ಕಾಶ್ಮೀರ(ಆ.04): ಆಗಸ್ಟ್ 5 ರಂದು ರಾಮ ಮಂದಿರ ಭೂಮಿ ಪೂಜೆ ಕಾರಣ ದೇಶದ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಇತ್ತ ಆಗಸ್ಟ್ 4 ಮತ್ತು ಆಗಸ್ಟ್ 5 ರಂದು ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ಜಾರಿಯಾಗುತ್ತಿದೆ. ಆದರೆ ಇದು ರಾಮ ಮಂದಿರದ ಭೂಮಿ ಪೂಜೆಗೆ ಹೇರಲಾಗುತ್ತಿರುವ ಕರ್ಫ್ಯೂ ಅಲ್ಲ. ಕೆಲ ಪಾಕಿಸ್ತಾನಿ ಪೋಷಿತ ಗುಂಪುಗಳು ಆರ್ಟಿಕಲ್ 370 ರದ್ದು ಮಾಡಿದ ದಿನವನ್ನು ಬ್ಲಾಕ್ ಡೇ ಎಂದು ಆಚರಿಸುತ್ತಿದೆ. ಇದಕ್ಕಾಗಿ ಆಗಸ್ಟ್ 4 ಮತ್ತು 5 ರಂದು ಕರ್ಫ್ಯೂ ಹೇರಲಾಗುತ್ತಿದೆ. 

ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ; ಉಗ್ರಗಾಮಿಗಳಿಂದ ಕಿಡ್ನಾಪ್?

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿ ಇದೀಗ ಒಂದು ವರ್ಷವಾಗುತ್ತಿದೆ. 2019ರ ಆಗಸ್ಟ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು. ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ಹಿಂಪಡೆಯಲಾಯಿತು. ಇಷ್ಟೇ ಅಲ್ಲ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಯಿತು.  ಕಳೆದೊಂದು ವರ್ಷದಲ್ಲಿ ಜಮ್ಮ ಮತ್ತು ಕಾಶ್ಮೀರ ಶಾಂತವಾಗಿದೆ. ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಭಾರತೀಯ ಸೇನೆ ಉಗ್ರರ ಹೆಡೆಮುರಿ ಕಟ್ಟುತ್ತಿದೆ. ಕಳೆದೊಂದು ವರ್ಷದಿಂದ ಕರ್ಫ್ಯೂ ಮರೆತಿದ್ದ ಕಾಶ್ಮೀರ ನಿವಾಸಿಗಳಿಗೆ ಇದೀಗ ಮತ್ತೆ ಕಾಶ್ಮೀರದಲ್ಲಿ ಕರ್ಫ್ಯೂ ಶಬ್ದ ಕೇಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರಕ್ಕೆ ಈ ಗುಂಪು ತಯಾರಿ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಆಗಸ್ಟ್ 5 ರಂದು ಬ್ಲಾಕ್ ಡೇ ಆಚರಿಸಲಾಗುತ್ತಿದೆ. ಹೀಗಾಗಿ  ಜಮ್ಮ ಮತ್ತು ಕಾಶ್ಮೀರದಲ್ಲಿ ಮತ್ತೆ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಲು ಕರ್ಫ್ಯೂ ಜಾರಿ ಮಾಡಲಾಗುತ್ತಿದೆ.

ಕೊರೋನಾ ವೈರಸ್ ಕಾರಣ ಅಗತ್ಯ ವಸ್ತು ಖರೀದಿ, ತುರ್ತು ಸೇವೆ, ಆರೋಗ್ಯ ಸೇವೆ ಸೇರಿದಂತೆ ಕೆಲ ಸೇವೆಗಳು ಲಭ್ಯವಿರಲಿದೆ. ಇತರ ಸೇವೆಗಳು ಬಂದ್ ಆಗಲಿವೆ.