ನವದೆಹಲಿ (ನ. 09): ಭಾರತದ ಪೂರ್ವ ಕರಾವಳಿಯಲ್ಲಿ ಆತಂಕ ಸೃಷ್ಟಿಸಿರುವ ‘ಬುಲ್ ಬುಲ್’ ಚಂಡಮಾರುತ ಶನಿವಾರ ಪಶ್ಚಿಮ ಬಂಗಾಳ ಹಾಗೂ ಒಡಿ ಶಾಗೆ ಅಪ್ಪಳಿಸಲಿದೆ. ಶುಕ್ರವಾರ ದಿಂದಲೇ ಎರಡೂ ರಾಜ್ಯಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾ ಗುತ್ತಿದ್ದು, ಶನಿವಾರ 135 ಕಿ.ಮಿ ವೇಗದ ಗಾಳಿ ಜತೆ ಭಾರಿ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಕೋಲ್ಕತ್ತಾ ವಿಮಾನ ನಿಲ್ದಾಣವನ್ನು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ.

 

ಒಡಿಶಾ ಪರದೀಪ್ ನಿಂದ ದಕ್ಷಿಣ-ಆಗ್ನೇಯಕ್ಕೆ 310 ಕಿ.ಮಿ ದೂರದಲ್ಲಿ ಪಶ್ಚಿಮ ಮತ್ತು ಪಕ್ಕದ ಪೂರ್ವಕೇಂದ್ರದ ಮೇಲೆ ಕೇಂದ್ರೀಕೃತ ವಾಗಿರುವ ಚಂಡ ಮಾರುತ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ ಕರಾವಳಿ ಕಡೆಗೆ ಸಾಗಲಿದೆ. ಶುಕ್ರವಾರ ಗಂಟೆಗೆ 13 ಕಿ.ಮಿ ವೇಗದಲ್ಲಿ ಚಲಿಸುತ್ತಿದ್ದ ಬುಲ್ ಬುಲ್ ಶನಿವಾರ ಏಕಾಏಕಿ ತೀವ್ರತೆ ಪಡೆದುಕೊಳ್ಳಲಿದ್ದು, 110 ರಿಂದ 135  ಕಿ.ಮಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಮುಂದಿನ ಎರಡು ದಿನಗಳಲ್ಲಿ ಕರಾವಳಿ ಹಾಗೂ ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಭಾನು ವಾರ ಬಾಂಗ್ಲಾದೇಶ ಕರಾವಳಿ ಕಡೆಗೆ ಚಲಿಸಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಸೈಕ್ಲೋನ್ ಎದುರಿಸಲು ಸರ್ವ ಸಜ್ಜಾಗಿರುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶುಕ್ರವಾರದಿಂದಲೇ ಮೀನುಗಾರಿಕೆಗೆ ನಿಷೇಧ ಹೇರಲಾಗಿದ್ದು, ಬೆಳೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಿ ಎಂದು ರೈತರಿಗೆ ಸೂಚಿಸಲಾಗಿದೆ. ಸೇನಾ ಪಡೆ, ವಾಯು ಪಡೆ, ಕೋಸ್ಟ್ ಗಾರ್ಡ್ ಹಾಗೂ ನೌಕಾ ಪಡೆಗೆ ಸಜ್ಜಾಗಿರುವಂತೆ ಅದೇಶ ನೀಡಲಾಗಿದೆ.

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