Asianet Suvarna News Asianet Suvarna News

Cyrus Mistry Funeral: ಹಿಂದು ಸಂಪ್ರದಾಯದಂತೆ ಟಾಟಾ ಸನ್ಸ್‌ ಮಾಜಿ ಚೇರ್ಮನ್‌ ಅಂತ್ಯಕ್ರಿಯೆ

ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವು ಕಂಡ ಟಾಟಾ ಸನ್ಸ್‌ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ಅವರ ಅಂತ್ಯಕ್ರಿಯೆ ಮುಂಬೈನ ವೊರ್ಲಿ ಚಿತಾಗಾರದಲ್ಲಿ ನೆರವಿದೆ. ಚಿತಾಗಾರಕ್ಕೆ ಯಾರೂ ಕೂಡ ಸಾಂತ್ವನದ ಭೇಟಿ ನೀಡಬಾರದು ಎಂದು ಕುಟುಂಬ ಇದಕ್ಕೂ ಮುನ್ನ ತಿಳಿಸಿತ್ತು. ಇನ್ನು ಅಪಘಾತದಲ್ಲಿ ಮೃತಪಟ್ಟ ಇನ್ನೊಬ್ಬ ವ್ಯಕ್ತಿ 49 ವರ್ಷದ ಜಹಾಂಗೀರ್ ಪಾಂಡೋಲೆ ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಮಲಬಾರ್ ಹಿಲ್‌ನ ದೂಂಗರ್ವಾಡಿ ಟವರ್ಸ್ ಆಫ್ ಸೈಲೆನ್ಸ್‌ನಲ್ಲಿ ಜೊರಾಸ್ಟ್ರಿಯನ್ ಸಂಪ್ರದಾಯದಲ್ಲಿ ನೆರವೇರಲಿದೆ.
 

Cyrus Mistry funeral Parsi rituals continue in Mumbai farewell with Gayatri Mantra and Bhajan san
Author
First Published Sep 6, 2022, 12:52 PM IST

ಮುಂಬೈ (ಸೆ. 6): ಪಾಲ್ಘಾರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವು ಕಂಡ ಟಾಟಾ ಗ್ರೂಪ್‌ನ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ಅವರ ಅಂತ್ಯಕ್ರಿಯೆ ಮುಂಬೈನ ವೊರ್ಲಿ ಚಿತಾಗಾರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದೆ. ಮುಂಬೈನ ವಲ್ಕೇಶ್ವರದಲ್ಲಿರುವ ಸೈರಸ್‌ ಮಿಸ್ತ್ರಿ ಅವರ ಐಷಾರಾಮಿ ನಿವಾಸದಿಂದ ವೊರ್ಲಿ ಚಿತಾಗಾರಕ್ಕೆ ಅವರ ಮೃತದೇಹವನ್ನು ತರಲಾಗಿದೆ. ಇದಕ್ಕೂ ಮುನ್ನ ಅವರ ನಿವಾಸದಲ್ಲಿಯೇ ಪ್ರಾರ್ಥನಾ ಸಭೆಯನ್ನು ಇರಿಸಲಾಗಿತ್ತು. ಈ ವೇಳೆ ಗಾಯತ್ರಿ ಮಂತ್ರ ಹಾಗೂ ಭಜನೆಯನ್ನು ಹಾಕಲಾಗಿತ್ತು. ಪ್ರಾರ್ಥನಾ ಸಭೆಗೆ ಆಕಾಶ್‌ ಅಂಬಾನಿ, ಎಚ್‌ಡಿಎಫ್‌ಸಿ ಚೇರ್ಮನ್‌ ದೀಪಕ್‌ ಪಾರಖ್‌, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಕೂಡ ಆಗಮಿಸಿದ್ದರು. ಅ ಬಳಿಕ ವೊರ್ಲಿ ಚಿತಾಗಾರದಲ್ಲಿ ನಡೆದ ಅಂತ್ಯಸಂಸ್ಕಾರಕ್ಕೂ ಇವರು ಜೊತೆಯಾಗಿದ್ದರು. ಹಿಂದು ಸಂಪ್ರದಾಯದ ಪ್ರಕಾರ ಬೆಳಗ್ಗೆ 11 ಗಂಟೆಗೆ ಶವಸಂಸ್ಕಾರ ನೆರವೇರಿದೆ .ಚಿತಾಗಾರಕ್ಕೆ ಯಾರೂ ಕೂಡ ಸಾಂತ್ವನದ ಭೇಟಿ ನೀಡಬಾರದು ಎಂದು ಕುಟುಂಬ ಇದಕ್ಕೂ ಮುನ್ನ ತಿಳಿಸಿತ್ತು.ರಸ್ತೆ ಅಪಘಾತದಲ್ಲಿ ಮೃತಪಟ್ಟ ಇನ್ನೊಬ್ಬ ವ್ಯಕ್ತಿ 49 ವರ್ಷದ ಜಹಾಂಗೀರ್ ಪಾಂಡೋಲೆ ಅವರ ಅಂತ್ಯಕ್ರಿಯೆ  ಜೊರಾಸ್ಟ್ರಿಯನ್ ಸಂಪ್ರದಾಯದಲ್ಲಿ ನೆರವೇರಲಿದೆ. ಮಂಗಳವಾರ ಸಂಜೆ ಮಲಬಾರ್ ಹಿಲ್‌ನ ದೂಂಗರ್ವಾಡಿ ಟವರ್ಸ್ ಆಫ್ ಸೈಲೆನ್ಸ್‌ನಲ್ಲಿ ಇವರ ಶವಸಂಸ್ಕಾರ ನೆರವೇರಲಿದೆ.

