Asianet Suvarna News Asianet Suvarna News

ರಾಜಕಾರಣಿಗಳಿಗೆ ಕೊರೋನಾ ಲೆಟರ್ ಬಾಂಬ್ ಎಚ್ಚರಿಕೆ!

ರಾಜಕಾರಣಿಗಳೆ, ಕೊರೋನಾ ಪತ್ರ ಬಂದೀತು ಹುಷಾರ್‌!| ಕೊರೋನಾ ಬಳಸಿ ರಾಜಕಾರಣಿಗಳನ್ನು ಟಾರ್ಗೆಟ್‌ ಮಾಡುವ ಆತಂಕ| ಜಾಗತಿಕ ಪೊಲೀಸ್‌ ಸಂಘಟನೆ ಇಂಟರ್‌ಪೋಲ್‌ನಿಂದ ಎಚ್ಚರಿಕೆ ಸಂದೇಶ

Covid infected Letters Could Be Used to Target Politicians Interpol Warns of New Threat pod
Author
Bangalore, First Published Nov 21, 2020, 8:33 AM IST

 

ನವದೆಹಲಿ: ರಾಜಕಾರಣಿಗಳೇ... ದಯವಿಟ್ಟು ಗಮನಿಸಿ. ಪತ್ರ ಬಂದಿವೆ ಎಂದು ಕುತೂಹಲದಿಂದ ತೆರೆದು ನೋಡುತ್ತೀರಾ? ಹಾಗಿದ್ದರೆ ಎಚ್ಚರಿ ವಹಿಸಿ. ಅದು ಕೊರೋನಾ ಸೋಂಕು ಹರಡುವ ಪತ್ರವೂ ಆಗಿರಬಹುದು!

ಜಾಗತಿಕ ಪೊಲೀಸ್‌ ಸಂಘಟನೆಯಾಗಿರುವ ಇಂಟರ್‌ಪೋಲ್‌ ಇಂತಹದ್ದೊಂದು ಎಚ್ಚರಿಕೆ ಸಂದೇಶವನ್ನು ಭಾರತ ಸೇರಿದಂತೆ ತನ್ನ 194 ಸದಸ್ಯ ರಾಷ್ಟ್ರಗಳಿಗೆ ಹೊರಡಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ಸೋಂಕು ಒಳಗೊಂಡ ಪತ್ರ ರಾಜಕಾರಣಿಗಳು ಹಾಗೂ ಇನ್ನಿತರೆ ವ್ಯಕ್ತಿಗಳಿಗೆ ರವಾನೆಯಾಗಬಹುದು. ರಾಜಕಾರಣಿಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದಲೇ ಇಂತಹ ಕೃತ್ಯ ನಡೆಯಬಹುದು. ಈಗಾಗಲೇ ಉದ್ದೇಶಪೂರ್ವಕವಾಗಿ ನಿರ್ದಿಷ್ಟಸ್ಥಳಗಳಲ್ಲಿ ಉಗುಳುವ, ಕೆಮ್ಮುವ ಘಟನೆಗಳು ವರದಿಯಾಗಿವೆ. ಜೊತೆಗೆ ಆನ್‌ಲೈನ್‌ನಲ್ಲೇ ಸೋಂಕಿತರ ದೇಹ ದ್ರವ ಮಾರಾಟಕ್ಕಿರುವುದಾಗಿ ಹೇಳಿರುವ ಪ್ರಕರಣ ಕೂಡಾ ಬೆಳಕಿಗೆ ಬಂದಿದೆ ಎಂದು ಇಂಟರ್‌ಪೋಲ್‌ ತಿಳಿಸಿದೆ.

