Asianet Suvarna News Asianet Suvarna News

Good Gesture: ಹುತಾತ್ಮ ಯೋಧನ ತಂಗಿ ಮದುವೆಗೆ ಬಂದು ಅಣ್ಣನ ಜವಾಬ್ದಾರಿ ನಿರ್ವಹಿಸಿದ CRPF ಜವಾನರು

  • ಹುತಾತ್ಮ ಯೋಧನ ತಂಗಿ ಮದುವೆಗೆ ಬಂದ CRPF ಯೋಧರು
  • ಅಣ್ಣನ  ಜವಾಬ್ದಾರಿ ನಿರ್ವಹಿಸಿದ ಸೈನಿಕರು
  • ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಉತ್ತರಪ್ರದೇಶದ ರಾಯ್‌ ಬರೇಲಿ 
CRPF jawans went slain soldiers home for sisters wedding perform brothers duties in UP akb
Author
Bangalore, First Published Dec 15, 2021, 12:13 PM IST

ಉತ್ತರಪ್ರದೇಶ(ಡಿ.15): ಸಿಆರ್‌ಪಿಎಫ್ ಯೋಧರು(CRPF jawans) ಹುತಾತ್ಮ ಯೋಧನ ಮನೆಗೆ ಬಂಧು ಆತನ ಸಹೋದರಿಯ ಮದುವೆಯಲ್ಲಿ ಭಾಗಿಯಾಗಿ ಸಹೋದರನ ಕರ್ತವ್ಯ ನಿರ್ವಹಿಸಿದ ಭಾವುಕ ಘಟನೆ ಉತ್ತರಪ್ರದೇಶದ ರಾಯ್‌ ಬರೇಲಿಯಲ್ಲಿ ನಡೆದಿದೆ. ಹುತಾತ್ಮನಾದ ತಮ್ಮ ಸಹೋದ್ಯೋಗಿ ಕಾನ್‌ಸ್ಟೆಬಲ್ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಗೌರವಾರ್ಥವಾಗಿ, ಹಲವಾರು ಸಿಆರ್‌ಪಿಎಫ್ ಜವಾನರು ಉತ್ತರ ಪ್ರದೇಶ(Uttar Pradesh)ದ ರಾಯ್ ಬರೇಲಿ(Rae Bareli)ಗೆ ಬಂದು ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿ ಜ್ಯೋತಿಯ ವಿವಾಹದಲ್ಲಿ ಭಾಗವಹಿಸಿದರು. ಸಹೋದರಿಯ ಮದುವೆಯಲ್ಲಿ ಸಹೋದರ ನಡೆಸಿಕೊಡಬೇಕಾದ ಎಲ್ಲಾ ಜವಾಬ್ದಾರಿ ಎಲ್ಲಾಸಂಪ್ರದಾಯಗಳನ್ನು ಅವರು ಮಾಡಿದರು.

ಈ ಸಿಆರ್‌ಪಿಎಫ್ ಯೋಧರು ಡಿಸೆಂಬರ್ 13 ರಂದು ಉತ್ತರ ಪ್ರದೇಶದ ರಾಯ್ ಬರೇಲಿಗೆ ಅವರ ಸಹೋದರಿ ಜ್ಯೋತಿಯ ವಿವಾಹದಲ್ಲಿ ಭಾಗವಹಿಸಲು ಪ್ರಯಾಣಿಸಿದರು. 2020 ರ ಅಕ್ಟೋಬರ್‌ನಲ್ಲಿ ಕಾಶ್ಮೀರದ ಪುಲ್ವಾಮಾ( Pulwama)ದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕಾನ್‌ಸ್ಟೆಬಲ್ ಶೈಲೇಂದ್ರ ಪ್ರತಾಪ್ ಸಿಂಗ್ ಹುತಾತ್ಮರಾಗಿದ್ದರು. 

ಮಗನ ಹುಟ್ಟುಹಬ್ಬಕ್ಕೆ ಮನೆಗೆ ಬರುತ್ತೇನೆ ಎಂದಿದ್ದರು : ಹುತಾತ್ಮ ಯೋಧನ ಪತ್ನಿಯ ಅಳಲು!

ಯೋಧರು ಈ ಹಿಂದೆಯೂ ಹಲವು ಅನಾಹುತಗಳ ಸಂದರ್ಭದಲ್ಲಿ ಮಾನವೀಯ ಕಾರ್ಯ ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.  ಜಮ್ಮು ಕಾಶ್ಮೀರದಲ್ಲಿ ಹಿಂದೊಮ್ಮೆ ಹಿಮಪಾತವಾಗಿದ್ದಾಗ ಇಲ್ಲಿನ ರಸ್ತೆಗಳೆಲ್ಲಾ ಹಿಮದಿಂದ ಮುಚ್ಚಲ್ಪಟ್ಟಿದ್ದವು. ಇಂತಹ ಸನ್ನಿವೇಶದಲ್ಲಿ ತುಂಬು ಗರ್ಭಿಣಿಯೊಬ್ಬರನ್ನು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಪಡೆಯ ಯೋಧರು ಮತ್ತು ನಾಗರಿಕರು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.  ನಮ್ಮ ಯೋಧರ ಈ ಮಾನವೀಯ ಕಾರ್ಯಕ್ಕೆ ದೇಶವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು. 

