ಚೆನ್ನೈ(ಏ.26): ಕೋವಿಡ್ -19 ಜನರಲ್ಲಿರುವ ಕೆಟ್ಟದ್ದನ್ನು ಮತ್ತು ಕೆಲವು ಜನರಲ್ಲಿ ಉತ್ತಮವಾದ ಗುಣವನ್ನೂ ಹೊರಗೆ ತಂದಿದೆ. ಕೋವಿಡ್ ಹೀರೋಗಳು ಚಂದಿರಾ ಮತ್ತು ಕರುಣಕರನ್, ಚೆನ್ನೈನ ದಂಪತಿಗಳು ಬಟ್ಟೆ ಮಾಸ್ಕ್‌ ಗಳನ್ನು ಹೊಲಿಯುತ್ತಿದ್ದಾರೆ. ಅವುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಭಾರತದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದಲೂ ಇದನ್ನು ಮಾಡುತ್ತಿದ್ದಾರೆ ಈ ದಂಪತಿ. ಕಳೆದ ವರ್ಷ ಭಾರತದಲ್ಲಿ ಕೋವಿಡ್ -19 ಪ್ರಾರಂಭವಾದಾಗ, ಪ್ರತಿ ವೈದ್ಯರು ಮತ್ತು ಸುದ್ದಿ ವಾಹಿನಿಗಳು ಕೊರೋನವೈರಸ್ ಹರಡುವಿಕೆಯನ್ನು ತಡೆಯಲು ಫೇಸ್ ಮಾಸ್ಕ್ ಸಹಾಯ ಮಾಡುತ್ತದೆ ಎಂದು ಹೇಳಿದ್ದರು. ಪ್ರತಿಯೊಬ್ಬರೂ ಎನ್ -95 ಮಾಸ್ಕ್ ಧರಿಸಿ ಎಂದಿದ್ದರು. ಸಾಧ್ಯವಾಗದಿದ್ದಾಗ ಜನರು ಬಟ್ಟೆಯ ಮಾಸ್ಕ್ ಮೊರೆ ಹೋದರು.

ಕೊರೋನಾದಿಂದ ಸಾವನ್ನಪ್ಪಿದ ಮಹಿಳೆಯರಿಗೆ ಮಯ್ಯತ್‌ ಸ್ನಾನ ಮಾಡಿಸುವ ವುಮನ್‌ ಟೀಂ

ಚಂದಿರಾ ರಫ್ತು ಕಂಪನಿಯೊಂದರಲ್ಲಿ ಹೊಲಿಸುತ್ತಾರೆ. ಆ ಸಮಯದಲ್ಲಿಯೇ ಆಕೆ ತನ್ನ ಖಾಲಿ ಸಮಯವನ್ನು ಬಳಸಲು ನಿರ್ಧರಿಸಿದ್ದಳು. ನನ್ನ ಸುತ್ತಲೂ ಸಾಕಷ್ಟು ಸಣ್ಣ ತುಂಡು ಬಟ್ಟೆಗಳು ಬಿದ್ದಿರುವುದನ್ನು ನಾನು ನೋಡಿದೆ. ಅವೆಲ್ಲವೂ ವ್ಯರ್ಥವಾಗುತ್ತದೆ. ನಾನು ಅವುಗಳನ್ನು ಉತ್ತಮವಾಗಿ ಬಳಕೆಗೆ ತರಲು ನಿರ್ಧರಿಸಿದೆ ಎಂದಿದ್ದಾರೆ ಚಂದಿರಾ.

ನಾನು ಸುತ್ತಲೂ ಬಿದ್ದ ಬಟ್ಟೆ ಎತ್ತಿಕೊಂಡು ಮಾಸ್ಕ್ ಹೊಲಿಯಲು ನಿರ್ಧರಿಸಿದೆ. ಗುಣಮಟ್ಟವಿಲ್ಲ ಎಂದು ಇವುಗಳನ್ನು ತಿರಸ್ಕರಿಸಲಾಗುವುದಿಲ್ಲ. ಈ ಬಟ್ಟೆಯ ತುಂಡುಗಳನ್ನು ಎಕ್ಸ್ಟ್ರಾ ಎಂದು ಸೇರಿಸಲಾಗುತ್ತದೆ. ಹಾಗಿರುವಾಗ ಮಾಸ್ಕ್ ಆಗಿ ಏಕೆ ಬದಲಾಯಿಸಬಾರದು ಎಂಬ ಯೋಚನೆಯ ಪರಿಣಾಮ ಇದು ಎಂದಿದ್ದಾರೆ.

