Asianet Suvarna News Asianet Suvarna News

Omicron Variant: ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಒಮಿಕ್ರೋನ್‌ ಕರಿನೆರಳು

*  ಜ. 19ರಂದು ನಡೆಯಬೇಕಿರುವ ರಥೋತ್ಸವ
*  ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಗವಿಸಿದ್ಧೇಶ್ವರ ಜಾತ್ರೆ
*  ತಿಂಗಳ ಮೊದಲೇ ನಡೆಯುತ್ತಿದ್ದ ಸಿದ್ಧತೆ
 

Omicron Threat to Gavisiddeshwara Fair in Koppal grg
Author
Bengaluru, First Published Dec 22, 2021, 9:50 AM IST

ಕೊಪ್ಪಳ(ಡಿ.22):  ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳದ(Koppal) ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ(Gavisiddeshwara Fair) ಈ ವರ್ಷವೂ ಕೋವಿಡ್‌ ರೂಪಾಂತರಿ ವೈರಸ್‌ ಒಮಿಕ್ರೋನ್‌(Omicron) ಕರಿನೆರಳು ಬೀಳುವ ಸಾಧ್ಯತೆ ಇದ್ದು ತಯಾರಿಗೆ ಹಿನ್ನಡೆಯಾಗಿದೆ. ಜ. 19ರಂದು ಮಹಾರಥೋತ್ಸವ ನಡೆಯಬೇಕಿದ್ದು ಅಂದಿನಿಂದ ಜಾತ್ರೆ ಹದಿನೈದು ದಿನಗಳ ಕಾಲ ನಿರಂತರವಾಗಿ ನಡೆಯಬೇಕಾಗಿತ್ತು. ನಿತ್ಯವೂ ಲಕ್ಷಾಂತರ ಭಕ್ತರಿಗೆ(Devotees) ಪ್ರಸಾದ ಕಲ್ಪಿಸಲಾಗುತ್ತಿತ್ತು. ರಥೋತ್ಸವ ದಿನದಂದು ಐದಾರು ಲಕ್ಷ ಜನರು ಸೇರುವ ದೊಡ್ಡ ಜಾತ್ರೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಆದರೆ, ಈಗಾಗಲೇ ನಡೆಯಬೇಕಾಗಿದ್ದ ಸಿದ್ಧತೆಗೆ ಒಮಿಕ್ರೋನ್‌ ಅಬ್ಬರದ ಆತಂಕ ಹಿನ್ನಡೆ ಮಾಡಿದೆ.

ತಜ್ಞರ ವರದಿಯ ಪ್ರಕಾರ ಜನವರಿ ವೇಳೆಗೆ ಪ್ರತಿ ನಿತ್ಯವೂ ಲಕ್ಷ ಒಮಿಕ್ರೋನ್‌ ಕೇಸ್‌ಗಳು ಪತ್ತೆಯಾಗುತ್ತವೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ(Government of Karnataka) ಮುನ್ನೆಚ್ಚರಿಕೆ ಕ್ರಮಕೈಗೊಂಡು ನಿರ್ಬಂಧಗಳನ್ನು ಹೇರಿದೆ. ಅಲ್ಲದೆ ಹೊಸ ವರ್ಷ ಆಚರಣೆಗೂ ನಿರ್ಬಂಧ ಹೇರಲು ಮುಂದಾಗಿರುವುದರಿಂದ ಸಹಜವಾಗಿಯೇ ಗವಿಸಿದ್ಧೇಶ್ವರ ಜಾತ್ರೆ ಈ ವರ್ಷವೂ ನಡೆಯುವುದಿಲ್ಲವೇ ಎನ್ನುವ ಆತಂಕ ಎದುರಾಗಿದೆ.

ಕೊಪ್ಪಳ: ಜಾತ್ರೆ ಸಾಕ್ಷೀಕರಿಸಿದ ಲಕ್ಷಾಂತರ ಭಕ್ತರು..!

ಈ ಕುರಿತು ಗವಿಸಿದ್ಧೇಶ್ವರ ಶ್ರೀಗಳು ಈ ವರೆಗೂ ಜಾತ್ರೆ ಮಾಡುವ ಕುರಿತು ಹೇಳಿಕೆ ನೀಡಿಲ್ಲ. ಆದರೆ, ಜಾತ್ರೆಯಲ್ಲಿ ಏನೇನು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎನ್ನುವ ಸೋಶಿಯಲ್‌ ಮಿಡಿಯಾದಲ್ಲಿನ(Social Media) ಚರ್ಚೆಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತೆರೆ ಎಳೆದಿದ್ದರು. ಜಾತ್ರೆ ಆಚರಿಸುವ ಕುರಿತು, ಜಾತ್ರೆಯಲ್ಲಿನ ಕಾರ್ಯಕ್ರಮಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ವದಂತಿಗಳು ಹರಡುವುದು ಬೇಡ. ಈ ಕುರಿತು ಅಂಥ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಮಠದಿಂದಲೇ ಈ ಕುರಿತು ಅಧಿಕೃತ ಪ್ರಕಟಣೆಯನ್ನು ನೀಡುವುದಾಗಿ ಹೇಳಿದ್ದಾರೆ.