ಶಮೀಮಾ(Shamima) ಎಂಬ ತುಂಬು ಗರ್ಭಿಣಿಯನ್ನು ಸುಮಾರು 30 ಜನ ಸ್ಥಳೀಯರ ನೆರವಿನಿಂದ ಸ್ಟ್ರೆಚರ್ ಮೂಲಕ ಹೊತ್ತೊಯ್ದ ಭಾರತೀಯ ಸೇನೆಯ ನೂರು ಜನ ಯೋಧರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಶಮೀಮಾ ಅವರು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ಸೇನೆ ತನ್ನ ಟ್ವಿಟ್ಟರ್ ಅಕೌಂಟ್‌(twitter account)ನಲ್ಲಿ ಹಾಕಿತ್ತು. 

IAF Helicopter Crash: ದುರಂತದಲ್ಲಿ ಮಡಿದ ಯೋಧ ಪೃಥ್ವಿ ಸಿಂಗ್‌ ಪುತ್ರಿಗೆ ವಾಯುಸೇನೆ ಸೇರುವಾಸೆ

ಇನ್ನೂ ವಿಶೇಷವೆಂದರೆ ಭಾರತೀಯ ಸೇನೆಯು ತನ್ನ 72ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ದಿನದಂದೇ ಈ ಘಟನೆ ವರದಿಯಾಗಿತ್ತು.0.31 ಸೆಕೆಂಡಿನ ಈ ವಿಡಿಯೋವನ್ನು ರಿಟ್ವೀಟ್ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಯೋಧರ ಮಾನವೀಯ ಕಾರ್ಯವನ್ನು ವಿಶೇಷವಾಗಿ ಪ್ರಶಂಸಿಸಿದ್ದರು. 

 

ಸೋಮವಾರದಂದು ನಡೆದ ಮದುವೆಗೆ ಅಚ್ಚರಿ ಎಂಬಂತೆ ಸೇನಾ ಸಮವಸ್ತ್ರ ಧರಿಸಿ ಬಂದ ಯೋಧರು ಜ್ಯೋತಿ (Jyoti) ಅವರ ಸಹೋದರ ಮಾಡುವ ಎಲ್ಲ ವಿಧಿ ವಿಧಾನಗಳನ್ನು ನೆರವೇರಿಸಿದರು. ಅಲ್ಲದೇ ಆಕೆಗೆ ಆಶೀರ್ವದಿಸಿ ಉಡುಗೊರೆಗಳನ್ನು ನೀಡಿದರು. ಮತ್ತು ಅವಳು ಮಂಟಪಕ್ಕೆ ಹೋಗುವಾಗ ಅವಳಿಗೆ ಮುಸುಕು ಹಾಕಿ ಕರೆದುಕೊಂಡು ಹೋದರು. ಸಿಆರ್‌ಪಿಎಫ್ ಯೋಧರ ಉಪಸ್ಥಿತಿಯು ಮದುವೆಯಲ್ಲಿ ಎಲ್ಲರನ್ನು ಭಾವುಕರನ್ನಾಗಿಸಿತು. ಸಹೋದರರ ಪಾತ್ರವನ್ನು ನಿರ್ವಹಿಸುವಾಗ, ಯೋಧರು ಹುತಾತ್ಮ ಶೈಲೇಂದ್ರ ಸ್ಥಾನ ತುಂಬಲು ಪ್ರಯತ್ನಿಸಿದರು ಎಂದು ಸಿಆರ್‌ಪಿಎಫ್‌ ಯೋಧರ ಈ ಕಾರ್ಯದ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಈ ವೇಳೆ ಭಾವುಕರಾದ ಶೈಲೇಂದ್ರ ಪ್ರತಾಪ್ ಸಿಂಗ್(Shailendra Pratap Singh) ಅವರ ತಂದೆ, ನನ್ನ ಮಗ ಈ ಜಗತ್ತಿನಲ್ಲಿ ಇಲ್ಲ. ಆದರೆ ಈಗ ನಮಗೆ ಸಿಆರ್‌ಪಿಎಫ್ ಸೈನಿಕರ ರೂಪದಲ್ಲಿ ಅನೇಕ ಪುತ್ರರು ಇದ್ದಾರೆ, ಅವರು ಯಾವಾಗಲೂ ಸಂತೋಷ ಮತ್ತು ದುಃಖದ ಸಮಯದಲ್ಲಿ ನಮ್ಮೊಂದಿಗೆ ನಿಲ್ಲುತ್ತಾರೆ ಎಂದು ಹೇಳಿದರು. 
 

Follow Us:
Download App:
  • android
  • ios