Asianet Suvarna News Asianet Suvarna News

Covid Restrictions: ಬಿಹಾರ, ಉತ್ತರ ಪ್ರದೇಶ ಸಂಪೂರ್ಣ ಅನ್‌ಲಾಕ್‌!

* ಕೋವಿಡ್‌ ಇಳಿಮುಖ ಹಿನ್ನೆಲೆ

* ಬಿಹಾರ, ಉತ್ತರ ಪ್ರದೇಶ ಸಂಪೂರ್ಣ ಅನ್‌ಲಾಕ್‌!

* ಮಾಸ್ಕ್‌ ಮತ್ತಿತರೆ ನಿಯಮ ಮಾತ್ರ ಜಾರಿ

Covid Situation Bihar and Uttar Pradesh Are Completely Unlocked pod
Author
Bangalore, First Published Feb 14, 2022, 6:23 AM IST

ಪಟನಾ/ಲಖನೌ(ಫೆ.14): ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ವಿಧಿಸಲಾಗಿದ್ದ ಎಲ್ಲ ಕೋವಿಡ್‌ ನಿರ್ಬಂಧಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.

ಇದೇ ವೇಳೆ, ಕಾಶ್ಮೀರದಲ್ಲಿ 6 ತಿಂಗಳ ನಂತರ ರಾತ್ರಿ ಕಫä್ರ್ಯ ರದ್ದುಗೊಳಿಸಿ, ಸೋಮವಾರದಿಂದ 10, 11 ಹಾಗೂ 12ನೇ ತರಗತಿಯ ಶಾಲೆ/ಕಾಲೇಜು ಆರಂಭಿಸಲಾಗುತ್ತದೆ. ಇನ್ನು ದಿಲ್ಲಿಯಲ್ಲಿ ಸೋಮವಾರದಿಂದ ನರ್ಸರಿಯಿಂದ ಉಳಿದೆಲ್ಲ ತರಗತಿಗಳ ಶಾಲೆಗಳು ಆರಂಭವಾಗಲಿವೆ.

ಬಿಹಾರದಲ್ಲಿ ಸಂಪೂರ್ಣ ತೆರವು:

ಬಿಹಾರದಲ್ಲಿ ಮಾಸ್ಕ್‌ ಧಾರಣೆ ಹಾಗೂ ಸಾಮಾಜಿಕ ಅಂತರದಂಥ ಮಾರ್ಗಸೂಚಿ ಹೊರತುಪಡಿಸಿ ಮಿಕ್ಕೆಲ್ಲ ಕೋವಿಡ್‌ ನಿರ್ಬಂಧಗಳನ್ನು ಸೋಮವಾರದಿಂದ ತೆಗೆದುಹಾಕಲಾಗುತ್ತದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಕಟಿಸಿದ್ದಾರೆ.

‘ರಾಜ್ಯದಲ್ಲಿ ಸೋಮವಾರದಿಂದ ಶಾಲೆಗಳನ್ನು ಸಂಪೂರ್ಣವಾಗಿ ಆರಂಭಿಸಲಾಗುವುದು. ವಿವಾಹ ಹಾಗೂ ಅಂತ್ಯ ಸಂಸ್ಕಾರದಲ್ಲಿ ಹೇರಿದ 200 ಜನರ ಮಿತಿ ತೆಗೆದುಹಾಕಲಾಗುವುದು. ಶಾಪಿಂಗ್‌ ಮಾಲ್‌, ಸಿನಿಮಾ ಮಂದಿರ, ಧಾರ್ಮಿಕ ಸ್ಥಳಗಳು, ಪಾರ್ಕ್ಗಳು, ರೆಸ್ಟೋರಂಟ್‌ಗಳಲ್ಲಿ ಸೇರುವ ಜನರ ಮಿತಿ ತೆಗೆದು ಹಾಕಲಾಗುವುದು’ ಎಂದು ಪ್ರಕಟಿಸಿದ್ದಾರೆ.

ಉ.ಪ್ರ.ದಲ್ಲೂ ನಿಯಮ ಸಡಿಲ:

ಉತ್ತರ ಪ್ರದೇಶದ ಸರ್ಕಾರವೂ ಸೋಮವಾರದಿಂದ ವರ್ಕ್ ಫ್ರಮ್‌ ಹೋಮ್‌ ರದ್ದುಗೊಳಿಸಿ ಪೂರ್ಣ ಪ್ರಮಾಣದಲ್ಲಿ ಕಚೇರಿಗಳನ್ನು ಪುನಾರಂಭಿಸುವುದಾಗಿ ಘೋಷಿಸಿದೆ. ನರ್ಸರಿಯಿಂದ 8ನೇ ತರಗತಿಯವರಿಗೂ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. ಜಿಮ್‌, ಈಜುಕೊಳ, ಹೊಟೇಲ್‌, ಸಿನಿಮಾ ಮಂದಿರಗಳಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಕೋವಿಡ್‌ ಸನ್ನಡತೆ ಪಾಲನೆ ಕಡ್ಡಾಯ ಎಂದಿದೆ. 9ನೇ ತರಗತಿ ನಂತರದ ಪಾಠ-ಪ್ರವಚನಗಳು ಫೆ.7ರಿಂದಲೇ ರಾಜ್ಯದಲ್ಲಿ ಆರಂಭವಾಗಿದ್ದವು.

Follow Us:
Download App:
  • android
  • ios