ನೆಲ್ಲೂರು(ಮೇ.11): ಕೊರೋನಾ ರೋಗಿಗಳ ಚಿಕಿತ್ಸೆಗೆ ಪರಿಣಾಮಕಾರಿ ಎಂದು ಹೇಳಲಾಗುತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಹೊಸ ಔಷಧ 2-ಡಿಜಿ, ಮಂಗಳವಾರ ಅಥವಾ ಬುಧವಾರವೇ ರೋಗಿಗಳ ಬಳಕೆಗೆ ಲಭ್ಯವಾಗಲಿದೆ. ಡಿಆರ್‌ಡಿಒ ಮುಖ್ಯಸ್ಥ ಡಾ.ಸತೀಶ್‌ ರೆಡ್ಡಿ ಸೋಮವಾರ ಈ ವಿಷಯವನ್ನು ತಿಳಿಸಿದ್ದಾರೆ. ಇದರಿಂದಾಗಿ ತೀವ್ರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವವರು ಮತ್ತು ಆಕ್ಸಿಜನ್‌ ಸಿಲಿಂಡರ್‌ ಮೇಲೆ ಅವಲಂಬಿತವಾಗಿರುವವರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಡಿಆರ್‌ಡಿಒ ಕೋವಿಡ್‌ ಔಷಧಿ ಯಾವಾಗ ಬಿಡುಗಡೆ? ಸಿಕ್ತು ಗುಡ್‌ ನ್ಯೂಸ್‌!!

2-ಡಿಆಕ್ಸಿ-ಡಿ- ಗ್ಲುಕೋಸ್‌ ಅನ್ನು ಮೇ 11 ಅಥವಾ 12ರಂದು ಬಿಡುಗಡೆ ಮಾಡಲಾಗುವುದು. ಮೊದಲ ಕಂತಿನಲ್ಲಿ 10 ಸಾವಿರ ಪೊಟ್ಟಣಗಳು ರೋಗಿಗಳ ಬಳಕೆಗೆ ಲಭ್ಯವಾಗಲಿದೆ ಎಂದು ಡಿಆರ್‌ಡಿಒ ಮುಖ್ಯಸ್ಥ ಡಾ.ಜಿ.ಸತೀಶ್‌ ರೆಡ್ಡಿ ಹೇಳಿದ್ದಾರೆ. ಈ ಔಷಧಿಗೆ ಈಗಾಗಲೇ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಅನುಮೋದನೆ ನೀಡಿದೆ. ಹೈದರಾಬಾದ್‌ ಮೂಲದ ಡಾ| ರೆಡ್ಡೀಸ್‌ ಲ್ಯಾಬ್‌ ಸಹಯೋಗದಲ್ಲಿ ಈ ಔಷಧಿಯನ್ನು ಉತ್ಪಾದನೆ ಮಾಡಲಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona