Asianet Suvarna News Asianet Suvarna News

370ನೇ ವಿಧಿ ರದ್ದತಿಗೆ ಒಂದು ವರ್ಷ: ಕಣಿವೆ ನಾಡಿನಲ್ಲಿ ಬಿಗಿ ಭದ್ರತೆ!

370ನೇ ವಿಧಿ ರದ್ದತಿಗೆ ನಾಳೆಗೆ ಒಂದು ವರ್ಷ| ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಭಾರೀ ಬಿಗಿ ಬಂದೋಬಸ್ತ್|  ಭದ್ರತಾ ಕ್ರಮಗಳ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ಮತ್ತು ಸೇನಾಧಿಕಾರಿಗಳ ಜೊತೆ ಸೋಮವಾರ ಮಹತ್ವದ ಸಭೆ

Curfew In Kashmir A Year After Union Territory Move Article 370 Scrapped
Author
Bangalore, First Published Aug 4, 2020, 5:35 PM IST

ಶ್ರೀನಗರ(ಆ.04): ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಾಂವಿಧಾನಿಕ 370ನೇ ವಿಧಿ ರದ್ದತಿಗೆ ಬುಧವಾರ 1 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ನೂತನ ಕೇಂದ್ರಾಡಳಿತ ಪ್ರದೇಶಗಳಾಗಿ ರೂಪುಗೊಂಡಿರುವ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಭಾರೀ ಬಿಗಿ ಬಂದೋಬಸ್‌್ತ ಆಯೋಜಿಸಲಾಗಿದೆ.

ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ; 370 ರದ್ದಾದ ಬಳಿಕ ಇದೇ ಮೊದಲು!

ಜೊತೆಗೆ ಭದ್ರತಾ ಕ್ರಮಗಳ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ಮತ್ತು ಸೇನಾಧಿಕಾರಿಗಳ ಜೊತೆ ಸೋಮವಾರ ಮಹತ್ವದ ಸಭೆ ನಡೆದಿದೆ. ಚಿನಾರ್‌ ಕಾಫ್ಸ್‌ರ್‍ ಲೆಫ್ಟಿನೆಂಟ್‌ ಜನರಲ್‌ ರಾಜು ಹಾಗೂ ಜಮ್ಮು-ಕಾಶ್ಮೀರ ಡಿಜಿಪಿ ನೇತೃತ್ವದಲ್ಲಿ ಮಹತ್ವದ ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಗುಪ್ತಚರ ಸಂಸ್ಥೆ ಹಾಗೂ ಭದ್ರತಾ ಪಡೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ; ಆರೋಪಗಳಿಗೆ CRPF ಪ್ರತಿಕ್ರಿಯೆ!

ಕೊರೋನಾ ಆರ್ಭಟದ ನಡುವೆಯೇ ಏನೆಲ್ಲಾ ಭದ್ರತಾ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತಾಗಿ ಚರ್ಚಿಸಲಾಯಿತು ಎಂಬುದನ್ನು ಹೊರತುಪಡಿಸಿ, ಉಳಿದ ಯಾವುದೇ ಮಾಹಿತಿ ಬಹಿರಂಗಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಕಳೆದ ವರ್ಷದ ಆಗಸ್ಟ್‌ 5ರಂದು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದುಗೊಳಿಸಿತ್ತು.

Follow Us:
Download App:
  • android
  • ios