Asianet Suvarna News Asianet Suvarna News

ಹಳ್ಳಿಯ ಹಲಸು ಕೇಳಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ..!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಳ್ಳಿಯ ಹಲಸು ಬೇಕು ಎಂದು ಕೇಳಿದ್ದಾರೆ. ತನ್ನ ಮಗನ ಬಳಿ ಒಂದು ಬೇಡಿಕೆ ಇಟ್ಟ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಲಸಿನ ಹಣ್ಣು ತಂದುಕೊಡುವಂತೆ ಕೇಳಿದ್ದಾರೆ.

dad asked for jackfruit from village says  Pranab Mukherjee son
Author
Bangalore, First Published Aug 14, 2020, 1:54 PM IST

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಳ್ಳಿಯ ಹಲಸು ಬೇಕು ಎಂದು ಕೇಳಿದ್ದಾರೆ. ತನ್ನ ಮಗನ ಬಳಿ ಒಂದು ಬೇಡಿಕೆ ಇಟ್ಟ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಲಸಿನ ಹಣ್ಣು ತಂದುಕೊಡುವಂತೆ ಕೇಳಿದ್ದಾರೆ.

ಪಶ್ಚಿಮ ಬಂಗಾಳದ ರಾಜಕಾರಣಿ, ಮಗ ಅಭಿಜಿತ್‌ನನ್ನು ಕರೆತು ತನಗೆ ಹಳ್ಳಿಯ ಹಲಸು ತಂದುಕೊಡುವಂತೆ ಕೇಳಿದ್ದಾರೆ. ಮನೆಯ ನೆನಪು ಕಾಡುತ್ತಿತ್ತು ಎಂಬಂತೆ ಹಿರಿಯ ರಾಜಕಾರಣಿ ಮಗನ ಬಳಿ ಹಲಸಿನ ಹಣ್ಣು ಕೇಳಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಪರಿಸ್ಥಿತಿ ಗಂಭೀರ

ನಾನು ತಂದೆಗೆ ಹಲಸಿನ ಹಣ್ಣು ತರುವುದಕ್ಕಾಗಿ ಕೊಲ್ಕತ್ತಾದಿಂದ ಪಶ್ಚಿಮ ಬಂಗಾಳದ ಬಿರ್ಭುಂ ಜಿಲ್ಲೆ ನಮ್ಮ ಮಿರಾಟಿ ಗ್ರಾಮಕ್ಕೆ ಹೋದೆ. 25 ಕೆಜಿಯಷ್ಟು ಹಣ್ಣನ್ನು ತೆಗೆದುಕೊಂಡು ಆಗಸ್ಟ್ 3ರಂದು ದೆಹಲಿ ರೈಲು ಹತ್ತಿದ್ದೆ. ತಂದೆ ಹಾಗೂ ನನಗೆ ಇಬ್ಬರಿಗೂ ರೈಲು ಪ್ರಯಾಣ ಎಂದರೆ ಅಚ್ಚುಮೆಚ್ಚು ಎಂದಿದ್ದಾರೆ.

dad asked for jackfruit from village says  Pranab Mukherjee sonಮೆದುಳಿನ ಶಸ್ತ್ರಚಿಕಿತ್ಸೆ ಬಳಿಕ ಚಿಂತಾಜನಕ ಸ್ಥಿತಿಗೆ ತಲುಪಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ದೇಹ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅವರು ಕೋಮಾದಲ್ಲಿ ಇದ್ದಾರೆ ಹಾಗೂ ವೆಂಟಿಲೇಟರ್‌ ಸಹಾಯದಲ್ಲಿದ್ದಾರೆ ಎಂದು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್‌ ಆಸ್ಪತ್ರೆ ಗುರುವಾರ ತಿಳಿಸಿತ್ತು. 

ಪ್ರಣಬ್‌ ಚೇತರಿಕೆಗಾಗಿ 72 ತಾಸುಗಳ ಹೋಮ!

ಈ ನಡುವೆ, ಪ್ರಣಬ್‌ ಅವರು ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಪುತ್ರ ಅಭಿಜಿತ್‌ ಮುಖರ್ಜಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಣಬ್ ಕೊನೆಯುಸಿರೆಳೆದಿದ್ದಾರೆ ಎನ್ನುವ ಪೋಸ್ಟ್‌ಗಳು ಸಾಕಷ್ಟು ವೈರಲ್ ಆಗಿದ್ದವು. ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪ್ರಣಬ್ ಪುತ್ರ ಕಿಡಿಕಾರಿದ್ದರು. ನನ್ನ ತಂದೆ ಜೀವಂತವಾಗಿದ್ದಾರೆ, ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.

ಇದೀಗ ಅವರ ಪುತ್ರಿಯೂ ತಂದೆಯ ಆರೋಗ್ಯದ ಬಗ್ಗೆ ತಿಳಿಸಿದ್ದು, ತಂದೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಈಗ ತಂದೆ ಆರೋಗ್ಯದಲ್ಲಿ ಸಣ್ಣ ಚೇತರಿಕೆ ಇದೆ ಎಂದು ಮಗಳು ಶರ್ಮಿಷ್ಢಾ ಮುಖರ್ಜಿ ತಿಳಿಸಿದ್ದಾರೆ.

Follow Us:
Download App:
  • android
  • ios