ಪುರಾತತ್ವ ಸರ್ವೇಕ್ಷಣೆ ವ್ಯಾಪ್ತಿಗೆ ಬರುವ ದೇಶದ ಐತಿಹಾಸಿಕ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಸೇರಿದಂತೆ ಇನ್ನಿತರ ಮಹತ್ವದ ಸ್ಥಳಗಳ ಪ್ರವೇಶವನ್ನು ಮೇ 15ರವರೆಗೆ ಬಂದ್ ಮಾಡಲಾಗಿದೆ. ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ನವದೆಹಲಿ (ಏ.16): ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್‌ಐ) ವ್ಯಾಪ್ತಿಗೆ ಬರುವ ದೇಶದ ಐತಿಹಾಸಿಕ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಸೇರಿದಂತೆ ಇನ್ನಿತರ ಮಹತ್ವದ ಸ್ಥಳಗಳ ಪ್ರವೇಶವನ್ನು ಮೇ 15ರವರೆಗೆ ಬಂದ್ ಮಾಡಲಾಗಿದೆ.
ದೇಶಾದ್ಯಂತ ಭಾರೀ ವೇಗವಾಗಿ ಹಬ್ಬುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಹೇಳಿದೆ.
ಅಮೆರಿಕಾ ಮೀರಿಸಿದ ಭಾರತ : ಒಂದೇ ದಿನ ದಾಖಲೆಯಷ್ಟು ಕೇಸ್ ..
ಕಳೆದ ವರ್ಷವೂ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಐತಿಹಾಸಿಕ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳಿಗೆ ಜನ-ಸಾಮಾನ್ಯರ ಪ್ರವೇಶವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್‌ಐ) ನಿಷೇಧಿಸಿತ್ತು.
