ದಾವೂದ್ ಇಬ್ರಾಹಿಂನ ಕೋಟ್ಯಂತರ ಮೌಲ್ಯದ ಆಸ್ತಿ ಮುಂಬೈ ಮತ್ತು ರತ್ನಗಿರಿಯಲ್ಲಿ ಹರಾಜು ಆಗಲಿದೆ, ಅದರ ಮೌಲ್ಯ ಎಷ್ಟು ಗೊತ್ತಾ?
ಭೂಗತ ಪಾತಕಿ ಹಾಗೂ ಮುಂಬೈ ಬಾಂಬ್ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ಹಲವು ವರ್ಷಗಳಿಂದ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿದ್ದಾನೆ. ಆತ ಸತ್ತಿದ್ದಾನೆ, ಗಂಭೀರವಾಗಿ ಅನಾರೋಗ್ಯಗೊಂಡಿದ್ದಾನೆ ಇತ್ಯಾದಿ ಸುದ್ದಿಗಳು ಹರಿದಾಡ್ತಾನೇ ಇವೆ. ಇದೀಗ ಮಹಾರಾಷ್ಟ್ರ ಸರ್ಕಾರ ಇವನ ವಿರುದ್ಧ ಮಹತ್ವದ ಕ್ರಮವೊಂದನ್ನು ಕೈಗೊಳ್ಳಲು ಹೊರಟಿದೆ.
ಮುಂಬೈ ಮತ್ತು ರತ್ನಗಿರಿಯಲ್ಲಿರುವ ದಾವೂದ್ ಇಬ್ರಾಹಿಂನ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹರಾಜು ಹಾಕಲು ಸರ್ಕಾರ ನಿರ್ಧರಿಸಿದೆ. ಜನವರಿ 5ರಂದು ಹರಾಜು ಮಾಡಲಾಗುತ್ತಿದ್ದು, ಈ ಸಂಬಂಧ ಸರ್ಕಾರ ನೋಟಿಸ್ ಕೂಡ ನೀಡಿದೆ.
ಏನೇನು ಹರಾಜು?
ರತ್ನಗಿರಿಯ ಖೇಡ್ ತಾಲೂಕಿನ ಬಂಗಲೆ, ಮಾವಿನ ತೋಟ ಸೇರಿದಂತೆ ನಾಲ್ಕು ಆಸ್ತಿಗಳನ್ನು ಕಳ್ಳ ಸಾಗಾಣಿಕೆದಾರರು ಮತ್ತು ವಿದೇಶಿ ವಿನಿಮಯ ಕುಶಲ ಕಾಯ್ದೆ (ಎಸ್‌ಎಎಫ್‌ಇಎಂಎ) ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅವುಗಳು ದಾವೂದ್‌ಗೆ ಸಂಬಂಧಿಸಿದ ಕಾರಣ ಯಾರೂ ಕೊಳ್ಳಲು ಮುಂದೆ ಬಂದಿರಲಿಲ್ಲ. ಇದೀಗ ಅವುಗಳನ್ನು ಈಗ ಹರಾಜಿಗಿಡಲಾಗಿದೆ. ಇದರಲ್ಲಿ ದಾವೂದ್ ಬಾಲ್ಯ ಕಳೆದ ಮನೆಯೂ ಸೇರಿದೆ.
ಅಯೋಧ್ಯೆಗೆ ಭೇಟಿ ನೀಡಲು ಬಯಸುವವರಿಗೆ ಬಿಜೆಪಿ ವ್ಯವಸ್ಥೆ
ಈ ಮುಂಚೆಯೂ ನಡೆದಿತ್ತು ಹರಾಜು
ಇದಕ್ಕೂ ಮುಂಚೆಯೇ, ಮಹಾರಾಷ್ಟ್ರ ಸರ್ಕಾರವು ದಾವೂದ್ ಕುಟುಂಬದ ಅನೇಕ ಆಸ್ತಿಗಳನ್ನು ಗುರುತಿಸಿ ಅವುಗಳ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು. ಇದರಲ್ಲಿ ₹4.53 ಕೋಟಿಗೆ ಮಾರಾಟವಾದ ರೆಸ್ಟೋರೆಂಟ್, ₹3.53 ಕೋಟಿಗೆ ಆರು ಫ್ಲಾಟ್‌ಗಳು ಮತ್ತು ₹3.52 ಕೋಟಿಗೆ ಮಾರಾಟವಾದ ಅತಿಥಿ ಗೃಹ ಸೇರಿದೆ. ಕಳೆದ 9 ವರ್ಷಗಳಲ್ಲಿ ದಾವೂದ್ ಹಾಗೂ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಮಾರಾಟ ಮಾಡಲಾಗಿದೆ.
ಡಿಸೆಂಬರ್ 2020ರಲ್ಲಿ, ಎರಡು ಪ್ಲಾಟ್‌ಗಳು ಮತ್ತು ಮುಚ್ಚಿದ ಪೆಟ್ರೋಲ್ ಪಂಪ್ ಸೇರಿದಂತೆ ರತ್ನಗಿರಿಯಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಯನ್ನು ₹1.10 ಕೋಟಿಗೆ ಹರಾಜು ಮಾಡಲಾಗಿತ್ತು. ಇದಕ್ಕೂ ಮುನ್ನ 2019ರ ಏಪ್ರಿಲ್‌ನಲ್ಲಿ ನಾಗ್‌ಪಾಡಾದಲ್ಲಿ 600 ಚದರ ಅಡಿ ಫ್ಲಾಟ್ ಹರಾಜಾಗಿತ್ತು.ಇದಲ್ಲದೆ, 2019ರ ಏಪ್ರಿಲ್‌ನಲ್ಲಿ ನಾಗ್‌ಪಾಡಾದಲ್ಲಿ 600 ಚದರ ಅಡಿಯ ಫ್ಲಾಟ್ ₹1.80 ಕೋಟಿಗೆ ಹರಾಜಾಗಿತ್ತು.
2018ರಲ್ಲಿ, ಪಕ್ಮೋಡಿಯಾ ಸ್ಟ್ರೀಟ್‌ನಲ್ಲಿರುವ ದಾವೂದ್‌ನ ಆಸ್ತಿಯನ್ನು ₹79.43 ಲಕ್ಷದ ಮೀಸಲು ಬೆಲೆಗೆ ಹರಾಜು ಮಾಡಲಾಯಿತು, ಇದನ್ನು ಸೈಫಿ ಬುರ್ಹಾನಿ ಅಪ್‌ಲಿಫ್ಟ್‌ಮೆಂಟ್ ಟ್ರಸ್ಟ್ (SBUT) ₹ 3.51 ಕೋಟಿಗೆ ಖರೀದಿಸಿತು.
2500 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಸಾಮಾನ್ಯ ವ್ಯಕ್ತಿಯನ್ನು ಮದ್ವೆಯಾದ ...
1993 ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ 1983 ರಲ್ಲಿ ಮುಂಬೈಗೆ ತೆರಳುವ ಮೊದಲು ಮುಂಬಾಕೆ ಗ್ರಾಮದಲ್ಲಿ ವಾಸಿಸುತ್ತಿದ್ದನು. 257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟದ ನಂತರ ಅವನು ಭಾರತವನ್ನು ತೊರೆದನು.
