ಇಂದು ಗುಜರಾತ್‌ ಕರಾವಳಿಗೆ ಶಹೀನ್‌ ಚಂಡಮಾರುತ!

* ಪ್ರಬಲ ಚಂಡಮಾರುತವು ಪಾಕಿಸ್ತಾನ ಕರಾವಳಿಯತ್ತ ಪಯಣ

* ಇಂದು ಗುಜರಾತ್‌ ಕರಾವಳಿಗೆ ಶಹೀನ್‌ ಚಂಡಮಾರುತ

* ಗುಜರಾತ್‌, ದೀಯು ದಮನ್‌ ಸೇರಿ ಇನ್ನಿತರ ಸ್ಥಳಗಳಲ್ಲಿ ಮಳೆ

Cyclone Shaheen to emerge off Gujarat coast by Friday morning headed to Pakistan pod

ನವದೆಹಲಿ/ಅಹಮದಾಬಾದ್‌(ಸೆ.30): ಒಡಿಶಾ(Odisha) ಮತ್ತು ಆಂಧ್ರಪ್ರದೇಶ(Andhra Pradesh) ರಾಜ್ಯಗಳನ್ನು ಬಾಧಿಸಿರುವ ಗುಲಾಬ್‌ ಚಂಡಮಾರುತವು(Gulab Cyclone) ಸೆ.30ರಂದು ಅರಬ್ಬೀ ಸಮುದ್ರವನ್ನು ಪ್ರವೇಶಿಸಲಿದ್ದು, ಆ ಬಳಿಕ ಪ್ರಬಲ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ.

ಈ ಚಂಡಮಾರುತಕ್ಕೆ ಶಹೀನ್‌(Cyclone Shaheen) ಎಂದು ಹೆಸರಿಡಲಾಗಿದ್ದು, ಅದು ಗುಜರಾತ್‌ ಕರಾವಳಿಯಯಿಂದ ಪಾಕಿಸ್ತಾನದತ್ತ ಚಲಿಸಲಿದೆ. ಹೀಗಾಗಿ ಭಾರತದಲ್ಲಿ ಹೊಸ ಚಂಡಮಾರುತದಿಂದ ಯಾವುದೇ ಅಪಾಯ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಹೇಳಿದೆ.

ಪಶ್ಚಿಮ-ವಾಯುವ್ಯ ದಿಕ್ಕಿನೆಡೆಗೆ ಚಲಿಸಬಹುದಾದ ಗುಲಾಬ್‌ ಈಶಾನ್ಯ ಅರಬ್ಬೀ ಸಮುದ್ರದಲ್ಲಿ ದುರ್ಬಲಗೊಳ್ಳಲಿದೆ. ಆದರೆ ಮುಂದಿನ 24 ಗಂಟೆಗಳಲ್ಲಿ ಅರಬ್ಬೀ ಸಮುದ್ರದಲ್ಲಿ ಪ್ರಬಲ ಚಂಡಮಾರುತವಾಗಿ ರೂಪುಗೊಂಡು ಪಶ್ಚಿಮ-ವಾಯುವ್ಯ ದಿಕ್ಕಿನೆಡೆಗೆ ಅಂದರೆ ಪಾಕಿಸ್ತಾನದ ಮ್ಯಾಕ್ರಾನ್‌ ಕರಾವಳಿಗಳತ್ತ ತೆರಳಲಿದೆ ಎಂದು ಐಎಂಡಿ(IMD) ಹೇಳಿದೆ.

ಇದಕ್ಕೂ ಮುನ್ನ ಈ ಚಂಡಮಾರುತವು ಭಾರತದ ಗುಜರಾತ್‌ ಪ್ರಾಂತ್ಯ, ದೀಯು-ದಮನ್‌ ಮತ್ತು ನಗರಹವೇಲಿ, ಉತ್ತರ ಕೊಂಕಣ್‌ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಸುವ ಸಾಧ್ಯತೆಯಿದೆ.

ಎಚ್ಚರಿಕೆ: ಶಹೀನ್‌ ಚಂಡಮಾರುತದಿಂದ ಗುಜರಾತ್‌ನ ಕಡಿಮೆ ಒತ್ತಡದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅ.2ರವರೆಗೆ ಮೀನುಗಾರರು ಅರಬ್ಬೀ ಸಮುದ್ರಕ್ಕೆ ಇಳಿಯದಂತೆ ಮತ್ತು ಅಲ್ಲಿಯವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ಕೈಬಿಡುವಂತೆ ಐಎಂಡಿ ಸೂಚಿಸಿದೆ.

Latest Videos
Follow Us:
Download App:
  • android
  • ios