ಆದರೆ ಪತ್ರ ಬರೆದು ಕೊರೋನಾ ಹಬ್ಬಿಸುವ ಯಾವುದಾದರೂ ಪ್ರಕರಣ ಜಗತ್ತಿನಲ್ಲಿ ನಡೆದಿದೆಯೇ ಎಂಬ ಬಗ್ಗೆ ಯಾವುದೇ ನಿದರ್ಶನವನ್ನು ಪ್ರಸ್ತಾಪಿಸಿಲ್ಲ. ಈ ರೀತಿಯ ಕೃತ್ಯಗಳನ್ನು ಯಾರು ಮಾಡಬಹುದು ಎಂಬ ಬಗ್ಗೆಯೂ ಉಲ್ಲೇಖಿಸಿಲ್ಲ ಎಂದು ವರದಿಗಳು ತಿಳಿಸಿವೆ.

ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗಳ ಭದ್ರತೆಗೆ ನಿಯೋಜನೆಗೊಂಡಿರುವ ವ್ಯಕ್ತಿಗಳು ಇಂತಹ ಅಪಾಯಗಳನ್ನು ಅರಿತುಕೊಂಡಿರಬೇಕು. ಯಾವುದಾದರೂ ವ್ಯಕ್ತಿ ಅಸಹಕಾರ ಧೋರಣೆಯಿಂದ ಹತ್ತಿರ ಬಂದರೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಪಿಪಿಇ ಕಿಟ್‌ ಧರಿಸಬೇಕು. ಅಂಚೆ ಇಲಾಖೆ ಹಾಗೂ ಕಚೇರಿಗಳಲ್ಲಿ ಪತ್ರ ವಿಲೇವಾರಿ ಮಾಡುವವರಿಗೆ ಶಂಕಾಸ್ಪದ ಪಾರ್ಸೆಲ್‌ಗಳು ತಂದೊಡ್ಡುವ ಇಂತಹ ಅಪಾಯದ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ಮಾಡಿದೆ.

ಇದಲ್ಲದೆ ಕೊರೋನಾ ಸೋಂಕಿತರು ಬೇಕಂತಲೆ ಕೊರೋನಾ ಪ್ರದೇಶದಿಂದ ಕೊರೋನಾದಿಂದ ಮುಕ್ತವಾಗಿರುವ ಪ್ರದೇಶಗಳಿಗೆ ಹೋಗಬಹುದು. ಆ ಬಗ್ಗೆಯೂ ಎಚ್ಚರಿಕೆ ಇರಬೇಕು ಎಂದು ಹೇಳಿದೆ.

ಕಾನೂನು ಜಾರಿ ಅಧಿಕಾರಿಗಳು, ವೈದ್ಯರು ಹಾಗೂ ಅವಶ್ಯ ಸೇವೆ ಸಿಬ್ಬಂದಿಗಳನ್ನು ಬೆದರಿಸಲು ಅವರ ಮೇಲೆ ಉಗುಳಿದ ಮತ್ತು ಕೆಮ್ಮಿದ ಪ್ರಕರಣಗಳನ್ನು ಇಂಟರ್‌ಪೋಲ್‌ ಪ್ರಸ್ತಾಪಿಸಿದೆ.

ಎಚ್ಚರಿಕೆ ನೀಡಲು ಕಾರಣಗಳು?

- ಅಧಿಕಾರಿಗಳು, ವೈದ್ಯರು, ಅವಶ್ಯ ಸೇವೆ ಸಿಬ್ಬಂದಿ ಬೆದರಿಸಲು ಅವರ ಮೇಲೆ ಉಗುಳಿದ, ಕೆಮ್ಮಿದ ಪ್ರಕರಣ

- ಪತ್ರದ ಮೂಲಕ ಸೋಂಕು ಹಬ್ಬಿಸುವ ಎಚ್ಚರಿಕೆಗಳು ರವಾನೆಯಾಗಿರುವುದು

- ಆನ್‌ಲೈನ್‌ನಲ್ಲೇ ಸೋಂಕಿತರ ದೇಹ ದ್ರವ ಮಾರಾಟಕ್ಕಿರುವುದಾಗಿ ಹೇಳಿಕೊಂಡಿರುವುದು

Follow Us:
Download App:
  • android
  • ios