ಅಮೆರಿಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಗರಿಂದ  ಇಂಡಿಯಾ ಟುಡೇ ಪತ್ರಕರ್ತ ರೋಹಿತ್ ಶರ್ಮಾರ ಮೇಲೆ ಹಲ್ಲೆ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಡಿಡಿ ನ್ಯೂಸ್ ಪತ್ರಕರ್ತನ ಮೇಲೆಯೂ ಕಾಂಗ್ರೆಸ್ ಬೆಂಬಲಿಗರು ದಾಳಿ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ದೆಹಲಿ (ಸೆ.19) ಅಮೆರಿಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಗರಿಂದ ಇಂಡಿಯಾ ಟುಡೇ ಪತ್ರಕರ್ತ ರೋಹಿತ್ ಶರ್ಮಾರ ಮೇಲೆ ಹಲ್ಲೆ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಡಿಡಿ ನ್ಯೂಸ್ ಪತ್ರಕರ್ತನ ಮೇಲೆಯೂ ಕಾಂಗ್ರೆಸ್ ಬೆಂಬಲಿಗರು ದಾಳಿ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಅಶೋಕ್ ಶ್ರೀವಾಸ್ತವ್ ಹಲ್ಲೆಗೊಳಗಾದ ಪತ್ರಕರ್ತ. ಮೂಲಗಳ ಪ್ರಕಾರ, ಅಶೋಕ್ ಶ್ರೀವಾಸ್ತವ ಅವರು ಸೆ.18, ಬುಧವಾರ ರಾತ್ರಿ ತಮ್ಮ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಕಾರಿಗೆ ದೊಡ್ಡ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಅಶೋಕ್ ಶ್ರೀವಾಸ್ತವ ಗಾಯಗೊಂಡಿದ್ದಾರೆ. ಈ ಹಠಾತ್ ದಾಳಿಯಿಂದ ಅಶೋಕ್ ಶ್ರೀವಾಸ್ತವ ಕೂಡ ಬೆಚ್ಚಿಬಿದ್ದಿದ್ದಾರೆ. ಘಟನೆ ಬಗ್ಗೆ ಹಲವು ಪತ್ರಕರ್ತರು ಧ್ವನಿ ಎತ್ತಿದ್ದಾರೆ. 

ಯೋಗಿ ಆದಿತ್ಯನಾಥ್-ರಾಹುಲ್ ಗಾಂಧಿ ಕುಂಡಲಿ ಹೇಳುತ್ತಿದೆ ಭವಿಷ್ಯ, 2029ರಲ್ಲಿ ಯಾರಾಗ್ತಾರೆ ಪ್ರಧಾನಿ?

ಡಿಡಿ ನ್ಯೂಸ್ ಪತ್ರಕರ್ತರಾಗಿರುವ ಅಶೋಕ್ ಶ್ರೀವಾಸ್ತವ ಅವರು ದಾಳಿ ನಡೆದ ಹಿಂದಿನ ದಿನ ಪ್ರೆಸ್‌ಕ್ಲಬ್ ನಿಂದ ಹೊರಗೆ ತೆರಳಿದ್ದರು. ಇಂಡಿಯಾ ಟುಡೇ ಪತ್ರಕರ್ತನ ಮೇಲೆ ಕಾಂಗ್ರೆಸ್ ಮುಖಂಡರಿಂದ ನಡೆದ ಹಲ್ಲೆ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪತ್ರಕರ್ತ ರೋಹಿತ್ ಶರ್ಮಾರ ಮೇಲೆ ಕಾಂಗ್ರೆಸ್ಸಿಗರ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದರು. 

ಬಾಂಗ್ಲಾ ಹಿಂದೂ ಬಗ್ಗೆ ರಾಹುಲ್ ಗಾಂಧಿಯನ್ನ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ನಾಯಕರಿಂದ ಪತ್ರಕರ್ತನ ಮೇಲೆ ಹಲ್ಲೆ!

ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದ ಬೆಂಬಲಿಗರ ಕೃತ್ಯಕ್ಕೆ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು, ಪತ್ರಕರ್ತರನ್ನು ಗೌರವಿಸಿದನ್ನು ಕಲಿಯಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು. ಕಾಂಗ್ರೆಸ್ ನಾಯಕರು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ. ಪತ್ರಕರ್ತರ ಮೇಲೆ ಹಲ್ಲೆ ನಡೆಸುವುದು ಮಾಧ್ಯಮ ಸ್ವಾತಂತ್ರ್ಯಕ್ಕೆ ಕೊಡುವ ಗೌರವವೇ? ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿ ಬಗ್ಗೆ ಪ್ರಶ್ನೆ ಕೇಳುವುದು ಅಪರಾಧವೇ? ಎಂದು ಪ್ರಶ್ನಿಸಿದ್ದರು. ಇದೀಗ ಪ್ರತಿಭಟನೆಯಲ್ಲಿ ಭಾಗಿಯಾದ ಮರುದಿನವೇ ಕಾರಿನಿಂದ ಡಿಕ್ಕಿ ಹೊಡೆಸಿ ಹಲ್ಲೆ ನಡೆಸಲಾಗಿದೆ.

Scroll to load tweet…