ಬೋಸ್ಟನ್‌[ಅ.10]: ಮಧುಮೇಹಿಗಳು ನಿತ್ಯವೂ ಇನ್ಸುಲಿನ್‌ ಇಂಜೆಕ್ಷನ್‌ ಪಡೆಯುವುದು ಅತ್ಯಂತ ನೋವಿನ ಕೆಲಸ. ಇದೇ ರೀತಿಯಲ್ಲಿ ಹಲವು ವ್ಯಾಧಿಗಳಿಗೆ ಇಂಜೆಕ್ಷನ್‌ ಸ್ವರೂಪದಲ್ಲೇ ಔಷಧಿ ಸೇವಿಸುವುದು ಅನಿವಾರ್ಯ. ಆದರೆ ಇಂಜೆಕ್ಷನ್‌ ಮೂಲಕ ಮಾತ್ರ ಪಡೆಯಬಹುದಾಗಿದ್ದ ಔಷಧಗಳನ್ನು, ಮಾತ್ರೆಯ ರೂಪದಲ್ಲೂ ಸೇವಿಸಬಹುದಾದ ಮಹತ್ವವಾದ ಸಂಶೋಧನೆಯನ್ನು ಸ್ಥಳೀಯ ವಿಜ್ಞಾನಿಗಳು ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ಸುಲಿನ್‌ ಔಷಧಿಯನ್ನು ಇಂಜೆಕ್ಷನ್‌ ಬದಲು ಮಾತ್ರೆಯ ರೂಪದಲ್ಲೇ ಸೇವಿಸಬಹುದು.

ಶತಾವರಿ ಎಂಬ ಔಷಧೀಯ ಸಸ್ಯ ಮಧುಮೇಹಕ್ಕೂ ಮದ್ದು

ಸಾಮಾನ್ಯವಾಗಿ ಪ್ರೋಟಿನ್‌ ಅನ್ನು ಒಳಗೊಂಡ ಔಷಧಗಳನ್ನು ಮಾತ್ರೆಗಳ ಮೂಲಕ ನೀಡುತ್ತಿರಲಿಲ್ಲ. ಒಂದು ವೇಳೆ ಹೀಗೆ ನೀಡಿದ್ದೇ ಆದಲ್ಲಿ, ಪೋಟ್ರಿನ್‌ ಒಳಗೊಂಡ ಮಾತ್ರೆಗಳು ತಮ್ಮ ಕೆಲಸ ಆರಂಭಕ್ಕೂ ಮುನ್ನವೇ ಮನುಷ್ಯನ ದೇಹದ ಜಠರದ ಭಾಗದಲ್ಲಿ ತುಂಡಾಗುತ್ತಿದ್ದವು ಎಂದು ಜರ್ನಲ್‌ ನೇಚರ್‌ ಮೆಡಿಸಿನ್‌ ಎಂಬ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಆದರೆ, ಮನುಷ್ಯನ ದೇಹದ ಜಠರದ ಭಾಗದಲ್ಲಿ ಎಂಥ ಪರಿಸ್ಥಿತಿ ಬಂದರೂ, ಔಷಧೀಯ ಗುಣಗಳನ್ನು ಹೊಂದಿದ ಮಾತ್ರೆಗಳಿಗೆ ಯಾವುದೇ ರೀತಿಯ ಹಾನಿಯಾಗದ ರೀತಿಯ ಕ್ಯಾಪ್ಸೂಲ್‌ಗಳನ್ನು ಡೆನ್ಮಾರ್ಕ್ ರಾಷ್ಟ್ರದ ಔಷಧ ತಯಾರಿಕಾ ಸಂಸ್ಥೆ ನಾವೋ ನಾರ್ಡಿಸ್ಕ್‌ ಜೊತೆಗೂಡಿ ಮೆಸಾಚ್ಯುಸೆಟ್ಸ್‌ ತಂತ್ರಜ್ಞಾನ ಸಂಸ್ಥೆ(ಎಂಐಟಿ)ಯ ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ. ಜಠರವನ್ನು ದಾಟಿ ಸಣ್ಣ ಕರುಳಿಗೆ ತಲುಪಿದಾಗ, ಈ ಮಾತ್ರೆಗಳು ತುಂಡಾಗುತ್ತವೆ. ಆ ಬಳಿಕ ದೇಹದಲ್ಲಿ ಪರಿಚಲನೆಯಾಗುವ ರಕ್ತದ ಜೊತೆಗೂಡಿ ದೇಹದ ಪ್ರತಿಯೊಂದು ಭಾಗಕ್ಕೂ ಈ ಔಷಧ ತಲುಪುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.

ಗರ್ಭನಿರೋಧಕ ಮಾತ್ರೆ ಕೆಲವೊಮ್ಮೆ ತರುತ್ತೆ ಕುತ್ತು