ಮುಖವಾಡಗಳಿಗಾಗಿ ತನ್ನ ಸ್ವಂತ ಹಣದಿಂದ ಇಲಾಸ್ಟಿಕ್ ಖರೀದಿಸುತ್ತೇನೆ. ಮೊದಲಿಗೆ ಚಂದಿರಾ ತನ್ನ ನೆರೆಹೊರೆಯವರಿಗೆ ಮತ್ತು ಸಂಬಂಧಿಕರಿಗೆ ಬಟ್ಟೆ ಮಾಸ್ಕ್ ವಿತರಿಸಿದರು. ಮಾಸ್ಕ್‌ಗೆ ಬೇಡಿಕೆ ಹೆಚ್ಚಾದಾಗ ನಾನು ನನ್ನ ಪತಿ ಕರುಣಕರನ್ ಸಹಾಯವನ್ನು ಪಡೆದುಕೊಂಡೆ. ಅವರು ಆಟೋ ಡ್ರೈವರ್ ಆಗಿದ್ದು, ಪ್ರತಿದಿನ ಹಲವಾರು ಜನರನ್ನು ಭೇಟಿಯಾಗುತ್ತಾರೆ. ಅವರ ಸಹಾಯದಿಂದ ಮಾಸ್ಕ್ ಹೆಚ್ಚಿನ ಜನರನ್ನು ತಲುಪಿತು ಎಂದಿದ್ದಾರೆ.

4 ದಿನದಲ್ಲಿ 13 ಲಕ್ಷ ಕೇಸ್‌, 10,000 ಸಾವು

ನಾನು ಆರಿಸುವ ಮೆಟೀರಿಯಲ್ ಶೇಕಡಾ 100 ರಷ್ಟು ಹತ್ತಿಯದ್ದು ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ಪಾಲಿಸ್ಟರ್, ಲಿನಿನ್ ನಂತಹ ಇತರ ಬಟ್ಟೆಯಲ್ಲಿ ಉಸಿರಾಡಲು ಕಷ್ಟವಾಗುತ್ತದೆ. ನಾನು ಮಾಸ್ಕ್ ಉಚಿತವಾಗಿ ನೀಡಿದ ನಂತರ, ಅನೇಕರು ನನ್ನನ್ನು ಸಂಪರ್ಕಿಸಿ ತಮ್ಮ ಕುಟುಂಬಕ್ಕಾಗಿ ಮಾಸ್ಕ್ ಮಾಡಲು ಕೇಳಿಕೊಂಡರು ಎಂದಿದ್ದಾರೆ ಚಂದಿರಾ.

ನಾವು ಇಲ್ಲಿಯವರೆಗೆ ಎಷ್ಟು ಮಾಸ್ಕ ಹಂಚಿದ್ದೇವೆ ಎಂಬುದನ್ನು ನಾವು ಎಣಿಸಿಲ್ಲ. 500 ಕ್ಕೂ ಹೆಚ್ಚು ಮಾಸ್ಕ್‌ಗಳಾಗಿರಬಹುದು. ಮಾಸ್ಕ್ ಮುಖ್ಯ, ನನ್ನ ಆಟೋದಲ್ಲಿ ಬರುವ ಜನರು ಮಾಸ್ಕ್ ಧರಿಸುತ್ತಾರೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ಅವರು ಅದನ್ನು ಮರೆತರೆ, ನನ್ನ ಹೆಂಡತಿ ಹೊಲಿದ ಮಾಸ್ಕ್ ನೀಡುತ್ತೇನೆ. ನಮ್ಮ ಸಮಾಜಕ್ಕಾಗಿ ನಾವು ಮಾಡಬಹುದಾದ ಚಿಕ್ಕ ಕೆಲಸ ಇದು ಎನ್ನುತ್ತಾರೆ ಚಂದಿರಾ ಪತಿ.