ್ರೆಯ ದಾಖಲೆಗಳು : ಅನಾರೋಗ್ಯದಿಂದ ವ್ಯಕ್ತಿ ಸಾವನ್ನಪ್ಪಿದ್ದರೆ ಆಸ್ಪತ್ರೆಯ ದಾಖಲೆ ಅಗತ್ಯವಿರುತ್ತದೆ.  

ಬೆಂಗಳೂರು ವೈಯಾಲಿಕಾವಲ್ ನೇಪಾಳಿ ಕನ್ನಡತಿ ಮಹಾಲಕ್ಷ್ಮಿ ಕೊಲೆ ಆರೋಪಿ ಇವನೇ ನೋಡಿ..!

ಉದ್ಯೋಗದ  ಪ್ರಮಾಣಪತ್ರ : ಅಕಾಲಿಕ ಮರಣದ ಸಂದರ್ಭದಲ್ಲಿ ಈ ಪ್ರಮಾಣಪತ್ರದ ಅಗತ್ಯವಿದೆ. ವಿವಿಧ ವಿಮಾ ಕಂಪನಿಗಳು ಅಕಾಲಿಕ ಮರಣವನ್ನು ವಿಭಿನ್ನವಾಗಿ ವ್ಯಾಖ್ಯಾನಿಸುತ್ತವೆ. ಆದ್ದರಿಂದ ಸಂಬಂಧಿತ ವಿಮಾ ಕಂಪನಿಯನ್ನು ಸಂಪರ್ಕಿಸಿ ಇದ್ರ ಬಗ್ಗೆ ಮಾಹಿತಿ ಪಡೆಯಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಈ ದಾಖಲೆ ನೀಡಬೇಕು. 

Latest Videos
Follow Us:
Download App:
  • android
  • ios