ಕಥೆಗಾರರಿಗಾಗಿ ದೇಶಾದ್ಯಂತ ಪ್ರತಿಭಾನ್ವೇಷಣೆಯ ಅತೀ ದೊಡ್ಡ ಅಭಿಯಾನ  #StoryForGlory ದೆಹಲಿಯಲ್ಲಿ ಮುಕ್ತಾಯಗೊಂಡಿದೆ. 12 ಮಂದಿಯನ್ನು ಪ್ರತಿಭಾನ್ವೇಷಣೆಯಲ್ಲಿ ವಿಜೇತರಾಗಿ ಘೋಷಿಸಲಾಗಿದೆ.

ನವದೆಹಲಿ(ಸೆ.29): ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಸುಗಮಗೊಳಿಸಲು ಮತ್ತು ಸೃಜನಶೀಲ ವಿಷಯದೊಂದಿಗೆ ದೊಡ್ಡ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ರೂಪಿಸಲು ದೇಶದಲ್ಲಿ ಅತೀ ದೊಡ್ಡ ಕಥೆಗಾರರ #StoryForGlory ಪ್ರತಿಭಾನ್ವೇಷಣಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಡೈಲಿಹಂಟ್ ಮತ್ತು ಎಎಂಜಿ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಸಹಯೋಗದಲ್ಲಿ ಕಥೆಗಾರರ #StoryForGlory ಪ್ರತಿಭಾನ್ವೇಷಣಾ ಅಭಿಯಾನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವೀಡಿಯೊ ಮತ್ತು ಪ್ರಿಂಟ್ ಎಂಬ ಎರಡು ವಿಭಾಗಗಳ ರಾಷ್ಟ್ರವ್ಯಾಪಿ ನಡೆದ ಕಥೆದಾರರ ಟ್ಯಾಲೆಂಟ್ ಹುಡುಕಾಟ ನಡೆಸಲಾಗಿತ್ತು. ಈ ಪ್ರತಿಭಾನ್ವೇಷಣೆಯಲ್ಲಿ 12 ಮಂದಿ ವಿಜೇತರಾಗಿ ಘೋಷಿಸಲಾಗಿದೆ. ಮೇ ತಿಂಗಳಲ್ಲಿ ಆರಂಭಗೊಂಡ ಈ ಪ್ರತಿಭಾನ್ವೇಷಣೆ ಸತತ 4 ತಿಂಗಳ ಕಾಲ ನಡೆದಿತ್ತು. 1,000ಕ್ಕೂ ಹೆಚ್ಚು ಅರ್ಜಿಗಳಲ್ಲಿ 20 ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿತ್ತು. ಶಾರ್ಟ್‌ಲಿಸ್ಟ್ ಮಾಡಿದ 20 ಪ್ರತಿಭೆಗಳು MICA ಯಲ್ಲಿ ಎಂಟು ವಾರಗಳ ದೀರ್ಘ ಫೆಲೋಶಿಪ್ ಮತ್ತು ಎರಡು ವಾರಗಳ ಕಲಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಪ್ರಮುಖ ಮಾಧ್ಯಮ ಪ್ರಕಾಶ ಸೇರಿದಂತೆ ಹಿರಿಯರಿಂದ ಮಾರ್ಗದರ್ಶನ ಪಡೆದಿದ್ದಾರೆ. 

ಹಲವು ವಿಧದ ತರಬೇತಿ, ಮಾರ್ಗದರ್ಶನ ಪಡೆದ 20 ಪ್ರತಿಭಟೆಗಳು ಅಂತಿಮ ಘಟ್ಟ ಪ್ರವೇಶಿಸಿದ್ದರು. ಈ ಪ್ರತಿಭೆಗಳು ತಮ್ಮ ಪ್ರಾಜೆಕ್ಟ್ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗೆ ಎಲ್ಲಾ ರೀತಿಯಲ್ಲೂ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ 20 ಮಂದಿಯಲ್ಲಿ 12 ಮಂದಿಯನ್ನು ತೀರ್ಪುಗಾರರು ವಿಜೇತರಾಗಿ ಆಯ್ಕೆ ಮಾಡಿದ್ದಾರೆ. ಡೈಲಿಹಂಟ್ ಸಂಸ್ಥಾಪಕ ವೀರೇಂದ್ರ ಗುಪ್ತ, AMG ಮೀಡಿಯಾ ನೆಟ್‌ವರ್ಕ್ಸ್ ಎಡಿಟರ್ ಇನ್ ಚೀಫ್ ಸಂಜಯ್ ಪುಗಾಲಿಯಾ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಗೋಯೆಂಕಾ, ಫಿಲ್ಮ್ ಕಂಪ್ಯಾನಿಯನ್ ಸಂಸ್ಥಾಪಕ ಅನುಪಮಾ ಚೋಪ್ರಾ ಸೇರಿದಂತೆ ಹಲವು ಮಾಧ್ಯಮ ದಿಗ್ಗಜರು ತೀರ್ಪುಗಾರರಾಗಿದ್ದರು.

