Asianet Suvarna News Asianet Suvarna News

ಮಸೀದಿ ಬೇಡ, ಪವಿತ್ರ ರಂಜಾನ್ ಪ್ರಾರ್ಥನೆ ಮನೆಯಲ್ಲೇ ನೆರವೇರಿಸಿ: ಫತ್ವಾದಲ್ಲಿ ಉಲ್ಲೇಖ

ಕೊರೋನಾ ನಿಯಂತ್ರಿಸಲು ಸಮಾಜಿಕ ಅಂತರ| ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಲಾಕ್‌ಡೌನ್| ಲಾಕ್‌ಡೌನ್ ಸಡಿಲಗೊಂಡರೂ ಧಾರ್ಮಿಕ ಆಚರಣೆಗಳಿಗೆ ಬ್ರೇಕ್| ಇಂತಹ ಪರಿಸ್ಥೊತಿಯಲ್ಲಿ ರಂಜಾನ್ ಪ್ರಾರ್ಥನೆ ಮನೆಯಲ್ಲೇ ಮಾಡುವಂತೆ ಫತ್ವಾ

Darul Uloom Deoband issues fatwa asks Muslims to offer Eid prayers at home
Author
Bangalore, First Published May 19, 2020, 4:08 PM IST
  • Facebook
  • Twitter
  • Whatsapp

ಸಹರಾನ್‌ಪುರ್(ಮೇ.19): ಇಸ್ಲಾಂ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್ ಮುಸಲ್ಮಾನರಿಗೆ ಫತ್ವಾವೊಂದನ್ನು ಹೊರಡಿಸಿದ್ದು, ಈ ಬಾರಿಯ  ಪವಿತ್ರ ರಂಜಾನ್ ಪ್ರಾರ್ಥನೆಯನ್ನು ಮಸೀದಿಯ ಬದಲಾಗಿ ಮನೆಯಲ್ಲೇ ಮಾಡುವಂತೆ ಕೇಳಿಕೊಂಡಿದೆ. ಕೊರೋನಾ ತಡೆಯುವ ನಿಟ್ಟಿನಲ್ಲಿ ದೇಶವ್ಯಾಪಿ ವಿಸ್ತರಿಸಿರುವ ಲಾಕ್‌ಡೌನ್ ನಡುವೆ ಈ ಸಂಘಟನೆ ಇಂತಹುದ್ದೊಂದು ಫತ್ವಾ ಹೊರಡಿಸಿದೆ ಎಂಬುವುದು ಉಲ್ಲೆಖನೀಯ.

ದೇಶವ್ಯಾಪಿ ಲಾಕ್‌ಡೌನ್ ಸಡಿಲಗೊಳಿಸಲಾಗಿದೆಯಾದರೂ ಧಾರ್ಮಿಕ ಹಾಗೂ ಇನ್ನಿತರ ದೊಡ್ಡ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ. ಈ ನಿಟ್ಟಿನಲ್ಲಿ ಮುಸಲ್ಮಾನರಿಗೆ ಇಂತಹುದ್ದೊಂದು ಫತ್ವಾ ಹೊರಡಿಸಲಾಗಿದೆ ಎನ್ನಲಾಗಿದೆ. 

ಅಝಾನ್‌ಗೆ ಮೈಕ್ ಅಥವಾ ಸ್ಪೀಕರ್ ಬಳಸಬಾರದು; ಯುಪಿ ಹೈಕೋರ್ಟ್ ಆದೇಶ!

ಇನ್ನು ಈ ಫತ್ವಾದಲ್ಲಿ ಶುಕ್ರವಾದರ ನಮಾಜ್‌ ಹಾಗೂ ಪ್ರಾರ್ಥನೆಯನ್ನು ಹೇಗೆ ಮನೆಯಲ್ಲೇ ಮಾಡಲಾಗುತ್ತದೋ ಅದೇ ರೀತಿ,  ಪವಿತ್ರ ರಂಜಾನ್‌ ದಿನದ ಪ್ರಾರ್ಥನೆಯನ್ನೂ ಸಲ್ಲಿಸುವಂತೆ ಸೂಚಿಸಲಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಂದಿನಂತೆ ನಮಾಜ್ ಮಾಡುವುದರಲ್ಲಿ ತಪ್ಪಿಲ್ಲ, ಎಂದೂ ಈ ಫತ್ವಾದಲ್ಲಿ ತಿಳಿಸಲಾಗಿದೆ.

ಅಂದ ಹಾಗೆ ಈ ಬಾರಿ ಪವಿತ್ರ ರಂಜಾನ್ ಮೇ 24 ಅಥವಾ 25 ರಂದು ಆಚರಿಸಲಾಗುತ್ತದೆ.

Follow Us:
Download App:
  • android
  • ios