ಭಾನುವಾರ ಮಧ್ಯಾಹ್ನ ಮುಂಬೈ-ಅಹಮದಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸೈರಸ್‌ ಮಿಸ್ತ್ರಿ ಸಾವು ಕಂಡಿದ್ದರು. ಗುಜರಾತ್‌ನ ಉದ್ವಾಡಾದಲ್ಲಿ ತಮ್ಮ ಕುಟುಂಬವೇ ನಿರ್ಮಾಣ ಮಾಡಿದ್ದ ಪಾರ್ಸಿ ದೇವಸ್ಥಾನಕ್ಕೆ ಭೇಟಿ ನೀಡಿ ಅವರು ಮುಂಬೈಗೆ ವಾಪಸಾಗುತ್ತಿದ್ದರು. 54 ವರ್ಷದ ಸೈರಸ್‌ ಮಿಸ್ತ್ರಿ ಅವರ ಮರ್ಸಿಡೀಸ್‌ ಜಿಎಲ್‌ಸಿ 220 ಕಾರು, ಪಾಲ್ಘಾರ್‌ ಜಿಲ್ಲೆಯ ಚರೌಟಿ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಸೈರಸ್‌ ಮಿಸ್ತ್ರಿ ಹಾಗೂ ಅವರ ಸ್ನೇಹಿತ ಜಹಾಂಗೀರ್‌ ಪಾಂಡೋಲೆ ಸ್ಥಳದಲ್ಲಿಯೇ  ಸಾವು ಕಂಡಿದ್ದರು. ಕಾರ್‌  ಚಾಲನೆ ಮಾಡುತ್ತಿದ್ದ ಮಹಿಳಾ ವೈದ್ಯೆ ಅನಯತಾ ಪಾಂಡೋಲೆ ಹಾಗೂ ಆಕೆಯ ಪತಿ ಡೇರಿಯಸ್‌ ಪಾಂಡೋಲೆ ತೀವ್ರವಾಗಿ ಗಾಯಗೊಂಡಿದ್ದಾರೆ. ಡೇರಿಯಸ್‌, ಜೆಎಂ ಫೈನಾನ್ಶಿಯಲ್‌ನ ಸಿಇಒ ಆಗಿದ್ದಾರೆ. 

ಒಂದೂವರೆ ವರ್ಷದ ಹುಡುಕಾಟದ ಬಳಿಕ Tata Sons ಚೇರ್ಮನ್‌ ಆಗಿದ್ದ ಸೈರಸ್‌ ಮಿಸ್ತ್ರಿ, ವಜಾಗೊಂಡಿದ್ದು ಹೇಗೆ?