 ಡಿಜಿಟಲ್ ಸುದ್ದಿ ಮತ್ತು ಮಾಧ್ಯಮ ಜಗತ್ತು ಮುಂದುವರೆದಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಭಾರತದ ಪ್ರತಿಭಾವವಂತ ಕಥೆಗಾರರ ಅನ್ವೇಷಿಸಲು ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಸಮರ್ಥರಾಗಿದ್ದೇವೆ. #StoryForGlory ಮೂಲಕ ನಾವು ಭಾರತದ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಮ್ಮ ಬದ್ಧತೆಯನ್ನು ಮರುಸ್ಥಾಪಿಸಿದ್ದೇವೆ. ಭಾರತದ ಉದಯೋನ್ಮುಖ ಕಥೆಗಾರರಿಗೆ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಉತ್ಸಾಹವನ್ನು ಹಂಚಿಕೊಳ್ಳಲು ಅವಕಾಶಗಳನ್ನು ನೀಡುತ್ತೇವೆ ಎಂದು ಡೈಲಿಹಂಟ್ ಸಂಸ್ಥಾಪಕ ವೀರೇಂದ್ರ ಗುಪ್ತಾ ಹೇಳಿದ್ದಾರೆ.

ಭಾರತದ ಅಳಿಸಲಾಗದ ಇತಿಹಾಸ, ಹಲವು ಕಥೆಗಳ ನಾಡಾಗಿದೆ. ಈ ಭೂಮಿ ಹಲವು ಅತ್ಯುನ್ನತ ಕಥೆಗಾರರಿಗೆ ನೆಲೆಯಾಗಿದೆ. ಡೈಲಿಹಂಟ್‌ನೊಂದಿಗೆ ಮುಂದಿನ ಜನರೇಷನ್‌ನ ಚರಿತ್ರೆಕಾರರನ್ನು ಗುರುತಿಸಲು ಶ್ರಮಿಸಿದ್ದೇವೆ. ಈ ಕಾರ್ಯಕ್ರಮದ ಮೂಲಕ ಪ್ರತಿಭೆಗಳಲ್ಲಿರುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಲು ಸಹಾಯಕವಾಗಿದೆ ಎಂದು AMG ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್‌ನ ಸಿಇಒ ಸಂಪಾದಕ ಸಂಜಯ್ ಪುಗಾಲಿಯಾ ಹೇಳಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಸಿಕ್ಕದ ಪ್ರತಿಕ್ರಿಯೆ ನಮ್ಮ ಉತ್ಸಾಹ ಹೆಚ್ಚಿಸಿದೆ. ಸೃಜನಶೀಲ, ಕೌಶಲ್ಯ ಅಭಿವೃದ್ಧಿ, ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯ ರೂಪಿಸಲು ಈ ರೀತಿಯ ಕಾರ್ಯಕ್ರಮಗಳು ನೆರವಾಗಿದೆ ಎಂದು ಸಂಜಯ್ ಪುಗಾಲಿಯಾ ಹೇಳಿದ್ದಾರೆ.

