ದೆಹಲಿ(ಮೇ.11): ಕೊರೋನಾದಿಂದಾಗಿ ಸ್ಥಾಪಕನನ್ನು ಕಳೆದುಕೊಂಡ ಒಂದು ವಾರದ ನಂತರ, ದೆಹಲಿಯ ಪ್ರಮುಖ ಖಾಸಗಿ ಶಾಲೆಗಳಲ್ಲಿ ಒಂದಾದ ದ್ವಾರಕಾದ ಮೌಂಟ್ ಕಾರ್ಮೆಲ್ ಶಾಲೆ ತನ್ನದೇ ಕಟ್ಟದಲ್ಲಿ ಸುಮಾರು 100 ಆಕ್ಸಿಜನ್‌ ಬೆಡ್‌ಗಳ ಕೊರೋನಾ ಕೇಂದ್ರವನ್ನು ತೆರೆದಿದೆ.

ದೆಹಲಿ ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳು ನಡೆಸುತ್ತಿರುವ ಹಲವಾರು ಶಾಲೆಗಳು ಕೋವಿಡ್ -19 ರೋಗಿಗಳಿಗೆ ಕ್ವಾರೆಂಟೈನ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಖಾಸಗಿ ಶಾಲೆಯು ತನ್ನ ಶಾಲಾ ಆವರಣದಲ್ಲಿ ಕೋವಿಡ್ ಆರೈಕೆ ಸೌಲಭ್ಯವನ್ನು ಸ್ಥಾಪಿಸಿದ್ದು ಇದೇ ಮೊದಲು.

ಜೈನ ದೇವಾಲಯ ಈಗ ವ್ಯಾಕ್ಸಿನೇಷನ್ ಕೇಂದ್ರ..!

ಮೌಂಟ್ ಕಾರ್ಮೆಲ್ ಶಾಲೆಗಳ ಡೀನ್ ಮೈಕೆಲ್ ವಿಲಿಯಮ್ಸ್, ಕಳೆದ ವಾರ ಅವರ ತಂದೆ ಮತ್ತು ಈ ಶಾಲೆಗಳ ಸಂಸ್ಥಾಪಕ ವಿ.ಕೆ.ವಿಲಿಯಮ್ಸ್ ಕೋವಿಡ್ -19 ರ ಕಾರಣದಿಂದಾಗಿ ನಿಧನರಾದರು ಎಂದು ಹೇಳಿದ್ದಾರೆ. ಅವರ ತಾಯಿ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. 

ಈ ಸೌಲಭ್ಯವನ್ನು ಸ್ಥಾಪಿಸುವ ಕೆಲಸವು ಒಂದು ತಿಂಗಳ ಹಿಂದೆ ಪ್ರಾರಂಭವಾಗಿತ್ತು. ದೆಹಲಿಯಾದ್ಯಂತ 100 ಕ್ಕೂ ಹೆಚ್ಚು ಚರ್ಚುಗಳ ಜನರು ಈ ಸಾಂಕ್ರಾಮಿಕ ರೋಗದ ಮಧ್ಯೆ ಜನರಿಗೆ ಸಹಾಯ ಮಾಡಲು ಅಲ್ಪಸಂಖ್ಯಾತ ಶಾಲೆಗಳನ್ನು ಕೋವಿಡ್ ಆರೈಕೆ ಕೆಂದ್ರಗಳಾಗಿ ಪರಿವರ್ತಿಸಲು ನಿರ್ಧರಿಸಿದರು. ಕೊರೋನಾದಿಂದ ಈ ದಿನಗಳಲ್ಲಿ ಶಾಲಾ ಕಟ್ಟಡಗಳು ಮುಚ್ಚಲ್ಪಟ್ಟಿವೆ. ನಾವು ಮೌಂಟ್ ಕಾರ್ಮೆಲ್ ಅನ್ನು ಮೊದಲ ಶಾಲೆಯಾಗಿ ಆಯ್ಕೆ ಮಾಡಿದ್ದೇವೆ. ಕಳೆದ ವಾರ ಕೋವಿಡ್ ವಿರುದ್ಧ ಹೋರಾಡುವಾಗ ನನ್ನ ತಂದೆ ತೀರಿಕೊಂಡರು. ಅದಕ್ಕಾಗಿಯೇ ನಾವು ಅವರ ಹೆಸರನ್ನು ಇಡಲು ನಿರ್ಧರಿಸಿದ್ದೇವೆ. ಈ ಪ್ರಯೋಗವು ಕಾರ್ಯನಿರ್ವಹಿಸಿದರೆ, ನಾವು ಅದನ್ನು ದೆಹಲಿಯ ಇತರ ಅಲ್ಪಸಂಖ್ಯಾತ ಶಾಲೆಗಳಲ್ಲಿ ಮಾಡಲಿದ್ದೇಚೆ ಎಂದು ಅವರು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona