ಲಖನೌ(ಜೂ.11):  ಕೊರೋನಾ ಲಸಿಕೆ ಅದೆಷ್ಟು ಮುಖ್ಯ ಅನ್ನೋದು 2ನೇ ಅಲೆಯಿಂದ ಮನದಟ್ಟಾಗಿದೆ. ಹೀಗಾಗಿ ಲಸಿಕೆಗೆ ತೀವ್ರ ಬೇಡಿಕೆ ಇದೆ. ಆದರೆ ಇನ್ನೂ ಹಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಘಟನೆ ವರದಿಯಾಗುತ್ತಲೇ ಇದೆ. ಗ್ರಾಮಸ್ಥರಿಂದ ಬಹಿಷ್ಕಾರ, ಲಸಿಕೆಯಿಂದ ಪ್ರಯೋಜನವಿಲ್ಲ, ಲಸಿಕೆಯಿಂದ ಸಾವು ಸೇರಿದಂತೆ ಹಲವು ಸುಳ್ಳು ಪ್ರಚಾರ ನಡೆಯುತ್ತಲೇ ಇದೆ. ಇನ್ನು ಹಲವರು ಭಯದಿಂದಲೇ ಲಸಿಕೆ ಹಾಕಿಸಿಕೊಂಡಿಲ್ಲ. ಇಂತವರಿಗೆಲ್ಲಾ ಕಾಶಿ ಶ್ರೀ ಸ್ವಾಮಿ ಶಿವಾನಂದ ಬಾಬಾ ಮಾದರಿಯಾಗಿದ್ದಾರೆ.

ನರ್ಸ್‌ಗೆ ನಾಚ್ಕೊಂಡ್ರಾ ಅಥವಾ ಇಂಜೆಕ್ಷನ್‌ಗೆ ಭಯನಾ; ಪ್ರಶಾಂತ್ ನೀಲ್ ಟ್ರೋಲ್

125 ವರ್ಷದ ಸ್ವಾಮೀಜಿ ಲಖನೌದ ದುರ್ಘಾಕುಂದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಲಸಿಕೆ ಪಡೆವರ ಪೈಕಿ ಶಿವಾನಂದ ಬಾಬಾ ಅತ್ಯಂತ ಹಿರಿಯ ವ್ಯಕ್ತಿ ಎಂದು ಆರೋಗ್ಯ ಇಲಾಖೆ ಹೇಳಿದೆ. ಬಾಬಾ ಎಲ್ಲರಿಗೂ ಮಾದರಿ ಎಂದು ಲಖನೌ ಆರೋಗ್ಯ ಇಲಾಖೆ ಹೇಳಿದೆ.

 

ಶಿವಾನಂದ ಬಾಬಾ ಬಳಿ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಕೂಡ ಇವೆ. ಈ ದಾಖಲೆಗಳಲ್ಲಿ ಬಾಬಾ ವಯಸ್ಸು 125. ಕೆಲ ವರ್ಷಗಳ ಹಿಂದೆ ಕೋಲ್ಕತಾ ವೈದ್ಯರು ಬಾಬಾ ಶಿವಾನಂದ ಸ್ವಾಮೀಜಿ ಆರೋಗ್ಯ ಪರಿಶೀಲಿಸಿ ದಂಗಾದಿದ್ದರು. ಇಳಿ ವಯಸ್ಸಿನಲ್ಲೂ ಬಾಬಾ ಫಿಟ್ ಆಗಿದ್ದರು. ಯುವಕರನ್ನು ನಾಚಿಸುವ ಆರೋಗ್ಯ ಹೊಂದಿದ್ದರು. ಈ ಕುರಿತು ಕೋಲ್ಕತಾ ವೈದ್ಯರು ವರದಿ ನೀಡಿದ್ದರು.

ಲಸಿಕೆ ತಗೊಂಡ್ರೆ ಮಕ್ಕಳಾಗಲ್ಲ' ವದಂತಿಗಳಿಂದ ದೊಡ್ಡ ಸಮಸ್ಯೆ

ಆಗಸ್ಟ್ , 1896ರಲ್ಲಿ ಸೈಲ್‌ಹೆಟ್ ಜಿಲ್ಲೆಯಲ್ಲಿ ಶಿವಾನಂದ ಸ್ವಾಮೀಜಿ ಹುಟ್ಟಿದರು. ಇದೀಗ ಸೈಲ್‌ಹೆಟ್ ಜಿಲ್ಲೆ ಬಾಂಗ್ಲಾದೇಶದಲ್ಲಿದೆ. 1979ರಿಂದ ಬಾಬಾ ವಾರಣಾಸಿಯ ಭೆಲಪುರದಲ್ಲಿ ವಾಸಿಸುತ್ತಿದ್ದಾರೆ. ಆಹಾರ ಪದ್ದತಿ , ಯೋಗ, ಧ್ಯಾನದಿಂದ ಸ್ವಾಮೀಜಿ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಈಗಲೂ ಓದು, ಬರಹದಲ್ಲೂ ತೊಡಗಿಸಿಕೊಳ್ಳುತ್ತಾರೆ. 

ಲಸಿಕೆ ಪಡೆದ ಬಳಿಕ 30 ನಿಮಿಷಗಳ ವಿಶ್ರಾಂತಿ ಪಡೆಯಲು ಆರೋಗ್ಯ ಸಿಬ್ಬಂದಿಗಳು ಸೂಚಿಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ ಲವ ಲವಿಕೆಯಿಂದ ಬಾಬಾ ನೋಡಿದ ಸಿಬ್ಬಂದಿಗಳಿಗೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಲಸಿಕೆ ಪಡೆಯಲು ಯಾರೂ ಕೂಡ ಹಿಂದೇಟು ಹಾಕಬಾರದು, ಎಲ್ಲರೂ ಲಸಿಕೆ ಪಡೆಯಬೇಕು ಎಂದು ಶಿವಾನಂದ ಸ್ವಾಮೀಜಿ ಹೇಳಿದ್ದಾರೆ.