ಡೈಲಿಹಂಟ್
ಡೈಲಿಂಹಚ್ ಭಾರತದ ನಂ.1 ಸ್ಥಳೀಯ ಭಾಷಾ ವೇದಿಕೆಯ ಮಾಧ್ಯಮವಾಗಿದೆ. ಪ್ರತಿದಿನ 1 ಮಿಲಿಯನ್ಗೂ ಹೆಚ್ಚು ಹೊಸ ವಿಷಯಗಳನ್ನು ನೀಡುತ್ತಿದೆ. ಡೈಲಿಹಂಟ್ 5,000ಕ್ಕೂ ಹೆಚ್ಚು ಕಂಟೆಂಟ್ ಪಾರ್ಟ್ನರ್ ಹೊಂದಿದೆ. 1 ಬಿಲಿಯನ್ ಭಾರತೀಯರಿಗೆ ವಿಷಗಳನ್ನು, ಸುದ್ದಿಗಳನ್ನು ತಿಳಿಸುವ, ಶ್ರೀಮಂತಗೊಳಿಸುವ ಹಾಗೂ ಮನರಂಜನೆ ನೀಡುವುದು ಡೈಲಿಹಂಟ್ ಮೂಲಧ್ಯೇಯವಾಗಿದೆ. ಈ ಎಲ್ಲಾ ವಿಚಾರಗಳನ್ನು ತಿಳಿಸುವ, ಒದುಗರಿಗೆ ನೀಡುವ, ಇತರರಿಗೆ ಪ್ರತಿಕ್ರಿಯೆ ನೀಡುವ ಇಂಡಿಕ್ ವೇದಿಕೆಯಾಗಿದೆ. ನೈಜ-ಸಮಯ, ವೈಯಕ್ತಿಕಗೊಳಿಸಿದ ವಿಷಯ ಮತ್ತು ಅಧಿಸೂಚನೆಗಳನ್ನು ತಲುಪಿಸಲು ಬಳಕೆದಾರರ ಆದ್ಯತೆಗಳನ್ನು ಟ್ರ್ಯಾಕ್ ಮಾಡುತ್ತದೆ. ಡೈಲಿಹಂಟ್ ಅಪ್ಲಿಕೇಶನ್ Android, iOS ಮತ್ತು ಮೊಬೈಲ್ ವೆಬ್‌ನಲ್ಲಿ ಲಭ್ಯವಿದೆ.

ಅದಾನಿ ಗ್ರೂಪ್
ಅದಾನಿ ಗ್ರೂಪ್ ಪ್ರಧಾನಿ ಕಚೇರಿ ಅಹಮ್ಮದಾಬಾದ್‌ನಲ್ಲಿದೆ. ಲಾಜಿಸ್ಟಿಕ್, ಸಂಪೂನ್ಮೂಲ, ವಿದ್ಯುತ್ ಉತ್ಪಾದನೆ, ವಿತರಣೆ, ನವೀಕರಿಸಬಹುದಾದ ಶಕ್ತಿ, ಅನಿಲ, ವಿಮಾನ ನಿಲ್ದಾಣ, ಬಂದರು ಸೇರಿದಂತೆ ಪ್ರಮುಖ ನಿಲ್ದಾಗಳನ್ನು ಅದಾನಿ ಗ್ರೂಪ್ ನಿರ್ವಹಣೆ ಮಾಡುತ್ತಿದೆ. ವೈವಿಧ್ಯಮಯ ವ್ಯವಹಾರಗಳ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿ ಅದಾನಿ ಗ್ರೂಪ್ ಬೆಳೆದಿದೆ. ಮೂಲಸೌಕರ್ಯ, ಕೃಷಿ (ಸರಕುಗಳು, ಖಾದ್ಯ ತೈಲ, ಆಹಾರ ಉತ್ಪನ್ನಗಳು, ಕೋಲ್ಡ್ ಸ್ಟೋರೇಜ್ ಮತ್ತು ಧಾನ್ಯ ಸಿಲೋಸ್), ರಿಯಲ್ ಎಸ್ಟೇಟ್, ಸಾರ್ವಜನಿಕ ಸಾರಿಗೆ ಮೂಲಸೌಕರ್ಯ, ಗ್ರಾಹಕ ಹಣಕಾಸು ಮತ್ತು ರಕ್ಷಣೆ, ಮತ್ತು ಇತರ ವಲಯಗಳಲ್ಲೂ ಅದಾನಿ ಗ್ರೂಪ್ ವಹಿವಾಟು ನಡೆಸುತ್ತಿದೆ.