9 ನಿಮಿಷದಲ್ಲಿ 20ಕಿಲೋಮೀಟರ್‌ ಓಡಿದ್ದ ಸೈರಸ್‌ ಕಾರು: ಅಪಘಾತವಾಗುವ ವೇಳೆ ಸೈರಸ್‌ ಮಿಸ್ತ್ರಿ (Cyrus Mistry ) ಅವರ ಕಾರು ಅಂದಾಜು ಗಂಟೆಗೆ 134 ಕಿಲೋಮೀಟರ್‌ ವೇಗದಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್‌ನ ಕೊನೆಯ ಸಿಸಿಟಿವಿ ದೃಶ್ಯಾವಳಿಯನ್ನೂ ಕೂಡ ಪಡೆಯಲಾಗಿದ್ದು, ಕಾರು ಅತಿವೇಗದಲ್ಲಿತ್ತು ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ 2.21ಕ್ಕೆ ಚರೌಟಿಯಲ್ಲಿ ಚೆಕ್‌ಪೋಸ್ಟ್‌ ದಾಟಿದ್ದ ಸೈರಸ್‌ ಮಿಸ್ತ್ರಿ ಅವರ ಕಾರು, 2.30ರ ವೇಳೆಗೆ 20 ಕಿಲೋಮೀಟರ್‌ ದೂರದಲ್ಲಿನ ಪ್ರದೇಶದಲ್ಲಿ ಅಪಘಾತಕ್ಕೆ ಈಡಾಗಿತ್ತು. ಬರೀ 9 ನಿಮಿಷದಲ್ಲಿಯೇ ಕಾರು 20 ಕಿಲೋಮೀಟರ್‌ ಕ್ರಮಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಪ್ರಕಾರ ಅತಿವೇಗ ಹಾಗೂ ಓವರ್‌ಟೇಕ್‌ ಮಾಡುವ ವೇಳೆ ಆದ ಎಡವಟ್ಟಿನಿಂದ ಕಾರು ರಸ್ತೆ ವಿಭಜಕಕ್ಕೆ ಬಡಿದಿದೆ. ಮಿಸ್ತ್ರಿ ಹಾಗೂ ಜಹಾಂಗೀರ್‌ ಹಿಂದಿನ ಸೀಟ್‌ನಲ್ಲಿದ್ದರು ಹಾಗೂ ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ.  ಅಪಘಾತವೀಡಾದ ಬಳಿಕ, ಮುಂಭಾಗದ ಏರ್‌ಬ್ಯಾಗ್‌ಗಳು ಓಪನ್‌ ಆಗಿವೆ. ಆದರೆ, ಹಿಂಬದಿಯ ಏರ್‌ಬ್ಯಾಗ್‌ ಸರಿಯಾದ ಸಮಯದಲ್ಲಿ ಓಪನ್‌ ಆಗಿರಲಿಲ್ಲ. ಇದು ಸಾವಿಗೆ ಕಾರಣವಾಗಿದೆ.

Cyrus Mistry Death ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಚೇರ್ಮನ್‌ ಸಾವು!

ನಿಯೋಲ್‌ ಟಾಟಾ ತಾಯಿಯಿಂದ ಅಂತಿಮ ದರ್ಶನ: ರತನ್‌ ಟಾಟಾ ಅವರ ಮಲತಾಯಿ ಹಾಗೂ ನಿಯೋಲ್‌ ಟಾಟಾ ( Noel Tata) ಅವರ ತಾಯಿ ಸಿಮೋನ್‌ ಟಾಟಾ (Simone Tata), ಸೈರಸ್‌ ಮಿಸ್ತ್ರಿ (Cyrus Mistry funeral ) ಅವರ ಅಂತಿಮ ದರ್ಶನ ಪಡೆದರು. ವೀಲ್ ಚೇರ್‌ನಲ್ಲಿ ಅವರು ಸ್ಥಳಕ್ಕೆ ಆಗಮಿಸಿದ್ದರು. ಅದರೊಂದಿಗೆ ಅನಿಲ್‌ ಅಂಬಾನಿ, ಆಕಾಶ್‌ ಅಂಬಾನಿ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. 

Follow Us:
Download App:
  • android
  • ios