ಸಿದ್ಧತೆಗೂ ಹಿನ್ನಡೆ:

ಒಮಿಕ್ರೋನ್‌ ಹೆಚ್ಚಳವಾಗುತ್ತಿರುವುದರಿಂದ ಜಾತ್ರೆಗೆ ಪೂರಕವಾಗಿರುವ ಇತರೆ ಸಿದ್ಧತೆಗೂ ಹಿನ್ನಡೆಯಾಗುತ್ತಿದೆ. ನಾಟಕ ಕಂಪನಿಗಳ ಆಗಮನ, ಜಾತ್ರೆಯಲ್ಲಿ ನಾನಾ ಆಟದ ಕಂಪನಿಗಳು ಸಿದ್ಧತೆ ಮಾಡಿಕೊಳ್ಳುವುದಕ್ಕೂ ಸಮಸ್ಯೆಯಾಗಿದೆ. ಈಗಾಗಲೇ ಈ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಆದರೆ, ಕಳೆದ ಬಾರಿಯೂ ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮಹಾರಥೋತ್ಸವವನ್ನು ಸಾಂಕೇತಿಕವಾಗಿ ಆಚರಣೆ ಮಾಡಲಾಯಿತು. ಆದರೂ ಭಕ್ತರು ನಿರೀಕ್ಷೆ ಮೀರಿ ಸೇರಿದ್ದರು. ಪ್ರಸಾದ ವಿತರಣೆಯನ್ನು ಅತ್ಯಂತ ನಿಯಮಾನುಸಾರ ಮಾಡಲಾಯಿತು. ಹೀಗಾಗಿ, ಈ ಬಾರಿ ಹೇಗೆ ಜಾತ್ರೆಯ ಆಚರಣೆಯಾಗುತ್ತದೆ ಎನ್ನುವುದು ಗವಿಸಿದ್ಧೇಶ್ವರ ಭಕ್ತಾಧಿಗಳ ನಡುವೆ ಚರ್ಚೆಯಾಗುತ್ತಿದೆ. ಗವಿಮಠ ಶ್ರೀಗಳು(Gavimatha Swamiji) ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುತ್ತಿದ್ದಾರೆ.

ಜ. 12ರಂದು ಕೊಪ್ಪಳದ ಕುಂಭಮೇಳ, 15 ಲಕ್ಷ ಭಕ್ತರಿಗೆ ದಾಸೋಹದ ವ್ಯವಸ್ಥೆ

ಯಾತ್ರಿಕರಿಗೆ ಸುಸಜ್ಜಿತ ವಸತಿ ವ್ಯವಸ್ಥೆ

2020 ರಲ್ಲಿ ನಡೆದಿದ್ದ ಜಾತ್ರಾ ಮಹೋತ್ಸವದಲ್ಲಿ ಆಗಮಿಸಿದ್ದ ಭಕ್ತರಿಗೆ ವಾಸ್ತವ್ಯಕ್ಕೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 10 ಸಾವಿರ ಜನರಿಗೆ ಸುಸಜ್ಜಿತ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಾಸ್ತವ್ಯದ ವ್ಯವಸ್ಥೆಯ ಜತೆಗೂ ಮಿತಿಮೀರಿ ಜನಸಂದಣಿಯಾಗುವುದರಿಂದ ಗಲಾಟೆ ಹಾಗೂ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಸಿಸಿ ಕ್ಯಾಮೆರಾಗಳನ್ನು(CC Camera) ಅಳವಡಿಸಲಾಗಿತ್ತು. 

ಕಳೆದ ಬಾರಿ ಕೇವಲ 12 ಸ್ಥಳಗಳಲ್ಲಿ ಮಾಡಲಾಗಿದ್ದ ವ್ಯವಸ್ಥೆಯನ್ನು ಬೇಡಿಕೆಯ ಮೇರೆಗೆ 22 ಸ್ಥಳಗಳಿಗೆ ವಿಸ್ತರಣೆ ಮಾಡಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ಸೇವಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಜಾತ್ರೆಗೆ ಬರುವ ದೂರದೂರಿನ ಯಾತ್ರಿಕರು ಮೊದಲೇ ಮಠದ ಕಚೇರಿಯ ಸಂಖ್ಯೆಗೆ ಕರೆ ಮಾಡಿ, ತಮ್ಮ ವಸತಿಯನ್ನು ನೋಂದಾಯಿಸಿಕೊಳ್ಳಬಹುದಾದ ವ್ಯವಸ್ಥೆಯನ್ನ ಮಾಡಲಾಗಿತ್ತು. ಕಳೆದ ವರ್ಷ 6 ಸಾವಿರ ಜನರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಬಾರಿ ಅದನ್ನು ಹತ್ತು ಸಾವಿರಕ್ಕೆ ಹೆಚ್ಚಳ ಮಾಡಲಾಗಿತ್ತು.
 

Follow Us:
Download App:
  • android
  • ios