ಕೊಲ್ಕತಾ (ನ. 08): ಇತ್ತ ಅರಬೀಸಮುದ್ರದಲ್ಲಿ ಎದ್ದಿದ್ದ ಮಹಾ ಚಂಡಮಾರುತ ತಣ್ಣಗಾಯಿತು ಎನ್ನುವಾಗಲೇ ಅತ್ತ ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು, ಅದು ಮುಂದಿನ ಎರಡು ದಿನಗಳಲ್ಲಿ ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಚಂಡಮಾರುತ ಪ್ರಭಾವ: ಮತ್ತೆ ಮೂರು ದಿನ ರಾಜ್ಯದಲ್ಲಿ ಮಳೆ

ಬುಲ್ ಬುಲ್ ಎಂದು ಹೆಸರಿಡಲಾಗಿರುವ ಈ ಚಂಡಮಾರುತ ಈ ವರ್ಷ ಭಾರತದ ಕರಾವಳಿ ತೀರಗಳ ಮೇಲೆ ಅಪ್ಪಳಿಸುತ್ತಿರುವ 7 ನೇ ಚಂಡಮಾರುತವಾಗಲಿದೆ. ಗುರುವಾರ ಮಧ್ಯರಾತ್ರಿ ಆಗ್ನೇಯ ಕೋಲ್ಕತಾಗೆ ಚಂಡ ಮಾರುತ ಅಪ್ಪಳಿಸಿದ್ದು, ಶನಿವಾರ ಸಂಜೆ ವೇಳೆಗೆ ಇನ್ನಷ್ಟು ತೀವ್ರಗೊಳ್ಳಲಿದೆ.

2 ನೇ ಟಿ 20 ಪಂದ್ಯದ ಹವಾಮಾನ ವರದಿ; ರೋಹಿತ್ ಸೈನ್ಯಕ್ಕೆ ಸೈಕ್ಲೋನ್ ಭೀತಿ!

ಬಳಿಕ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಬಾಂಗ್ಲಾ ಕರಾವಳಿ ಕಡೆಗೆ ಚಲಿಸಲಿದೆ. ಗಂಟೆಗೆ 70-80 ಕಿ.ಮಿ ವೇಗದಲ್ಲಿ ಚಂಡ ಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಭೀಕರ ಎಂದು ಪರಿಗಣಿಸಿ ದ್ದರಿಂದ 140 ಕಿ.ಮಿ ವೇಗದಲ್ಲಿ ಬಂದರೂ ಅಚ್ಚರಿಯಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಈ ವರ್ಷದ ಇದುವರೆಗೆ ಪಬುಕ್, ಫನಿ, ವಾಯು, ಹಿಕ್ಕಾ, ಕ್ಯಾರ್ ಹಾಗೂ ಮಹಾ ಚಂಡಮಾರುತಗಳು ಭಾರತದ ಕರಾವಳಿಗೆ ಅಪ್ಪಳಿಸಿವೆ.